ಬೆಳ್ಳಂಬೆಳಗ್ಗೆ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ: ಇನ್ನೂ ಎರಡು ಚಿರತೆ ಸೆರೆಗೆ ಒತ್ತಾಯ
Tumkurnews
ಚಿಕ್ಕನಾಯಕನಹಳ್ಳಿ: ಕಳೆದ ಮೂರು ತಿಂಗಳಿನಿಂದ ರೈತರಿಗೆ ಆತಂಕ ತಂದಿದ್ದ ಚಿರತೆ ಇಂದು ಸೆರೆಯಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಹೋಬಳಿ ಅಗಸರಹಳ್ಳಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದ ಮೂರು ಚಿರತೆಗಳು ಅಡ್ಡಾಡಿಕೊಂಡಿದ್ದವು. ಇವು ಸುಮಾರು 30ಕ್ಕೂ ಹೆಚ್ಚು ಕುರಿ ಹಾಗೂ ನಾಯಿಗಳನ್ನು ತಿನ್ನುವ ಮೂಲಕ ರೈತರಲ್ಲಿ ಆತಂಕ ಮೂಡಿಸಿದ್ದವು.
ಅಗಸರಹಳ್ಳಿಯಿಂದ ತಿಂಡಿಗಲ್ ಬಾರೆಗೆ ನಿರಾತಂಕವಾಗಿ ಓಡಾಡಿಕೊಂಡಿದ್ದ ಮೂರು ಚಿರತೆಗಳಿಂದಾಗಿ ಜನ ಜಾನುವಾರುಗಳು ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇವುಗಳ ಆತಂಕದಿಂದ ಬೇಸತ್ತಿದ್ದ ರೈತರು ಅರಣ್ಯ ಇಲಾಖೆಗೆ ನೀಡಿದ ದೂರಿನ ಮೇರೆಗೆ ಕಳೆದ ನಾಲ್ಕು ದಿನಗಳ ಹಿಂದೆ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಸುಮಾರು ನಾಲ್ಕರಿಂದ ಐದು ವರ್ಷದ ಚಿರತೆ ಸೆರೆಯಾಗಿದೆ.
ತುಮಕೂರು: 25 ಸಾವಿರ ಬಂಡವಾಳ: ತಿಂಗಳಿಗೆ 3 ಲಕ್ಷ ಆದಾಯ!
ಇನ್ನೂ ಎರಡು ಚಿರತೆಗಳ ಓಡಾಟದಿಂದಾಗಿ ರೈತರು ಆತಂಕದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಉಳಿದ ಚಿರತೆಗಳನ್ನು ಸೆರೆ ಹಿಡಿಯುವಂತೆ ಜನ ಒತ್ತಾಯಿಸಿದ್ದಾರೆ. ವರದಿ: ಚಿದಾನಂದ ಚಿಕ್ಕನಾಯಕನಹಳ್ಳಿ
+ There are no comments
Add yours