ತುಮಕೂರಿಗಿಂತಲೂ ಮಧುಗಿರಿಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗೈರು

1 min read

ತುಮಕೂರು,(ಜೂ.25) tumkurnews.in
ಜಿಲ್ಲೆಯಲ್ಲಿ ಗುರುವಾರ ಆರಂಭವಾದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 993 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಮೊದಲ ದಿನ ದ್ವಿತೀಯ ಭಾಷೆಯಾದ ಇಂಗ್ಲಿಷ್ ಹಾಗೂ ಕನ್ನಡ ವಿಷಯ ಪರೀಕ್ಷೆ ಇತ್ತು, ಈ ಪರೀಕ್ಷೆಗೆ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 21,139 ವಿದ್ಯಾರ್ಥಿಗಳ ಪೈಕಿ 20,733 ಮಂದಿ ಪರೀಕ್ಷೆ ಬರೆದಿದ್ದು, 406 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 13,073 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು, ಇದರಲ್ಲಿ 12,486 ಮಕ್ಕಳು ಪರೀಕ್ಷೆಯ ಬರೆದಿದ್ದು, 587 ಮಕ್ಕಳು ಪರೀಕ್ಷೆಗೆ ಬಂದಿಲ್ಲ.

About The Author

You May Also Like

More From Author

+ There are no comments

Add yours