ಸೊಗಡು ಶಿವಣ್ಣ, ಜೆ.ಸಿ ಮಾಧುಸ್ವಾಮಿ-ಎಚ್.ಡಿ ದೇವೇಗೌಡ ಭೇಟಿ!

1 min read

ಸೊಗಡು ಶಿವಣ್ಣ, ಜೆ.ಸಿ ಮಾಧುಸ್ವಾಮಿ ಜಂಟಿಯಾಗಿ ದೇವೇಗೌಡರ ಭೇಟಿ

Tumkurnews
ತುಮಕೂರು; ಮಾಜಿ ಸಚಿವ ‌ಸೊಗಡು ಶಿವಣ್ಣ ಹಾಗೂ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಬುಧವಾರ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರನ್ನು ಭೇಟಿ ಮಾಡಿದರು.
ಚುನಾವಣೆ ಸಮಯದಲ್ಲಿ ಬಿಜೆಪಿ ಮುಖಂಡರಿಬ್ಬರು ಜೆಡಿಎಸ್ ಪಕ್ಷದ ವರಿಷ್ಠ ನಾಯಕರನ್ನು ಅವರ ಮನೆಗೆ ಹೋಗಿ ಭೇಟಿಯಾಗಿದ್ದು, ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಭೇಟಿ ರಾಜಕೀಯ ಕಾರಣದ್ದಾಗಿರಲಿಲ್ಲ. ಬದಲಾಗಿ ಸಚಿವ ಜೆ.ಸಿ ಮಾಧುಸ್ವಾಮಿ ಅವರ ಮಗಳ ಮದುವೆ ಆಮಂತ್ರಣ ಪತ್ರ ನೀಡಲು ಈ ಇಬ್ಬರು ಮುಖಂಡರು ದೇವೇಗೌಡ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ.

ತುಮಕೂರು; 35 ಸಾವಿರ ಮತದಾರರ ಹೆಸರು ಪಟ್ಟಿಯಿಂದ ಔಟ್!

About The Author

You May Also Like

More From Author

+ There are no comments

Add yours