ಸಿದ್ಧಾರ್ಥ ಆಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಜಾಗೃತಿ ಮಾಸಾಚರಣೆ ಶಿಬಿರ
Tumkurnews
ತುಮಕೂರು: ಸಾರ್ವಜನಿಕರಲ್ಲಿ ಹೆಚ್ಚು ಭಯ ಹುಟ್ಟಿಸಿರುವ ಕ್ಯಾನ್ಸರ್ ರೋಗ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮೇ 2ರಿಂದ 31ರ ತನಕ ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
‘ಭಯಬೇಡ-ಮುಂಜಾಗೃತೆ ಇರಲಿ’ ಎಂಬ ಘೋಷವಾಕ್ಯದೊಂದಿಗೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ
ಕ್ಯಾನ್ಸರ್ ರೋಗವನ್ನು ಗುರುತಿಸುವಿಕೆ ಮಾಸಿಕ ಶಿಬಿರವನ್ನು ಆರಂಭಿಸಲಾಗುತ್ತಿದೆ. ವಾರದ ಎಲ್ಲ ದಿನಗಳಲ್ಲಿಯೂ ತಪಾಸಣೆ ಮತ್ತು ಚಿಕಿತ್ಸೆ ಲಭ್ಯವಿರುತ್ತದೆ. ಅಗತ್ಯ ಸಂದರ್ಭದಲ್ಲಿ ಈ ರೋಗಕ್ಕೆ ಚಿಕಿತ್ಸೆ ತೆಗೆದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ಈ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾನವನ ದೇಹದಲ್ಲಿನ ಚರ್ಮದಲ್ಲಿ ಗಡ್ಡೆ ಅಥವಾ ಊತ, ಮಹಿಳೆಯರ ಸ್ಥನ ಭಾಗದಲ್ಲಿ ಗಡ್ಡೆ, ನಿರಂತರ ವಿವರಿಸಲಾಗದ ನೋವು, ಆಯಾಸ ಮತ್ತು ರಕ್ತಸ್ರಾವ, ನಿರಂತರ ಕೆಮ್ಮು ಅಥವಾ ಕರ್ಕಶತೆ, ಕರುಳಿನ ಅಥವಾ ಮೂತ್ರಕೋಶದಲ್ಲಿನ ನಿರಂತರ ಬದಲಾವಣೆ, ಗಂಟಲಲ್ಲಿ ನುಂಗಲು ತೊಂದರೆ, ವಾಸಿಯಾಗದ ಹುಣ್ಣು ಮತ್ತು ತೂಕದಲ್ಲಿನ ದಿಢೀರ್ ವ್ಯತ್ಯಾಸಗಳ ಕುರಿತು ತಪಾಸಣೆ ನಡೆಸಲಾಗುವುದು.
ಕ್ಯಾನ್ಸರ್’ನ ಚಿಹ್ನೆಗಳು, ರೋಗಲಕ್ಷಣಗಳು ಮತ್ತು ಅಪಾಯದ ಅಂಶಗಳ ಅರಿವು ಮತ್ತು ಆಸ್ಪತ್ರೆಗಳಲ್ಲಿ ಸಹಾಯ ಪಡೆಯಲು ಉಂಟಾಗುವ ಅಡೆತಡೆಗಳು ಕುರಿತು ವೈದ್ಯರನ್ನು ಮುಖಾಮುಖಿಯಾಗಿ ಭೇಟಿಯಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪಪ್ರಾಂಶುಪಾಲರಾದ ಡಾ. ಜಿ.ಎನ್ ಪ್ರಭಾಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಬಿರದಲ್ಲಿ ಪಾಲ್ಗೊಳ್ಳುವವರು 9886858553 ಈ ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.
+ There are no comments
Add yours