ಬಾಣಂತಿ, ಅವಳಿ ಶಿಶುಗಳ ಸಾವು ಪ್ರಕರಣ; ಏಕಪಕ್ಷೀಯ ತನಿಖೆ ಆರೋಪಕ್ಕೆ ಸಚಿವ ಸುಧಾಕರ್ ಖಡಕ್ ಪ್ರತಿಕ್ರಿಯೆ

1 min read

ಬಾಣಂತಿ, ಅವಳಿ ಶಿಶುಗಳ ಸಾವು ಪ್ರಕರಣ; ಏಕಪಕ್ಷೀಯ ತನಿಖೆ ಆರೋಪಕ್ಕೆ ಸಚಿವ ಸುಧಾಕರ್ ಖಡಕ್ ಪ್ರತಿಕ್ರಿಯೆ

Tumkurnews
ತುಮಕೂರು; ನಗರದಲ್ಲಿ ಇತ್ತೀಚೆಗೆ ನಡೆದ ಬಾಣಂತಿ ಮತ್ತು ಅವಳಿ ಮಕ್ಕಳ ಸಾವು ಪ್ರಕರಣದಲ್ಲಿ ಏಕ ಪಕ್ಷೀಯ ಕ್ರಮವಾಗಿದೆ ಎಂಬ ಆರೋಪಿ ವೈದ್ಯೆಯ ಆರೋಪಕ್ಕೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಯಿ ಮತ್ತು ಅವಳಿ ಶಿಶುಗಳ ಸಾವು ಪ್ರಕರಣದಲ್ಲಿ ಏಕಮುಖ ತನಿಖೆ ನಡೆಯುತ್ತಿದೆ ಎಂಬ ಆರೋಪ ಸರಿಯಲ್ಲ‌. ನಾನು ಸಿಸಿ ಕ್ಯಾಮೆರಾ ನೋಡಿದ್ದೇನೆ. ಏಕಮುಖವಾಗಿ ನಿರ್ಧಾರ ತೆಗೆದುಕೊಂಡಿಲ್ಲ. ಅವರು ಓಟಿ(ಆಪರೇಷನ್ ಥಿಯೇಟರ್) ಯಿಂದ ಬಂದಿದ್ದಾರೆ. ಆ ವಿಡಿಯೋ ಫ್ರೇಮ್’ನಲ್ಲಿ ರೋಗಿ ಹಾಗೂ ವೈದ್ಯೆ ಉಷಾ ಇಬ್ಬರೂ ಇದ್ದಾರೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

ಅವಳಿ ಮಕ್ಕಳು, ತಾಯಿ ಸಾವು ಪ್ರಕರಣ; ವೈದೈ, ಮೂವರು ನರ್ಸ್ ಅಮಾನತು

ಕಮಿಷನರ್ ಹಂತದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯ ವರದಿ ಬಳಿಕ ತೀರ್ಮಾನ ಆಗುತ್ತದೆ. ಅಲ್ಲಿಯವರೆಗೂ ಅವರು ಅಮಾನತ್ತಿನಲ್ಲಿರುತ್ತಾರೆ. ಅದೇ ಪರ್ಮನೆಂಟ್ ಸಸ್ಪೆಷನ್ ಅಲ್ಲ. ಅವರು ತಪ್ಪಿತಸ್ಥ ಅಲ್ಲ ಅಂತ ಗೊತ್ತಾದರೆ, ಅವರ ಅಮಾನತ್ತು ವಾಪಸ್ ಆಗುತ್ತದೆ. ತನಿಖೆ ವರದಿ ಶೀಘ್ರದಲ್ಲಿ ಬರಲಿದೆ. ಕೆಲ ಸಿಬ್ಬಂದಿ ವರ್ತನೆಯಿಂದ ಈ ರೀತಿಯಾಗಿದೆ ಎಂಬುದು ಗೊತ್ತಾಗಿದೆ. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ.
ತನಿಖೆಯಲ್ಲಿ ಯಾರ ಮೇಲೆ ಉತ್ತರದಾಯತ್ವ ಅಂತ ಬರುತ್ತದೆಯೋ ಅವರ ಮೇಲೆ ಕ್ರಮವಾಗುತ್ತದೆ ಎಂದು ತಿಳಿಸಿದರು.
10 ಲಕ್ಷ ಡೆಪಾಸಿಟ್; ಮೃತ ಬಾಣಂತಿ ಕಸ್ತೂರಿಯ
ಮೊದಲನೇ ಮಗು ಶಂಕರಿ ಹೆಸರಿನಲ್ಲಿ 10 ಲಕ್ಷ ರೂಪಾಯಿಯನ್ನು ನಮ್ಮ ಇಲಾಖೆಯಿಂದ ಎಫ್.ಡಿ ಮಾಡುತ್ತಿದ್ದೇವೆ ಎಂದು‌ ಮಾಹಿತಿ ನೀಡಿದರು.
ಆಸ್ಪತ್ರೆಗಳಲ್ಲಿ ಸಹಾಯವಾಣಿ; ರೋಗಿಗಳ ನೆರವಿಗೆ ಧಾವಿಸಲು ಜಿಲ್ಲಾಸ್ಪತ್ರೆಗಳಲ್ಲಿ ಸಹಾಯವಾಣಿ ತೆರೆಯಲಾಗುವುದು. ಸಹಾಯವಾಣಿಯಲ್ಲಿ ನಾಲ್ವರು ಸಿಬ್ಬಂದಿ ಕೆಲಸ ಮಾಡಲಿದ್ದಾರೆ ಎಂದು ಡಾ.ಕೆ ಸುಧಾಕರ್ ತಿಳಿಸಿದರು.

ಚಿತ್ರ; ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಬುಧವಾರ ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು.

About The Author

You May Also Like

More From Author

+ There are no comments

Add yours