ರಾಜ್ಯಮಟ್ಟದ ಅಂತರ್ ಕಾಲೇಜು ಮಹಿಳಾ ವಾಲಿಬಾಲ್‍ನಲ್ಲಿ ಎಸ್‍ಎಸ್‍ಐಟಿ ಎಂಜಿನಿಯರಿಂಗ್ ಕಾಲೇಜಿನ ವಾಲಿಬಾಲ್ ತಂಡಕ್ಕೆ ರನ್ನರ್ ಅಪ್
Tumkurnews
ತುಮಕೂರು: ಇತ್ತೀಚೆಗೆ ಬಿ.ಜಿ.ಎಸ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಅಂತರ್ ಕಾಲೇಜು ಮಹಿಳೆಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ನಗರದ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ ಅಪ್ (ದ್ವಿತೀಯ ಸ್ಥಾನ) ಪಡೆದುಕೊಂಡಿದ್ದಾರೆ.
ರನ್ನರ್ ಅಪ್ ಮೂಲಕ ಜಯಗಳಿಸಿ ಪ್ರಶಸ್ತಿ ಹಾಗೂ 3 ಸಾವಿರ ರೂ.ಗಳ ನಗದು ಬಹುಮಾನವನ್ನು ಎಸ್‍ಎಸ್‍ಐಟಿ ಮಹಿಳಾ ವಾಲಿಬಾಲ್ ತಂಡದ ವಿದ್ಯಾರ್ಥಿಗಳು ಸ್ವೀಕರಿಸಿದ್ದಾರೆ.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ.ಎಸ್ ರವಿಪ್ರಕಾಶ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ರುದ್ರೇಶ್, ಡೀನ್ ಅಕಾಡೆಮಿಕ್ ಡಾ. ರೇಣುಕಾಲತಾ, ಡಾ. ಮಂಜುಳಾ, ಐಕ್ಯೂಎಸಿ ಸಂಯೋಜಕ ಡಾ.ರವಿರಾಮ್ ಅವರು ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.
+ There are no comments
Add yours