ಸಿದ್ಧಗಂಗಾ ಮಠದಲ್ಲಿ ಪ್ರವೇಶಾತಿ ಆರಂಭ: ಅರ್ಜಿ ಆಹ್ವಾನ
Tumkurnews
ತುಮಕೂರು: ಅನ್ನ, ಆಹಾರ, ಅಕ್ಷರ ಈ ಮೂರು ಬಗೆಯ ತ್ರಿವಿಧ ದಾಸೋಹಕ್ಕೆ ಹೆಸರಾದ ಸಿದ್ಧಗಂಗಾ ಮಠದಲ್ಲಿ ಪ್ರಸಕ್ತ ಸಾಲಿನ 2024-25ನೇ ವರ್ಷದ ಪ್ರವೇಶಾತಿಗೆ ಅರ್ಜಿ ಕರೆದಿದೆ.
ವಿವರ ಈ ಕೆಳಗಿನಂತೆ ಇದೆ:
ಶ್ರೀಸಿದ್ಧಲಿಂಗೇಶ್ವರ ಅನಾಥಾಲಯದ ಪ್ರವೇಶಕ್ಕೆ ಅರ್ಜಿಗಳನ್ನು ದಿನಾಂಕ 02.05.2024 ರಿಂದ ದಿನಾಂಕ 15.05.2024ರವರೆಗೆ ಕೊಡಲಾಗುವುದು. ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯಕ್ಕೆ ಹೊಸದಾಗಿ 3ನೇ ತರಗತಿಯಿಂದ 6ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶವಿರುತ್ತದೆ. ಗ್ರಾಮೀಣ ಬಡ ಕುಟುಂಬದ ವಿದ್ಯಾರ್ಥಿಗಳು ಖುದ್ದಾಗಿ ಬಂದು ಶ್ರೀಮಠದ ಲೆಕ್ಕಪತ್ರ ವಿಭಾಗದಲ್ಲಿ ಪ್ರವೇಶ ಅರ್ಜಿಯನ್ನು ಪಡೆಯುವುದು. (8ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶವಿರುತ್ತದೆ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಆದ್ಯತೆಯನ್ನು ಕೊಡಲಾಗುವುದು.
ಸರಿಯಾಗಿ ಭರ್ತಿ ಮಾಡಿದ ಪ್ರವೇಶದ ಅರ್ಜಿಯ ಜೊತೆಗೆ ಆಯಾ ತಾಲ್ಲೂಕಿನ ತಹಶೀಲ್ದಾರರಿಂದ ನಿಗದಿತ ನಮೂನೆಯಲ್ಲಿ ಧೃಡೀಕರಿಸಲ್ಪಟ್ಟ ವಿದ್ಯಾರ್ಥಿಯ ವಾರ್ಷಿಕ ವರಮಾನದ ಆದಾಯ ಪ್ರಮಾಣ ಪತ್ರ ಮತ್ತು ಉಳಿದ ಮಾಹಿತಿಯೊಂದಿಗೆ ಪ್ರವೇಶವನ್ನು ಅಪೇಕ್ಷಿಸುವ ವಿದ್ಯಾರ್ಥಿಗಳು ದಿನಾಂಕ 01.06.2024 ರಿಂದ ದಿನಾಂಕ 10.06.2024ರವರೆಗೆ ನಡೆಯುವ ಸಂದರ್ಶನದ ವೇಳೆಯಲ್ಲಿ ಖುದ್ದಾಗಿ ಬಂದು ಅಧ್ಯಕ್ಷರ ಸಂದರ್ಶನವನ್ನು ಪಡೆಯುವುದು. ಪ್ರತ್ಯೇಕವಾದ ಸಂದರ್ಶನದ ಪತ್ರಗಳನ್ನು ಕಳುಹಿಸಿ ಕೊಡಲಾಗುವುದಿಲ್ಲ.
ಅನಾಥಾಲಯದ ಪ್ರವೇಶದ ಅರ್ಜಿಗೆ ಒದಗಿಸಬೇಕಾದ ದಾಖಲೆಗಳು
1) ವಿದ್ಯಾರ್ಥಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ
2) ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ-1
3) ವಿದ್ಯಾರ್ಥಿಯ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ-1 ಪ್ರತ್ಯೇಕವಾಗಿ ಶಾಲೆಯ ಅರ್ಜಿಗೆ ಒದಗಿಸಬೇಕಾದ ಮಾಹಿತಿಗಳು
1) ಶಾಲಾ ಡೈಸ್ ಸಂಖ್ಯೆ
2) ವಿದ್ಯಾರ್ಥಿಯ ಐಡಿ ಸಂಖ್ಯೆ
3) ವಿದ್ಯಾರ್ಥಿಯ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ -2
4) ವಿದ್ಯಾರ್ಥಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ -2
5) ವಿದ್ಯಾರ್ಥಿಯ ಬ್ಯಾಂಕ್ ಖಾತೆ ಜೆರಾಕ್ಸ್ ಪ್ರತಿ -2
6) ತಂದೆ : ತಾಯಿ ಆಧಾರ್ ಕಾರ್ಡ್ ಜೆರಾಕ್ಸ್ ಪತಿ -2
7) ಆಹಾರ ಪಡಿತರ ಕಾರ್ಡ್ ಜೆರಾಕ್ಸ್ ಪ್ರತಿ -2
8) ವಿದ್ಯಾರ್ಥಿಯ ಇತ್ತೀಚಿನ ಬಾವಚಿತ್ರ -3
9) ಮೂಲ ಆನ್ ಲೈನ್ ಟಿ.ಸಿ ಮತ್ತು ಅಂಕಪಟ್ಟಿ (ಜೆರಾಕ್ಸ್ ಪ್ರತಿ-2)
(ಪೋಷಕರು ವಿದ್ಯಾರ್ಥಿಯನ್ನು ಶಾಲೆಗೆ ದಾಖಲಾತಿ ಮಾಡಲು ಬರುವಾಗ ಕಡ್ಡಾಯವಾಗಿ ಮೇಲ್ಕಂಡ ಮಾಹಿತಿಯ ಜೆರಾಕ್ಸ್ ಪ್ರತಿಗಳನ್ನು ತಪ್ಪದೆ ಜೊತೆಯಲ್ಲಿ ತರುವುದು)
ಆನ್ ಲೈನ್’ನಲ್ಲಿ (Online) ಪ್ರವೇಶದ ಅರ್ಜಿಯನ್ನು ಪಡೆಯಲು ಅವಕಾಶವಿರುದಿಲ್ಲ.
+ There are no comments
Add yours