ಸಾರ್ವಜನಿಕರು 10 ರೂ. ನಾಣ್ಯಗಳನ್ನು ನಿರಾಕರಿಸುವಂತಿಲ್ಲ: ಜಿಲ್ಲಾಧಿಕಾರಿ

1 min read

 

ಸಾರ್ವಜನಿಕರು 10 ರೂ. ನಾಣ್ಯಗಳನ್ನು ವ್ಯವಹಾರದಲ್ಲಿ‌ ಸ್ವೀಕರಿಸಬೇಕು: ಜಿಲ್ಲಾಧಿಕಾರಿ

Tumkurnews
ತುಮಕೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಿ ಚಲಾವಣೆಗೆ ತಂದಿರುವ ಹತ್ತು ರೂಪಾಯಿ ನಾಣ್ಯಗಳನ್ನು ಸಾರ್ವಜನಿಕರು, ವರ್ತಕರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಯಾವುದೇ ಅನುಮಾನವಿಲ್ಲದೇ ದಿನನಿತ್ಯದ ವಹಿವಾಟಿನಲ್ಲಿ ಸ್ವೀಕರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಆದೇಶಿಸಿದ್ದಾರೆ.
ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಹತ್ತು ರೂಪಾಯಿಯ ನಾಣ್ಯವನ್ನು ಎಲ್ಲರೂ ನಿರಾತಂಕವಾಗಿ ವ್ಯವಹಾರದಲ್ಲಿ ಬಳಸಬಹುದು. ಹತ್ತು ರೂಪಾಯಿಯ‌ ನಾಣ್ಯಗಳ ಬಳಕೆಯನ್ನು ಆರ್.ಬಿ.ಐ ಹಿಂಪಡೆದಿಲ್ಲವಾದ್ದರಿಂದ ಇದರ ಕುರಿತಾದ ಸುಳ್ಳು ಸುದ್ದಿಗಳನ್ನು, ವದಂತಿಗಳನ್ನು ನಂಬದಿರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಜಿಲ್ಲಾಧಿಕಾರಿಗಳು ಹತ್ತು ರೂಪಾಯಿಯ ನಾಣ್ಯಗಳ ಬಳಕೆಯಿಂದಾಗಿ ಸಾಕಷ್ಟು ಚಿಲ್ಲರೆ ಸಮಸ್ಯೆ ನೀಗುವುದರ ಜೊತೆಗೆ ಬಳಸದೇ ಇರುವ ನಾಣ್ಯಗಳಿಂದಾಗಿ ಸಾಕಷ್ಟು ಮೊತ್ತದ ಹಣ‌ ದಿನನಿತ್ಯದ ವ್ಯವಹಾರಕ್ಕೆ ಚಲಾವಣೆಯಾಗದೇ ನಿಂತ ನೀರಿನಂತಾಗಿ ಆರ್ಥಿಕ ಅಭಿವೃದ್ಧಿಗೆ ತೊಡಕಾಗುತ್ತದೆ. ಆದ್ದರಿಂದ ಈ ಕೂಡಲೇ ‌10 ರೂಪಾಯಿಯ ನಾಣ್ಯಗಳನ್ನು, ಚಲಾವಣೆಯಲ್ಲಿರುವ ಇತರೆ ಕರೆನ್ಸಿ ಅಥವಾ ನಾಣ್ಯಗಳಂತೆಯೇ ಪರಿಗಣಿಸಿ ಸ್ವೀಕರಿಸಬೇಕು ಎಂದು ಆದೇಶಿಸಿದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್‌ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ಅರ್.ಬಿ.ಐ ಹತ್ತು ರೂಪಾಯಿಯ‌ ನಾಣ್ಯಗಳನ್ನು ಚಲಾವಣೆಯಿಂದ‌ ಹಿಂಪಡೆದಿಲ್ಲ, ಅವು ಶಾಸನಬದ್ದವಾಗಿರುವುದರಿಂದ ಎಲ್ಲರೂ ಅದನ್ನು ಬಳಸಬೇಕೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಸಾರ್ವಜನಿಕರಲ್ಲಿ ಸಾಕಷ್ಟು ಬಾರಿ ಜಾಗೃತಿಯನ್ನುಂಟು ಮಾಡಿದ್ದರೂ ಸಹ ಈಗಲೂ ಅವುಗಳನ್ನು ಸ್ವೀಕರಿಸುವ ಬಗ್ಗೆ ಅನುಮಾನಿಸುತ್ತಿರುವುದು ಸರಿಯಲ್ಲ. ಈ‌ ಬಗ್ಗೆ ಅನಗತ್ಯ ವದಂತಿಗಳಿಗೆ ಕಿವಿಕೊಡದೇ ಆರ್.ಬಿ.ಐ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಾರ್ವಜನಿಕರು ತಮ್ಮ‌ ವಹಿವಾಟಿನಲ್ಲಿ ಹತ್ತು ರೂಪಾಯಿಯ ನಾಣ್ಯಗಳನ್ನು ಕಾನೂನುಬದ್ದವಾಗಿ ಸ್ವೀಕರಿಸುವುದನ್ನು ಮುಂದುವರೆಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಬಿಜೆಪಿ-ಜೆಡಿಎಸ್ ಮೈತ್ರಿ: ತುಮಕೂರಿನಲ್ಲಿ ಆರಂಭದಲ್ಲೇ ಅಪಸ್ವರ: ದೇವೇಗೌಡರ ಸ್ಪರ್ಧೆಗೆ ವಿರೋಧ

About The Author

You May Also Like

More From Author

+ There are no comments

Add yours