ಗಳಿಗೆನಹಳ್ಳಿ, ದೊಡ್ಡಸಾರಂಗಿ ಕೆರೆಗಳಿಗೆ ಹರಿಯಲಿದೆ ಹೇಮಾವತಿ ನೀರು
1 ಕೋಟಿ ರೂ. ಪೈಪ್‌ಲೈನ್ ಕಾಮಗಾರಿಗೆ ಶಾಸಕ ಬಿ. ಸುರೇಶ್‌ಗೌಡ ಚಾಲನೆ
Tumkurnews.in
ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗಳಿಗೆನಹಳ್ಳಿ ಹಾಗೂ ದೊಡ್ಡಸಾರಂಗಿ ಕೆರೆಗಳಿಗೆ ಹೇಮಾವತಿ ನಾಲೆಯ ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆಯಡಿ ನೀರು ಹರಿಸುವ ಪೈಪ್‌ಲೈನ್ ಕಾಮಗಾರಿಗೆ ಶಾಸಕ ಬಿ. ಸುರೇಶ್‌ಗೌಡ ಬುಧವಾರ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಭಾಗದ ಗ್ರಾಮಸ್ಥರ ಬಹುವರ್ಷಗಳ ಕುಡಿಯುವ ನೀರಿನ ಬೇಡಿಕೆಗೆ ಇದೀಗ ಸ್ಪಂದನೆ ದೊರೆತಿದ್ದು, ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಅಂತರ್ಜಲ ಮಟ್ಟವೂ ಸುಧಾರಿಸಲಿದೆ. ಇದರಿಂದ ಸಂತಸಗೊಂಡ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿ ಅಭಿನಂದಿಸಿದರು.
ಕಾವೇರಿ ನೀರಾವರಿ ನಿಗಮದ ವತಿಯಿಂದ ದೊಡ್ಡಸಾರಂಗಿ ಹಾಗೂ ಗಳಿಗೆನಹಳ್ಳಿ ಕೆರೆಗಳಿಗೆ ನೀರು ಹರಿಸಲು ಹೊಸದಾಗಿ ಪೈಪ್‌ಲೈನ್ ಅಳವಡಿಸಲಾಗುತ್ತಿದ್ದು, ಇದಕ್ಕಾಗಿ 1 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಗುಳೂರು ಶಿವಕುಮಾರ್, ಸಿದ್ದೇಗೌಡ, ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೊಡ್ಡಸಾರಂಗಿ ಶಂಕರಣ್ಣ, ಗಳಿಗೆನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಗಂಗಯ್ಯ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಮಾಜಿ ಸದಸ್ಯ ಶೇಷಕುಮಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಂಗಸ್ವಾಮಿ, ರಾಜಣ್ಣ, ಮುಖಂಡರಾದ ಬೆಟ್ಟೇಗೌಡ, ಸತೀಶ್, ಸುರೇಶ್, ಗಿರೀಶ್, ಅಣ್ಣಿ, ಸುಜಾತ, ಮಂಜುಳಾ, ಲಕ್ಷ್ಮಮ್ಮ ಹಾಗೂ ಇಲಾಖೆಯ ಎಂಜಿನಿಯರ್‌ಗಳಾದ ಹೆಚ್.ಎನ್. ಪ್ರಭಾಕರ್, ಹನುಮಂತ ನಾಯಕ ಸೇರಿದಂತೆ ಎರಡೂ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.
