ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಶ್ವ ಅರಿವಳಿಕೆ ದಿನಾಚರಣೆ
tumkurnews.in
ತುಮಕೂರು: ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಅರಿವಳಿಕೆ ಶಾಸ್ತ್ರ ವಿಭಾಗದ ವತಿಯಿಂದ 180ನೇ ವಿಶ್ವ ಅರಿವಳಿಕೆ ದಿನಾಚರಣೆ ಹಾಗೂ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕ್ಯಾಂಪಸ್‌ನ ನಾಗಾರ್ಜುನ ಸಭಾಂಗಣದಲ್ಲಿ ಏರ್ಪಟ್ಟ ಕಾರ್ಯಕ್ರಮವನ್ನು ಸಾಹೇ ವಿವಿ ಕಲುಪತಿ ಡಾ.ಲಿಂಗೇಗೌಡ ಜ್ಯೋತಿ ಬೆಳಗಿಸುವ ಉದ್ಘಾಟಿಸಿ, ಅರಿವಳಿಕೆ ತಜ್ಞರ ಪಾತ್ರವು ಕೇವಲ ಶಸ್ತ್ರಚಿಕಿತ್ಸಾ ಕೊಠಡಿಗೆ ಸೀಮಿತವಾಗಿರದೆ, ರೋಗಿಯ ಶಸ್ತ್ರಚಿಕಿತ್ಸೆಗೂ ಮುನ್ನದ ಮೌಲ್ಯಮಾಪನ, ಶಸ್ತ್ರಚಿಕಿತ್ಸೆಯ ಸಮಯದ ಆರೈಕೆ, ತೀವ್ರ ನಿಗಾ ಚಿಕಿತ್ಸೆ, ನೋವು ನಿರ್ವಹಣೆ ಹಾಗೂ ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆ ಸೇರಿದಂತೆ ರೋಗಿಯ ಸಂಪೂರ್ಣ ಚಿಕಿತ್ಸಾ ಪಯಣದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದರು.
ಅರಿವಳಿಕೆ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಸ್. ಬಿ. ಗಂಗಾಧರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಖ್ಯಾತ ಅರಿವಳಿಕೆ ತಜ್ಞರು ಹಾಗೂ ಹಿರಿಯ ವೈದ್ಯರು ಭಾಗವಹಿಸಿ ಆಧುನಿಕ ಅರಿವಳಿಕೆ ಚಿಕಿತ್ಸೆಯ ವಿವಿಧ ಆಯಾಮಗಳ ಕುರಿತು ಮೌಲ್ಯಯುತ ಉಪನ್ಯಾಸಗಳನ್ನು ನೀಡಿದರು. ತಜ್ಞರು ತಮ್ಮ ಕ್ಲಿನಿಕಲ್ ಅನುಭವ, ನವೀನ ಚಿಕಿತ್ಸಾ ವಿಧಾನಗಳು ಹಾಗೂ ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿನ ಬೆಳವಣಿಗೆಗಳ ಕುರಿತು ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಾಹೇ ವಿವಿಯ ಕುಲಸಚಿವರಾದ ಡಾ. ಅಶೋಕ್ ಮೆಹತಾ, ಪ್ರಾಂಶುಪಾಲರಾದ ಡಾ. ಸಾಣಿಕೊಪ್ಪ, ಉಪ ಪಾಂಶುಪಾಲರಾದ ಡಾ, ಪಭಾಕರ್, ಪರೀಕ್ಷಾಂಗ ನಿಯಂತ್ರಕರಾದ ಡಾ. ಸುನಿಲ್ ಕೆ., ಸಿಇಓ ಡಾ. ಕಿರಣ್ ಕುಮಾರ್, ವೈದ್ಯಕೀಯ ಅಧೀಕ್ಷಕರುಗಳಾದ ಡಾ.ವೆಂಕಟೇಶ್ ಹಾಗೂ ಡಾ. ರಾಜೇಶ್ವರಿ ದೇವಿ,ಬೋಧಕ ಸಿಬ್ಬಂದಿ, ಆಸ್ಪತ್ರೆಯ ಸಿಬ್ಬಂದಿ ಹಾಗೂ ಅರಿವಳಿಕೆ ಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ವೈದ್ಯಕೀಯ ವೃತ್ತಿಪರರು ಭಾಗವಹಿಸಿದ ಈ ಕಾರ್ಯಕ್ರಮವೂ ಜ್ಞಾನ ವಿನಿಮಯ, ಶೈಕ್ಷಣಿಕ ಸಂವಾದ ಹಾಗೂ ಆಧುನಿಕ ಅರಿವಳಿಕೆ ಮತ್ತು ಪೆರಿಆಪರೇಟಿವ್ ಮೆಡಿಸಿನ್ ಕ್ಷೇತ್ರದ ಪ್ರಗತಿಗಳ ಕುರಿತು ಚರ್ಚೆಗೆ ಉತ್ತಮ ವೇದಿಕೆಯಾಯಿತು. ಕೇಕ್ ಕತ್ತರಿ ವಿಶ್ವ ಅರಿವಳಿಕೆ ದಿನದವನ್ನು ಆಚರಿಸಲಾಯಿತು.
What do you feel about this post?
Like
Love
Happy
Haha
Sad
