ಹುಳಿಯಾರು: ಬೈಕ್‌ಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ; ಜಾಲಿ ರೈಡ್‌ ಹೊರಟಿದ್ದ ಯುವತಿ ಸೇರಿದಂತೆ ಇಬ್ಬರು ದರ‍್ಮರಣ

ಜಿಲ್ಲಾ ಸುದ್ದಿ ತಾಲ್ಲೂಕು ಪ್ರಮುಖ ಸುದ್ದಿ 🫆 ಕ್ರೈಮ್

ಹುಳಿಯಾರು: ಬೈಕ್‌ಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ; ಜಾಲಿ ರೈಡ್‌ ಹೊರಟಿದ್ದ ಯುವತಿ ಸೇರಿದಂತೆ ಇಬ್ಬರು ದರ‍್ಮರಣ

ಹುಳಿಯಾರು: ದಸರಾ ರಜೆಯ ಖುಷಿಯಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ಯುವಕ ಹಾಗೂ ಮತ್ತರ‍್ವ ಯುವತಿ ಬೈಕ್‌ನಲ್ಲಿ ಜಾಲಿ ರೈಡ್‌ ತೆರಳಿದ್ದ ವೇಳೆ ಸಂಭವಿಸಿದ ಭೀಕರ ಮುಖಾಮುಖಿ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹುಳಿಯಾರು ಸಮೀಪದ ಕಂಪನಹಳ್ಳಿ ಬಳಿ ಸಂಭವಿಸಿದೆ.

ಮೃತರ ವಿವರ:ಈ ಅಪಘಾತದಲ್ಲಿ ಹುಳಿಯಾರಿನ ಯೋಶಿನಿ (೧೬) ಹಾಗೂ ಭದ್ರಾವತಿಯ ಭರತ್ (೨೧) ಪ್ರಾಣ ಕಳೆದುಕೊಂಡ ದರ‍್ದೈವಿಗಳು.

ಘಟನೆಯ ವಿವರ: ದಸರಾ ಕಾಲೇಜು ರಜೆ ನಿಮಿತ್ತ ಭದ್ರಾವತಿಯಿಂದ ಭರತ್ ಹುಳಿಯಾರಿನಲ್ಲಿರುವ ತನ್ನ ಸಂಬಂಧಿಕರಾದ ಯೋಶಿನಿ ಅವರ ಮನೆಗೆ ಬಂದಿದ್ದನು. ಸಂಜೆ ವೇಳೆ ಇಬ್ಬರೂ ಸೇರಿ ಬೈಕ್‌ನಲ್ಲಿ ಹೊರ ಸುತ್ತಾಟಕ್ಕೆ (ಜಾಲಿ ರೈಡ್‌) ತೆರಳಿದ್ದರು. ಈ ವೇಳೆ ಬೈಕ್ ಸವಾರನ ನಿಯಂತ್ರಣ ತಪ್ಪಿ, ಕಾರೇಹಳ್ಳಿ ಕಡೆಯಿಂದ ಹುಳಿಯಾರಿಗೆ ಬರುತ್ತಿದ್ದ ಮತ್ತೊಂದು ಬೈಕಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.

ತೀವ್ರ ಗಾಯಗೊಂಡ ಇತರರು: ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಯೋಶಿನಿ ಹಾಗೂ ಭರತ್ ಇಬ್ಬರ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಮತ್ತೊಂದು ಬೈಕ್‌ನಲ್ಲಿದ್ದ ಕಾರೇಹಳ್ಳಿಯ ರಂಗನಾಥ್ ಹಾಗೂ ರೇವಣ್ಣ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಹುಳಿಯಾರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಸರಾ ರಜೆ ಕಳೆಯಲು ಬಂದಿದ್ದ ಯುವಕ-ಯುವತಿ ದರ‍್ಮರಣಕ್ಕೀಡಾಗಿರುವುದು ಸ್ಥಳದಲ್ಲಿ ಮೌನ ಮೂಡಿಸಿದೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *