cool hit counter

ತುಮಕೂರು: ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ಗಣೇಶೋತ್ಸವ; ಹಿರಿಯ ನಟ ಶ್ರೀನಾಥ್ ಭಾಗಿ

Tumkur News
Tumkur News
Ashok R.P. is a passionate journalist and media professional known for his dedication to truthful, people-centric reporting. With a keen interest in regional news, public issues,...
2 Min Read
Spread the love

ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ಗಣೇಶೋತ್ಸವ; ಹಿರಿಯ ನಟ ಶ್ರೀನಾಥ್ ಭಾಗಿ

ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯಿಂದ 50ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ನಟ ಶ್ರೀನಾಥ್ ಭಾಗವಹಿಸಿದರು.

Tumkurnews.in
ತುಮಕೂರು: ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹ, ಪ್ರೀತಿ ಉಸಿರಾಗಿರಬೇಕು. ಉಸಿರು ಇರುವವರೆಗೂ ಸ್ನೇಹ ಜೀವಂತವಾಗಿರಬೇಕು ಎಂದು ಹಿರಿಯ ನಟ ಶ್ರೀನಾಥ್ ಹೇಳಿದರು.
ನಗರದ ವಿನಾಯಕ ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 50ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಡಳಿಯ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲ್ಲಿ ನಾವೆಲ್ಲರೂ ಪಯಣ ಮಾಡುತ್ತಿದ್ದೇವೆ. ಸ್ನೇಹ ನಮ್ಮೆಲ್ಲರ ಜೀವನದ ಅವಿಭಾಜ್ಯವಾಗಬೇಕು. ಪ್ರತಿಯೊಬ್ಬರೂ ಪರಸ್ಪರ ಸ್ನೇಹ, ಪ್ರೀತಿ, ವಿಶ್ವಾಸದಿಂದ ಬಾಳ್ವೆ ನಡೆಸಿದರೆ ಸಮಾಜ ಸುಭಿಕ್ಷವಾಗಿರುತ್ತದೆ. ಆದ್ದರಿಂದ ನಾವೆಲ್ಲರೂ ಪ್ರೀತಿ, ವಿಶ್ವಾಸದಿಂದ ಬದುಕು ನಡೆಸೋಣ ಎಂದರು.
ಮನುಷ್ಯನಿಗೆ ಆಸೆ ಇರಬೇಕು, ದುರಾಸೆ ಇರಬಾರದು. ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.
ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ 50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ನಾನು ಇಂದು ಭಾಗಿಯಾಗಿದ್ದೇನೆ. ಮುಂದೆ 75ನೇ ವರ್ಷದ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಇಷ್ಟು ವರ್ಷಗಳಲ್ಲಿ ಕರ್ನಾಟಕದ ಜನತೆಯ ಪ್ರೀತಿ, ವಿಶ್ವಾಸವನ್ನು ಸಂಪಾದನೆ ಮಾಡಿದ್ದೇನೆ. ಇನ್ನು ಅವರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಮಾಡುತ್ತೇನೆ. ಮುಂದೆಯೂ ನನಗೆ ರಾಜ್ಯದ ಜನತೆಯ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದ ಬೇಕು ಎಂದು ಅವರು ಹೇಳಿದರು.
ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. ಈ ಮಂಡಳಿಯನ್ನು ನಾನು ಸಿದ್ದಿವಿನಾಯಕ ಸ್ನೇಹ ಮಂಡಳಿ ಎಂದು ನನ್ನ ಮನಸ್ಸಿನಲ್ಲಿ ಭಾವಿಸಿಕೊಂಡಿದ್ದೇನೆ. ಸಿದ್ದಿವಿನಾಯಕ ಸೇವಾ ಮಂಡಳಿಯ ಕಾರ್ಯಕ್ರಮಕ್ಕೆ ಬಂದರೆ ನನಗೆ ಮನೆಯ ವಾತಾವರಣ ಭಾಸವಾಗುತ್ತದೆ ಎಂದರು.
ಶ್ರೀ ಸಿದ್ದಿವಿನಾಯಕ ಸೇವಾ ಮಂಡಲಿಯ ಅಧ್ಯಕ್ಷ ಪ್ರಭು ಮಾತನಾಡಿ, ನಾವು ಚಿಕ್ಕವರಿದ್ದಾಗಲೂ ಹಿರಿಯ ನಟ ಶ್ರೀನಾಥ್ ರವರನ್ನು ಸಿನಿಮಾಗಳಲ್ಲಿ ನೋಡುತ್ತಾ ಬಂದಿದ್ದೇವೆ. ಅವರ ಸಿನಿಮಾಗಳ ಹಾಡು, ಸಾಹಿತ್ಯಗಳು ಇಂದಿನ ಸಿನಿಮಾಗಳಲ್ಲಿ ಕಂಡು ಬರುತ್ತಿಲ್ಲ ಎಂದರು.
ನಮ್ಮ ಮಂಡಲಿಯ ಕಾರ್ಯಕ್ರಮಗಳಿಗೆ ಹಿರಿಯ ನಟ ಶ್ರೀನಾಥ್ ರವರು ಬಂದು ಭಾಗವಹಿಸಿ ವಿಘ್ನೇಶ್ವರ ಆಶೀರ್ವಾದ ಪಡೆದು ಹೋಗುತ್ತಾರೆ. ಅವರು ಇನ್ನು ನೂರು ಕಾಲ ಬಾಳಿ ಬದುಕಲಿ. ಗಣಪತಿ ಅವರಿಗೆ ಆಯುರ್ ಆರೋಗ್ಯ ದಯಪಾಲಿಸಲಿ ಎಂದರು.
ನಮ್ಮ ಸೇವಾ ಮಂಡಳಿಯ ಕಾರ್ಯಕ್ರಮಗಳಿಗೆ ಅವರು ತಪ್ಪದೇ ಬರುತ್ತಾರೆ. ಮುಂದೆಯೂ ಹೀಗೆ ಬರುತ್ತಿರಲಿ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ನಟ ಶ್ರೀನಾಥ್ ಅವರು ಸಿನಿಮಾ ಹಾಡಿಗೆ ಹೆಜ್ಜೆ ಹಾಕು ಮೂಲಕ ನೆರೆದಿದ್ದ ಪ್ರೇಕ್ಷಕರು, ಭಕ್ತಾದಿಗಳು ಹಾಗೂ ಅಭಿಮಾನಿಗಳನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯ ಅಧ್ಯಕ್ಷ ಪ್ರಭು, ಉಪಾಧ್ಯಕ್ಷ ಟಿ.ಹೆಚ್. ಪ್ರಸನ್ನಕುಮಾರ್, ಕಾರ್ಯದರ್ಶಿ ಜಿ.ಎಸ್. ಸಿದ್ದರಾಜು, ಸಹ ಕಾರ್ಯದರ್ಶಿ ಕಲ್ಯಾಣ್‌ಕುಮಾರ್, ಖಜಾಂಚಿ ಎಂ.ಎನ್. ಉಮಾಶಂಕರ್, ಪ್ರಚಾರ ಸಮಿತಿಯ ರೇಣುಕ ಪರಮೇಶ್, ನಿರ್ದೇಶಕರುಗಳಾದ ನಿರ್ದೇಶಕರಾದ ರಾಘವೇಂದ್ರ, ಕೆ. ನರಸಿಂಹಮೂರ್ತಿ, ಜಿ.ಸಿ.ವಿರೂಪಾಕ್ಷ, ಡಾ.ಅನುಸೂಯ ರುದ್ರಪ್ರಸಾದ್, ಜಗಜ್ಯೋತಿ ಸಿದ್ದರಾಮಯ್ಯ, ಟಿ.ಹೆಚ್. ಮಹೇಶ್, ಪದ್ಮರಾಜು ಟಿ.ಕೆ., ಹೆಚ್.ಆರ್. ನಾಗೇಶ್, ಟಿ.ಆರ್. ನಟರಾಜು, ಇಂದ್ರಾಣಿ ಪ್ರಕಾಶ್, ಆದರ್ಶ, ಸುರೇಶ್‌ಕುಮಾರ್, ಟಿ.ಎಂ. ಕುಮಾರಸ್ವಾಮಿ, ಎ.ಆರ್. ಶ್ರೀನಾಥ್, ಜಿ.ಸಿ. ಬಸವರಾಜು, ಚಿಕ್ಕಣ್ಣ, ಕೋರಿ ಮಂಜುನಾಥ್, ಆಡಿಟರ್ ಆಂಜಿನಪ್ಪ, ಬಾವಿಕಟ್ಟೆ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Share This Article
Follow:
Ashok R.P. is a passionate journalist and media professional known for his dedication to truthful, people-centric reporting. With a keen interest in regional news, public issues, politics, social developments, and ground-level reporting, he has built a reputation for delivering accurate and impactful stories that connect with the common people. He actively covers current affairs, civic issues, crime reports, political events, cultural programs, and human-interest stories with a commitment to ethical journalism. His reporting style focuses on clarity, credibility, and public awareness, making his work relatable and informative to readers across Karnataka. Ashok R.P. believes journalism is a powerful medium to raise public voice and strengthen democracy through responsible reporting and factual storytelling. Special Interests: * Regional & Political News * Public Interest Stories * Social Awareness Reporting * Ground Reality Journalism * Digital Media & News Publishing
Leave a Comment