DK SHIVAKUMAR – ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ: ಡಿಕೆ ಶಿವಕುಮಾರ್‌ಗೆ ಜಾತಿ ಸಮೀಕರಣವೇ ದೊಡ್ಡ ಪರೀಕ್ಷೆ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ D. K. Shivakumar ಅವರ ಮುಂದಿರುವ ರಾಜಕೀಯ ಸವಾಲುಗಳ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ. ಸಂಘಟನಾ ಸಾಮರ್ಥ್ಯ, ಚುನಾವಣೆ ನಿರ್ವಹಣೆ ಹಾಗೂ ಪಕ್ಷ ಕಟ್ಟುವ ಶಕ್ತಿಯಲ್ಲಿ ಮುಂಚೂಣಿಯಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಕ್ಕರೂ, ರಾಜ್ಯದ ಜಾತಿ ಸಮೀಕರಣವನ್ನು ಸಮತೋಲನದಲ್ಲಿ ಇಡುವುದು ಸುಲಭದ ಕೆಲಸವಲ್ಲ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಸಿದ್ದರಾಮಯ್ಯ ಅಹಿಂದ ಮಾದರಿ ಮತ್ತೆ ಸಾಧ್ಯವೇ? 2013 ಮತ್ತು […]

Continue Reading

ನನ್ನ ರಾಜೀನಾಮೆ ಸಿ.ಎಂ ಹುದ್ದೆಗೆ ಮಾತ್ರ, ಜನಸೇವೆಗೆ ಅಲ್ಲ” : ಸಿದ್ದರಾಮಯ್ಯ ಭಾವನಾತ್ಮಕ ನುಡಿ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಕುರಿತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಮಧ್ಯೆ ಮಾಜಿ ಮುಖ್ಯಮಂತ್ರಿ Siddaramaiah ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ, “ನನ್ನ ರಾಜೀನಾಮೆ ಮುಖ್ಯಮಂತ್ರಿಯ ಹುದ್ದೆಗೆ ಮಾತ್ರ, ಜನಸೇವೆಗೆ ಅಲ್ಲ” ಎಂದು ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಅಧಿಕಾರ ಬದಲಾವಣೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ಅವರು ಈ ಮಾತುಗಳನ್ನು ಆಡಿದ್ದು, ಕಾಂಗ್ರೆಸ್ ಪಕ್ಷದ ತೀರ್ಮಾನಕ್ಕೆ ತಾವು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. “ಜನರು ನನಗೆ ನೀಡಿದ ಪ್ರೀತಿ, ಆಶೀರ್ವಾದ ಹಾಗೂ ವಿಶ್ವಾಸವನ್ನು ನಾನು ಎಂದಿಗೂ ಮರೆಯುವುದಿಲ್ಲ. ಹುದ್ದೆಗಳು ಶಾಶ್ವತವಲ್ಲ, […]

Continue Reading

ತುಮಕೂರು: ಡಿಕೆ ಸಂಪುಟದಲ್ಲಿ ತುಮಕೂರಿನ ಯಾರಿಗೆಲ್ಲ ಮಂತ್ರಿ ಸ್ಥಾನ?

ಡಿಕೆ ಸಂಪುಟದಲ್ಲಿ ತುಮಕೂರಿನ ಯಾರಿಗೆಲ್ಲ ಮಂತ್ರಿ ಸ್ಥಾನ? ರಂಗನಾಥ್, ಶ್ರೀನಿವಾಸ್’ಗೆ ಸಚಿವ ಸ್ಥಾನ? ರಫೀಕ್ ಅಹಮದ್, ಗೌರಿಶಂಕರ್’ಗೆ ಮಣೆ; ರಾಜಣ್ಣಗೆ ಹಿನ್ನಡೆ; ಪರಂಗಿದೆಯೇ ಜಾಕ್ ಪಾಟ್? -ಅಶೋಕ್ ಆರ್.ಪಿ ತುಮಕೂರು: ಡಿ.ಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಜಿಲ್ಲೆಯ ಯಾರಿಗೆಲ್ಲಾ ಮಂತ್ರಿ ಪದವಿ ಸಿಗುತ್ತದೆ? ಹೀಗೊಂದು ಚರ್ಚೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಉತ್ತುಂಗದಲ್ಲಿರುವ ಹೊತ್ತಿನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುವ ಕಲ್ಪತರು ನಾಡಿನ ಜನರ ನಿರೀಕ್ಷೆಯೂ ಹೆಚ್ಚಾಗಿದೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ […]

Continue Reading

CM SIDDARAMAIAH RESIGN | ಸಿಎಂ ಸ್ಥಾನ ತ್ಯಜಿಸಿದ ಬಳಿಕ ಸಿದ್ದರಾಮಯ್ಯ ಭಾವುಕ: “ಜನರ ಸೇವೆಯೇ ನನ್ನ ಧರ್ಮ”- ಸಂವಿಧಾನವೇ ನನ್ನ ಧರ್ಮ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಜಿ ಮುಖ್ಯಮಂತ್ರಿ Siddaramaiah ಭಾವುಕರಾಗಿ ಮಾತನಾಡಿ, “ಸಂವಿಧಾನವೇ ನನ್ನ ಧರ್ಮ, ಮತದಾರರೇ ನನ್ನ ದೇವರು” ಎಂದು ಹೇಳಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲ Thawar Chand Gehlot ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ತೆಗೆದುಕೊಂಡ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. “ನನ್ನ ರಾಜಕೀಯ ಜೀವನದಲ್ಲಿ ಜನರ ಸೇವೆಯೇ ಮೊದಲ ಆದ್ಯತೆ. ಕಾಂಗ್ರೆಸ್ ಪಕ್ಷ ನನಗೆ ಅನೇಕ ಅವಕಾಶಗಳನ್ನು ನೀಡಿದೆ. ಪಕ್ಷದ ತೀರ್ಮಾನವನ್ನು ಗೌರವದಿಂದ ಸ್ವೀಕರಿಸಿದ್ದೇನೆ” […]

Continue Reading

ತುಮಕೂರು: ವಿಪತ್ತು ನಿರ್ವಹಣೆ: ಸಹಾಯವಾಣಿ ಸ್ಥಾಪನೆ; ಎಲ್ಲಾ ಇಲಾಖೆಗಳ ಸಮನ್ವಯತೆಗೆ ಜಿಲ್ಲಾಧಿಕಾರಿ ಸೂಚನೆ

ವಿಪತ್ತು ನಿರ್ವಹಣೆ: ಸಹಾಯವಾಣಿ ಸ್ಥಾಪನೆ; ಎಲ್ಲಾ ಇಲಾಖೆಗಳ ಸಮನ್ವಯತೆಗೆ ಜಿಲ್ಲಾಧಿಕಾರಿ ಸೂಚನೆ Tumkur news ತುಮಕೂರು: ಮುಂಗಾರು ಅವಧಿಯಲ್ಲಿ ಸಾರ್ವಜನಿಕರ ಸುರಕ್ಷತೆ, ಆರೋಗ್ಯ ಹಾಗೂ ಮೂಲಸೌಕರ್ಯ ಸಂರಕ್ಷಣೆಗಾಗಿ ಇಲಾಖಾವಾರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿಪತ್ತು ನಿರ್ವಹಣೆ ಕುರಿತಂತೆ ತುರ್ತು ಸಂದರ್ಭದಲ್ಲಿ ಜಿಲ್ಲಾ ಸಹಾಯವಾಣಿ ಸಂಖ್ಯೆ 7304975519, 0816-2213402ಕ್ಕೆ ಕರೆ ಮಾಡಲು ತಿಳಿಸಿದರು. ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ […]

Continue Reading

Law – ವಿಲ್ ನೋಂದಣಿ ಕಡ್ಡಾಯವಲ್ಲ: ನೋಂದಣಿ ಇಲ್ಲದಿದ್ದರೂ ಮಾನ್ಯ— ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ: ವಿಲ್ ಅಥವಾ ಮರಣಶಾಸನಗಳ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮತ್ತು ಐತಿಹಾಸಿಕ ತೀರ್ಪು ನೀಡಿದೆ. “ದೇಶದ ಯಾವುದೇ ಕಾನೂನು ಕೂಡ ವಿಲ್ ಅನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಹೇಳುವುದಿಲ್ಲ. ಕೇವಲ ನೋಂದಣಿ ಆಗಿಲ್ಲ ಎಂಬ ಕಾರಣಕ್ಕೆ ಅದರ ಸಿಂಧುತ್ವವನ್ನು ಪ್ರಶ್ನಿಸಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆಸ್ತಿ ವಿವಾದ ಪ್ರಕರಣವೊಂದರ ಅಪೀಲಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ Hima Kohli ಹಾಗೂ Ahsanuddin Amanullah ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ […]

Continue Reading

ಕೆ.ಎಸ್.ಆರ್.ಟಿ.ಸಿ ಟಿಕೆಟ್ ದರ ಹೆಚ್ಚಳದ ಸುಳಿವು; ಜನರಿಗೆ ಮತ್ತೊಂದು ಹೊರೆ

ಕೆ.ಎಸ್.ಆರ್.ಟಿ.ಸಿ ಟಿಕೆಟ್ ದರ ಹೆಚ್ಚಳದ ಸುಳಿವು ನೀಡಿದ ನಿಗಮದ ಅಧ್ಯಕ್ಷ Tumkur news ತುಮಕೂರು: ಕೇಂದ್ರ ಸರ್ಕಾರವು ಇಂಧನದ ಬೆಲೆ ಏರಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆ.ಎಸ್.ಆರ್.ಟಿ.ಸಿ ಟಿಕೆಟ್ ದರ ಏರಿಕೆ ಆಗಲಿದೆ ಎಂದು ನಿಗಮದ ಅಧ್ಯಕ್ಷ ಎಸ್.ಆರ್ ಶ್ರೀನಿವಾಸ್ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಇದೇ ರೀತಿಯಲ್ಲಿ ಬೆಲೆ ಏರಿಕೆ ಮಾಡುತ್ತಿದ್ದರೆ ನಾವು ಬಸ್ ಅನ್ನು ನೀರಿನಲ್ಲಿ ಓಡಿಸಲು ಆಗುತ್ತದೆಯೇ, ನಾವು ಕೂಡ ಜಾಸ್ತಿ ಮಾಡಬೇಕಲ್ಲವೇ ಎಂದು ಪ್ರಶ್ನಿಸಿದರು.

Continue Reading

ತುಮಕೂರು: ಗುಬ್ಬಿ ಶಾಸಕ ಶ್ರೀನಿವಾಸ್ ಪುತ್ರನಿಂದ ಷಡ್ಯಂತ್ರ; ಜೆಡಿಎಸ್ ನಾಗರಾಜು ಆರೋಪ

ಗುಬ್ಬಿ ಶಾಸಕ ಶ್ರೀನಿವಾಸ್ ಪುತ್ರನಿಂದ ಷಡ್ಯಂತ್ರ; ಜೆಡಿಎಸ್ ಮುಖಂಡ ನಾಗರಾಜು ಆರೋಪ Tumkur news ತುಮಕೂರು: ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಪುತ್ರ ದುಷ್ಯಂತ್ ತಮ್ಮ ವಿರುದ್ಧ ಷಡ್ಯಂತರ ನಡೆಸಿ ತಮ್ಮನ್ನು ರಾಜಕೀಯವಾಗಿ ಕುಗ್ಗಿಸುವ ಕುತಂತ್ರ ನಡೆಸಿದ್ದಾರೆ ಎಂದು ಗುಬ್ಬಿ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಬಿ.ಎಸ್. ನಾಗರಾಜು ಆರೋಪಿಸಿದರು. ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ಮೊದಲು ತಮ್ಮ ಕಾರು ಚಾಲಕ, ಆಪ್ತ ಸಹಾಯಕರಾಗಿದ್ದು, ಈಗ ತಮ್ಮನ್ನು ಬಿಟ್ಟುಹೋಗಿರುವವರನ್ನು ಜೊತೆಯಾಗಿಸಿಕೊಂಡು ನನ್ನ […]

Continue Reading

ತುಮಕೂರು: ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನಲ್ಲಿ ಸ್ಪೂರ್ತಿ ಸಮಾರೋಪ ಸಮಾರಂಭ

ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನಲ್ಲಿ ಸ್ಪೂರ್ತಿ ಸಮಾರೋಪ ಸಮಾರಂಭ Tumkur news ತುಮಕೂರು: ಪಠ್ಯದಾಚೆಗೂ ಜ್ಞಾನವನ್ನು ಬೆಳೆಸುವುದೇ ನಿಜವಾದ ಶಿಕ್ಷಣ. ಆ ಕೆಲಸವನ್ನು ಸಿದ್ದಗಂಗಾ ಶಿಕ್ಷಣ ಸಂಸ್ಥೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಬೆಂಗಳೂರಿನ ಎಸ್.ಜೆ.ಆರ್.ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೇಮ ಸಿದ್ದರಾಜು ಹೇಳಿದರು. ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಎನ್.ಎಸ್.ಎಸ್., ಎನ್.ಸಿ.ಸಿ., ಕ್ರೀಡೆ, ಸಾಂಸ್ಕೃತಿಕ […]

Continue Reading

ತುಮಕೂರನ್ನು ಉತ್ತರ ಬೆಂಗಳೂರು ಎಂದು ಘೋಷಿಸಿ: ಪರಮೇಶ್ವರ್ ಒತ್ತಾಯ

ತುಮಕೂರನ್ನು ಉತ್ತರ ಬೆಂಗಳೂರು ಎಂದು ಘೋಷಿಸಿ: ಪರಮೇಶ್ವರ್ ಒತ್ತಾಯ ಡಿಸಿಎಂ ಡಿ.ಕೆ ಶಿವಕುಮಾರ್ ಸಹಮತ; ಪ್ರತಿಕ್ರಿಯಿಸದ ಸಿಎಂ ಸಿದ್ದರಾಮಯ್ಯ Tumkur news ತುಮಕೂರು: ತುಮಕೂರನ್ನು ಉತ್ತರ ಬೆಂಗಳೂರು ಎಂದು ಘೋಷಿಸಿ ರಾಮನಗರ, ಬಿಡದಿ ಮಾದರಿಯಲ್ಲಿ ತುಮಕೂರನ್ನು ಬೆಂಗಳೂರಿಗೆ ಸರಿಸಮವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ನಗರದಲ್ಲಿ ಮಂಗಳವಾರ ನಡೆದ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ನಾಲ್ಕನೇ ಬಾರಿಗೆ ಭೇಟಿ […]

Continue Reading