ಎಸ್ಸೆಸ್ಸೆಲ್ಸಿ; ಉತ್ತಮ ಸಾಧನೆ ಮಾಡಿದ ತುಮಕೂರು; ಜಿಲ್ಲೆಯ ಇಬ್ಬರು ರಾಜ್ಯಕ್ಕೆ ಟಾಪರು

1 min read

Tumkurnews
ತುಮಕೂರು; ಎಸ್ಸೆಸ್ಸೆಲ್ಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ತುಮಕೂರು ಶೈಕ್ಷಣಿಕ ಜಿಲ್ಲೆ ಶೇ.91.65ರಷ್ಟು ಫಲಿತಾಂಶ ಪಡೆದಿದೆ.
ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 11,610 ಬಾಲಕರು, 10,242 ಬಾಲಕಿಯರು ಸೇರಿ ಒಟ್ಟು 21,852 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು‌. ಈ ಪೈಕಿ 10,414 ಬಾಲಕರು, 9614 ಬಾಲಕಿಯರು ಸೇರಿ ಒಟ್ಟು 20,028 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಬಾಲಕರು ಶೇ.89.70 ಹಾಗೂ ಬಾಲಕಿಯರು ಶೇ.93.87ರಷ್ಟು ಫಲಿತಾಂಶ ಪಡೆದಿದ್ದಾರೆ.
ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ 10, ಅನುದಾನಿತ ಶಾಲೆಯ 12 ಹಾಗೂ ಅನುದಾನರಹಿತ ಶಾಲೆಯ 37 ವಿದ್ಯಾರ್ಥಿಗಳು 620ಕ್ಕೂ ಅಧಿಕ ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ. ಯಾವುದೇ ಶಾಲೆಯಲ್ಲಿ ಶೂನ್ಯ ಫಲಿತಾಂಶ ಬಂದಿಲ್ಲ ಎಂದು ಡಿಡಿಪಿಐ ತಿಳಿಸಿದ್ದಾರೆ.
ತುಮಕೂರಿಗೆ ಎ ಶ್ರೇಣಿ; ರಾಜ್ಯದ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.85.63ರಷ್ಟಿದ್ದು, ತುಮಕೂರು ಶೈಕ್ಷಣಿಕ ಜಿಲ್ಲೆಯು ‘ಎ’ ಶ್ರೇಣಿ ಪಡೆದಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಯಳನಾಡು ಸರ್ಕಾರಿ ಪ್ರೌಢಶಾಲೆಯ ಭೂಮಿಕಾ ಆರ್., ಹಾಗೂ ತಿಪಟೂರು ನಳಂದ ಪ್ರೌಢಶಾಲೆಯ ಸುಪ್ರಿಯ ಕೆ.ಎಸ್., 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.

(ಚಿತ್ರ; ಎಡದಿಂದ ಭೂಮಿಕಾ, ಸುಪ್ರಿಯ)

About The Author

You May Also Like

More From Author

+ There are no comments

Add yours