250 ಕುರಿಗಳಿಗೆ ಕೊರೋನಾ ಭೀತಿ, 50 ಕುರಿಗಳನ್ನು ಕ್ವಾರಂಟೈನ್ ಮಾಡಿಸಿದ ಸಚಿವ

1 min read

ತುಮಕೂರು(ಜೂ.29) tumkurnews.in
ಈವರೆಗೆ ಜನರಿಗೆ ಕೊರೋನಾ ಭೀತಿ ಇತ್ತು, ಇದೀಗ ಪ್ರಾಣಿಗಳಿಗೂ ಕೊರೋನಾ ತಗಲುವ ಭೀತಿ ಎದುರಾಗಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಯುವಕನೋರ್ವನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹಿನ್ನೆಲೆಯಲ್ಲಿ ಆತ ಮೇಯಿಸುತ್ತಿದ್ದ 50 ಕುರಿಗಳು ಮತ್ತು ಆತನ ಜೊತೆಯಲ್ಲಿ ಇರುತ್ತಿದ್ದ ಇತರೆ ಕುರಿಗಾಹಿಗಳ ಸುಮಾರು 200 ಕುರಿಗಳಿಗೆ ಕೊರೋನಾ ಸೋಂಕು ತಗಲುವ ಭೀತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಕುರಿಗಳನ್ನು ಕೊರೋನಾ ತಪಾಸಣೆಗೆ ಒಳಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ ಮಾಧುಸ್ವಾಮಿ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಮೊದಲು ಸೋಂಕಿತ ಕುರಿಗಾಹಿ ಯುವಕನ 50 ಕುರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಅವುಗಳ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ರಾಜ್ಯದಲ್ಲಿ ಅಥವಾ ಭೋಪಾಲ್ ನಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಕುರಿಗಳಿಗೆ ಸೋಂಕು ತಗಲಿದ್ದಲ್ಲಿ ಇತರೆ 200 ಕುರಿಗಳನ್ನು ಮತ್ತು ಅವುಗಳನ್ನು ಮೇಯಿಸುತ್ತಿದ್ದವರ ಪರೀಕ್ಷೆ ನಡೆಸಲಾಗುತ್ತದೆ.

ಕುರಿ ಕಡಿಯಂಗಿಲ್ಲ: ಕುರಿಗಳಿಗೆ ಕೊರೋನಾ ಸೋಂಕು ತಗಲುವ ಭೀತಿ ಇರುವುದರಿಂದ ಚಿಕ್ಕನಾಯಕನಹಳ್ಳಿಯಲ್ಲಿ ಕೊರೋನಾ ಪರೀಕ್ಷೆ ನಡೆಸದೇ ಕುರಿ ಮಾಂಸ ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours