ಅಧಿಕಾರಿಗಳು ‘ದಂಡ’ ಮರೆತರು, ಜನರು ಜವಾಬ್ದಾರಿ ಮರೆತರು

1 min read

ತುಮಕೂರು(ಜೂ.29) tumkurnews.in
ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ದಿನೇ ದಿನೆ ಹೆಚ್ಚಾಗುತ್ತಿದೆ. ಆದರೆ ಜನರು ಮಾತ್ರ ತಮಗೆ ಕೊರೋನಾ ತಗಲುವುದಿಲ್ಲವೇನೋ ಎಂಬಂತೆ ಓಡಾಡುತ್ತಿದ್ದಾರೆ.

ಜಿಲ್ಲಾ ಕೇಂದ್ರವಾದ ತುಮಕೂರು ನಗರದಲ್ಲಿ ವಾಹನ ದಟ್ಟಣೆ ಮಾಮೂಲಿಯಂತೆಯೇ ಇದೆ. ಜನರು ಅಗತ್ಯ ಇದ್ದರೂ, ಇಲ್ಲದಿದ್ದರೂ ಓಡಾಡುತ್ತಿದ್ದಾರೆ.
ಮುಖ್ಯವಾಗಿ ಎಂ.ಜಿ ರಸ್ತೆ, ಬಿ.ಎಚ್ ರಸ್ತೆ, ಹೊರಪೇಟೆ, ಚಿಕ್ಕಪೇಟೆಯಂತಹ ಮಾರುಕಟ್ಟೆ ಪ್ರದೇಶಗಳಲ್ಲಿ ಜನ ಸಾಗರವೇ ಇದೆ.

ಹೀಗೆ ಹೊರಗೆ ಬರುತ್ತಿರುವ ಜನರಲ್ಲಿ ಬಹುತೇಕರು ಮಾಸ್ಕ್ ಧರಿಸುತ್ತಿಲ್ಲ. ಮಾಸ್ಕ್ ಧರಿಸದಿದ್ದವರಿಗೆ ದಂಡ ವಿಧಿಸುವುದಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ, ಮಹಾನಗರ ಪಾಲಕ ಕಮಿಷನರ್ ಸೇರಿದಂತೆ ಎಲ್ಲರೂ ಹೇಳಿದ್ದೆ ಆಯಿತು, ಯಾರಿಗೂ ದಂಡ ವಿಧಿಸುವುದು ಮಾತ್ರ ಕಂಡು ಬರುತ್ತಿಲ್ಲ. ಇದರಿಂದಾಗಿ ಜನರ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ, ಮತ್ತೊಂದೆಡೆ ಅಂತಹವರಿಂದ ಇತರರಿಗೂ ಕೊರೋನಾ ಭೀತಿ ಎದುರಾಗಿದೆ.

ಜಿಲ್ಲೆಯಲ್ಲಿ ಜೂ.28ರ ವರೆಗೆ ಒಟ್ಟು 93 ಜನರಲ್ಲಿ ಕೊರೋನಾ ಪಾಸಿಟಿವ್ ಬಂದಿದೆ, 5 ಜನ ಸಾವನ್ನಪ್ಪಿದ್ದಾರೆ, ಆದರೂ ಜನರಿಗೆ ಅರಿವು ಮೂಡಿಲ್ಲದಿರುವುದರದ ಸೋಂಕು ನಿಯಂತ್ರಣಕ್ಕೆ ಜನರು ಸ್ಪಂದಿಸುತ್ತಿಲ್ಲ ಎನ್ನುವ ಬೇಸರ ಅಧಿಕಾರಿಗಳಲ್ಲಿದೆ. ಜನರು ಎಲ್ಲವನ್ನೂ ಸರಕಾರವೇ ಮಾಡಬೇಕು ಎಂಬ ಮನಸ್ಥಿತಿಯನ್ನು ಬದಲಾಯಿಸಿಕೊಂಡು, ಆದಷ್ಟು ಜಾಗೃತೆ ವಹಿಸಬೇಕಿದೆ.

About The Author

You May Also Like

More From Author

+ There are no comments

Add yours