ಕೋಟಿ ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್ ಆಪ್ತ ಬಂಧನ

1 min read

 

ಕೋಟಿ ಕೋಟಿ ವಂಚನೆ: ಪರಮೇಶ್ವರ್ ಆಪ್ತ ಬಂಧನ

Tumakuru
ಬೆಂಗಳೂರು/ತುಮಕೂರು: ಕಡಿಮೆ ಬೆಲೆಗಳಲ್ಲಿ ಸ್ಮಾರ್ಟ್ ಸಿಟಿಯಲ್ಲಿ ಸೈಟ್ ಗಳು, ಮೆಡಿಕಲ್ ಸೀಟ್, ಸ್ಮಾಲ್ ಇಂಡಸ್ಟ್ರಿಗಳಲ್ಲಿ ಕೆಲಸ ಕೊಡಿಸುವುದಾಗಿ ಬೆಂಗಳೂರು ತುಮಕೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅಮಾಯಕರಿಗೆ ವಂಚನೆ ಮಾಡುತ್ತಿದ್ದ ಕತರ್ನಾಕ್ ಆರೋಪಿ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಆಪ್ತ ಎನ್ನಲಾದ ವ್ಯಕ್ತಿಯನ್ನು ಕೆಂಗೇರಿ ಹಾಗೂ ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು: ಲೋಕಾಯುಕ್ತ ದಾಳಿ: ರೆವಿನ್ಯೂ ಇನ್ಸ್‌ಪೆಕ್ಟರ್ ಬಂಧನ
ಗೃಹ ಸಚಿವ ಡಾ.ಜಿ ಪರಮೇಶ್ವರ್ ಆಪ್ತ ಎಂದು ಹೇಳಿಕೊಂಡು ಅಮಾಯಕರಿಗೆ 8 ಕೋಟಿ ರೂ.ಗಳಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪದಡಿ ತನಿಖೆಗೆ ಇಳಿದ ಪೊಲೀಸರಿಗೆ ನಾನು ಗೃಹ ಸಚಿವರ ಆಪ್ತ ಸಹಾಯಕ, ಅಧಿಕಾರಿಗಳು ನನ್ನ ಜೇಬಿನಲ್ಲಿದ್ದಾರೆ ಎಂದು ಹೇಳಿಕೊಂಡು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಜತೆಯಲ್ಲಿರುವ ಫೋಟೋ ತೋರಿಸಿಕೊಂಡು ಅಮಾಯಕರಿಗೆ ವಂಚನೆ ಮಾಡುತಿದ್ದ ಮಹಮ್ಮದ್ ಝುಬೇರ್ ಅಲಿಯಾಸ್ 420 ಝುಬೇರ್ ಇದೀಗ ಅಂದರ್ ಆಗಿದ್ದಾನೆ.

ತುಮಕೂರು; ದಿಬ್ಬೂರು ಗ್ರಾಮಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ
ಈತ, ನಾನು ಹೇಳಿದ ಕೆಲಸ ಆ ಕ್ಷಣ ಆಗುತ್ತದೆ ಎಂದು ಅಮಾಯಕರಿಗೆ ನಂಬಿಸಿ ದೋಖ ಮಾಡುತಿದ್ದ. ರಾಜ್ಯಪಾಲರ ಲೆಟರ್ ಹಾಗೂ ಸಹಿಯನ್ನು ಫೋರ್ಜರಿ ಮಾಡಿ ದುರ್ಬಳಕೆ ಮಾಡಿಕೊಂಡ ಕತರ್ನಾಕ್ ಆರೋಪಿ ಜುಬೇರ್ ವಿರುದ್ಧ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ಒಂದರಲ್ಲಿಯೇ ವಿವಿಧ ದುರುಗಳ ಅನ್ವಯ ಸುಮಾರು 13 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನ ಕೆಂಗೇರಿ ಮೂಲದ ನಿವಾಸಿ ಸಾಯಿದ ತಬಸುಮ್ (55) ಎಂಬ ಮಹಿಳೆಯಿಂದ 1.20 ಕೋಟಿ ಹಣ ಹಾಗೂ 186 ಗ್ರಾಂ ಚಿನ್ನವನ್ನು ಪಡೆದು ವಂಚನೆ ಮಾಡಿದ್ದಾನೆ ಎನ್ನಲಾಗಿದೆ.

ತುಮಕೂರು: ಕೆರೆಯಿಂದ ಮಣ್ಣು ತೆಗೆದರೆ ವಾಹನ ಜಪ್ತಿ: ಸಿಇಒ ಎಚ್ಚರಿಕೆ
ಅಮಾಯಕರನ್ನು ವಂಚಿಸಿ ದೋಚಿದ ಹಣದಲ್ಲಿ ಐಷಾರಾಮಿ ಜೀವನ, ಇಟ್ಟಿಗೆ ಫ್ಯಾಕ್ಟರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಕುಮಕ್ಕಿನಿಂದ ಇಟ್ಟಿಗೆ ಫ್ಯಾಕ್ಟರಿ ಬಳಿ ಬೆಟ್ಟದಷ್ಟು ಅಕ್ರಮ ಮಣ್ಣು ಶೇಖರಣೆ ಮಾಡುತಿದ್ದ ಎನ್ನಲಾಗಿದೆ.‌

(ಚಿತ್ರ: ಆರೋಪಿ ಜುಬೇರ್)
ಮಹಮ್ಮದ್ ಜುಬೇರ್ ಆತನ ಪತ್ನಿ ರೂಹಿ ಜುಬೇರ್ ಹಾಗೂ ಸತೀಶ್ ಎನ್ನುವವರ ವಿರುದ್ಧ IPC section 1860 ಅಡಿಯಲ್ಲಿ u/s 506, 34, 504, 406, 420, 465, 467, 471, 468, ಆರೋಪಿಗಳ ಮೇಲೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಂಗೇರಿ ಪೊಲೀಸ್ ಠಾಣಾಧಿಕಾರಿಗಳ ಮಿಂಚಿನ ಕಾರ್ಯಚರಣೆಗೆ ಕೊರಟಗೆರೆ ಪೊಲೀಸರು ಸಾಥ್ ನೀಡಿದ್ದಾರೆ.

ತುಮಕೂರು: ಹೆಚ್ಚುತ್ತಿರುವ ರಸ್ತೆ ಅಪಘಾತ: ಡಿಸಿ, ಎಸ್ಪಿ ನೇತೃತ್ವದಲ್ಲಿ ಮಹತ್ವದ ಸಭೆ
ಕೆಂಗೇರಿ ಪೊಲೀಸ್ ಠಾಣ ಸಬ್ ಇನ್ಸ್‌ಪೆಕ್ಟರ್ ಮುರಳಿ ಹಾಗೂ ತಂಡದಿಂದ ಝುಬೇರನ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಆರೋಪಿಗಳಾದ ಮೊಹಮ್ಮದ್ ಝುಬೀರ್(ಝುಬೇರ್) ಆತನ ಪತ್ನಿ ಹಾಗೂ ಸ್ನೇಹಿತ ಇದೀಗ ಜೈಲು ಸೇರಿದ್ದಾರೆ‌. ಹೆಚ್ಚಿನ ವಂಚನೆಗಳ ಬಗ್ಗೆ ಮಾಹಿತಿಯು ಪೊಲೀಸ್ ವಿಚಾರಣೆಯಿಂದ ಹೊರ ಬರಬೇಕಾಗಿದೆ.

 

About The Author

You May Also Like

More From Author

+ There are no comments

Add yours