ತುಮಕೂರು: ಕೆರೆಯಿಂದ ಮಣ್ಣು ತೆಗೆದರೆ ವಾಹನ ಜಪ್ತಿ: ಸಿಇಒ ಎಚ್ಚರಿಕೆ

1 min read

 

ಕೆರೆಯಿಂದ ಮಣ್ಣು ತೆಗೆದರೆ ವಾಹನ ಜಪ್ತಿ: ಸಿಇಒ ಎಚ್ಚರಿಕೆ

Tumkurnews
ತುಮಕೂರು: ಜಿಲ್ಲಾಡಳಿತದ ಅನುಮತಿ ಇಲ್ಲದೆ ಜಿಲ್ಲೆಯಲ್ಲಿ ಅನಧಿಕೃತವಾಗಿ ಕೆರೆಯ ಮಣ್ಣನ್ನು ತೆಗೆದು ಕೆರೆಯ ಸ್ವರೂಪವನ್ನು ಹಾಳು ಮಾಡುತ್ತಿರುವುದು ಕಂಡು ಬಂದಿದೆ. ಅನಧಿಕೃತವಾಗಿ ಕೆರೆಯ ಮಣ್ಣನ್ನು ತೆಗೆಯುವ ವಾಹನವನ್ನು ಜಪ್ತಿ ಮಾಡಿ ಮಾಲೀಕರ ವಿರುದ್ಧ ಎಫ್‍ಐಆರ್ ದಾಖಲಿಸಲಾಗುವುದು ಎಂದು ಜಿಪಂ‌ ಸಿಇಒ ಜಿ.ಪ್ರಭು ಎಚ್ಚರಿಕೆ ನೀಡಿದರು.

ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ: KEA
ಈ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೆರೆಗಳು ಯಾವುದೇ ಇಲಾಖೆ ಒಡೆತನದಲ್ಲಿದ್ದರೂ ಜಿಲ್ಲಾಡಳಿತದ ಗಮನಕ್ಕೆ ತರದೆ ಕೆರೆಯ ಮಣ್ಣನ್ನು ಎತ್ತುವಂತಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮಣ್ಣಿನ ಮೌಲ್ಯಮಾಪನ ಮಾಡಿಸಿ ಈಗಾಗಲೇ ಮಣ್ಣು ತೆಗೆದ ವಾಹನ ಮಾಲೀಕರಿಂದ ದಂಡ ವಸೂಲಿ ಮಾಡಬೇಕು. ನಿಗದಿಪಡಿಸಿದ ಮಣ್ಣಿನ ಮೌಲ್ಯ ಮಾಪನದ 5ರಷ್ಟು ಹಣವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಅವೈಜ್ಞಾನಿಕವಾಗಿ ಕೆರೆಯ ಮಣ್ಣು ತೆಗೆದಲ್ಲಿ ಮಳೆ ಬಂದಾಗ ನೀರು ಸಂರಕ್ಷಣೆಯಾಗದೆ ಇಂಗಿ ಹೋಗುವ ಸಾಧ್ಯತೆ ಇರುತ್ತದೆ. ಕೆರೆಯ ಸ್ವರೂಪವನ್ನು ಹಾಳು ಮಾಡಿ ಮಣ್ಣು ತೆಗೆಯುವುದನ್ನು ಕಡಿವಾಣ ಹಾಕಬೇಕು, ಅನಧಿಕೃತವಾಗಿ ಕೆರೆಯ ಮಣ್ಣು ತೆಗೆಯುವ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

ತುಮಕೂರು: ರೈತರಿಂದ ಸಾಲ ವಸೂಲಾತಿಗೆ ತಡೆ: ಜಿಲ್ಲಾಧಿಕಾರಿ ಆದೇಶ

About The Author

You May Also Like

More From Author

+ There are no comments

Add yours