ತುಮಕೂರು: ಬರ ನಿರ್ವಹಣೆಗೆ ಸಹಾಯವಾಣಿ ಸ್ಥಾಪನೆ: ಜಿಲ್ಲಾಧಿಕಾರಿ

1 min read

 

ತುಮಕೂರು: ಬರ ನಿರ್ವಹಣೆಗೆ ಸಹಾಯವಾಣಿ ಸ್ಥಾಪನೆ: ಜಿಲ್ಲಾಧಿಕಾರಿ

Tumkurnews
ತುಮಕೂರು: ಜಿಲ್ಲೆಯನ್ನು 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರ ಪೀಡಿತ ಪ್ರದೇಶವೆಂದು ಸರ್ಕಾರವು ಘೋಷಿಸಿರುವ ಹಿನ್ನೆಲೆಯಲ್ಲಿ ಸಮರ್ಪಕ ಬರ  ನಿರ್ವಹಣೆಗಾಗಿ ಜಿಲ್ಲೆಯ 10 ತಾಲ್ಲೂಕು ಕೇಂದ್ರ ಹಾಗೂ 3 ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿಯೂ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ತುಮಕೂರು: ಸಾಲ ವಸೂಲಿಗೆ ಕಿರುಕುಳ ನೀಡಿದರೆ ಈ ನಂಬರ್’ಗೆ ಕಾಲ್ ಮಾಡಿ: ಎಸ್.ಪಿ
ರೈತರ ಬೆಳೆ ನಷ್ಟ ಪರಿಹಾರ, ಕುಡಿಯುವ ನೀರಿನ ಸರಬರಾಜು ಮತ್ತು ಮೇವು ಲಭ್ಯತೆ ಸೇರಿದಂತೆ ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಸಾರ್ವಜನಿಕರ ಕುಂದು ಕೊರತೆಯನ್ನು ಅವಲೋಕಿಸುವ ನಿಟ್ಟಿನಿಂದ ಜಿಲ್ಲಾ ಮಟ್ಟ ಮತ್ತು ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ತೆರೆದಿರುವ ಸಹಾಯವಾಣಿ ಕೇಂದ್ರಗಳು ಕಚೇರಿ ಸಮಯದಲ್ಲಿ ಕಾರ್ಯನಿರ್ವಹಿಸಲಿವೆ.

ತುಮಕೂರು: ಸಾಲ ವಸೂಲಿಗೆ ಕಿರುಕುಳ ನೀಡಿದರೆ ಈ ನಂಬರ್’ಗೆ ಕಾಲ್ ಮಾಡಿ: ಎಸ್.ಪಿ
ಬರ ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ನೇರವಾಗಿ ತಾಲೂಕು ಕೇಂದ್ರಗಳಿಗೂ ಭೇಟಿ ನೀಡಿ ಮಾಹಿತಿ ನೀಡಬಹುದಾಗಿದೆ. ಸಂಬಂಧಿಸಿದವರು ತುಮಕೂರು ಜಿಲ್ಲೆ: 8162278718, ಚಿಕ್ಕನಾಯಕನಹಳ್ಳಿ ತಾಲೂಕು: 08133-267242,  ಗುಬ್ಬಿ: 08131-222234, ಕೊರಟಗೆರೆ: 08138-232153, ಕುಣಿಗಲ್: 08132-220239, ಮಧುಗಿರಿ: 08137-200500, ಪಾವಗಡ: 08136-244242, ಶಿರಾ: 08135-200842, ತಿಪಟೂರು: 08134-251039, ತುಮಕೂರು: 0816-2278496, ತುರುವೇಕೆರೆ: 08139-287325ಅನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.
ತಾಲೂಕು ಕಚೇರಿಯಲ್ಲದೆ ತುಮಕೂರು ಉಪವಿಭಾಗಾಧಿಕಾರಿಗಳ ಕಚೇರಿ(0816-2278493), ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿ(08134-251085) ಹಾಗೂ ಮಧುಗಿರಿ ಉಪವಿಭಾಗಾಧಿಕಾರಿಗಳ ಕಚೇರಿ(08137-200822)ಯಲ್ಲಿಯೂ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತುಮಕೂರು: ಇನ್ನೆರಡು ದಿನಗಳಲ್ಲಿ ರೈತರ ಖಾತೆಗೆ ಹಣ: ಜಿಲ್ಲಾಧಿಕಾರಿ

About The Author

You May Also Like

More From Author

+ There are no comments

Add yours