ತುಮಕೂರು: ಲೋಕಾಯುಕ್ತ ದಾಳಿ: ರೆವಿನ್ಯೂ ಇನ್ಸ್‌ಪೆಕ್ಟರ್ ಬಂಧನ

1 min read

ತುಮಕೂರು: ಲೋಕಾಯುಕ್ತ ದಾಳಿ: ರೆವಿನ್ಯೂ ಇನ್ಸ್‌ಪೆಕ್ಟರ್ ಬಂಧನ

Tumkurnews
ತುಮಕೂರು: ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು ರೈತರಿಂದ ಲಂಚ ಸ್ವೀಕರಿಸುತ್ತಿದ್ದ ಗುಬ್ಬಿ ತಾಲ್ಲೂಕು ಸಿ.ಎಸ್ ಪುರ ಹೋಬಳಿಯ ರೆವಿನ್ಯೂ ಇನ್ಸ್‌ಪೆಕ್ಟರ್ (ಆರ್.ಐ) ಕೆ.ನರಸಿಂಹ ಮೂರ್ತಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪ್ರಕರಣದ ವಿವರ: ಗುಬ್ಬಿ ತಾಲ್ಲೂಕು, ಸಿ.ಎಸ್.ಪುರ ಹೋಬಳಿ, ಉಂಗ್ರ ಮಜರೆ, ಗದ್ದೆಹಳ್ಳಿ ಗ್ರಾಮದ ವಾಸಿ ದೂರುದಾರ ನಾಗರಾಜುರವರ ತಂದೆ ಚಿಕ್ಕಯಲ್ಲಯ್ಯ ಅವರ ಹೆಸರಿನಲ್ಲಿದ್ದ ಉಂಗ್ರ ಗ್ರಾಮದ ಸರ್ವೆ ನಂಬರ್:201/1 ಮತ್ತು ಹುಲ್ಲೇಕೆರೆ ಗ್ರಾಮದ ಸರ್ವೆ ನಂಬರ್:32 ರ ಜಮೀನುಗಳನ್ನು ಅವರ ಮಗನಾದ ದೂರುದಾರ ನಾಗರಾಜು ಅವರಿಗೆ ಗುಬ್ಬಿ ತಾಲ್ಲೂಕು ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಹಕ್ಕು ಖುಲಾಸೆ ಪತ್ರ ಮುಖೇನ ನೋಂದಣಿ ಮಾಡಿಕೊಟ್ಟಿದ್ದು, ಸದರಿ ಜಮೀನುಗಳ ಖಾತೆ ಮತ್ತು ಪಹಣಿಗಳನ್ನು ತಂದೆಯ ಹೆಸರಿನಿಂದ ಮಗನಾದ ದೂರುದಾರ ನಾಗರಾಜು ಹೆಸರಿಗೆ ವರ್ಗಾವಣೆ ಮಾಡಿಕೊಡಲು ಸಿ.ಎಸ್.ಪುರ ಹೋಬಳಿ ರಾಜಸ್ವ ನಿರೀಕ್ಷಕ ಕೆ.ನರಸಿಂಹಮೂರ್ತಿ ಅವರು 10,000 ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ನಾಗರಾಜು ಅವರು ಲಂಚ ಕೊಡಲು ಇಷ್ಟವಿಲ್ಲದೇ ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್.ಕೆ ಅವರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮೊ.ನಂ:06/2024 ಕಲಂ-7(ಎ) ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ-1988 (ತಿದ್ದುಪಡಿ-2018) ರಂತೆ ಪ್ರಕರಣ ದಾಖಲಿಸಿಕೊಂಡು, ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ್ದಾರೆ.

ಎಕ್ಸ್‌ಪ್ರೆಸ್ ಕೆನಾಲ್ ವಿರೋಧಿಸಿ ನಾಳೆ ಡಿ.ಕೆ ಶಿವಕುಮಾರ್ ಅಣಕು ಶವಯಾತ್ರೆ, ತುಮಕೂರು ಬಂದ್: ಖಡಕ್ ವಾರ್ನಿಂಗ್
ಲಂಚ ಸಮೇತ ಬಂಧನ: ಅದರಂತೆ ಇಂದು (ಮೇ 15) ರಂದು ಮದ್ಯಾಹ್ನ 2-54ರ ಸಮಯದಲ್ಲಿ ದೂರುದಾರ ನಾಗರಾಜುರಿಂದ 10,000 ರೂ. ಲಂಚದ ಹಣವನ್ನು ಕಚೇರಿಯಲ್ಲಿಯೇ ಸ್ವೀಕರಿಸುವಾಗ ಆರೋಪಿ ಕೆ.ನರಸಿಂಹಮೂರ್ತಿ, ರಾಜಸ್ವ ನಿರೀಕ್ಷಕ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕು ಅವರನ್ನು ಟ್ರ್ಯಾಪ್ ಮಾಡಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಎರಡನೇ ಬಾರಿ ಬಂಧನ: ಆರೋಪಿ ಕೆ.ನರಸಿಂಹಮೂರ್ತಿ ಈ ಹಿಂದೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ರಾಜಸ್ವ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುವಾಗ ತುಮಕೂರು ನಗರದ ವಾರ್ಡ್ ನಂಬರ್ 10 ರಲ್ಲಿನ ನಿವೇಶನವನ್ನು ಫಯಾಜ್ ರವರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು 15,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟು, ದಿನಾಂಕ:07/07/2023 ರಂದು 10,000 ರೂ. ಲಂಚವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದರು.

ತುಮಕೂರು: ನಿವೇಶನ ರಹಿತರಿಗೆ ಸಿಹಿ ಸುದ್ದಿ ನೀಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್
ತುಮಕೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಅಧೀಕ್ಷಕ ವಲಿಬಾಷಾ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಬಿ.ಉಮಾಶಂಕರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್’ಗಳಾದ ಸುರೇಶ್.ಕೆ, ಬಿ.ಮೊಹಮ್ಮದ್ ಸಲೀಂ ಮತ್ತು ಶಿವರುದ್ರಪ್ಪ ಮೇಟಿ ಹಾಗೂ ಸಿಬ್ಬಂದಿ ಆಲಂಪಾಷ, ನಾಗರಾಜು.ಪಿ, ಯತೀಗೌಡ, ರಾಘವೇಂದ್ರ, ಗಿರೀಶ್ ಕುಮಾರ್.ಟಿ.ಎಸ್, ಭಾಸ್ಕರ್, ಯಶೋಧ, ನಳಿನಾಕ್ಷಿ, ಬಸವರಾಜು, ಸಂತೋಷ್, ಕರಿಯಪ್ಪ ಮತ್ತು ಇತರರು ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತುಮಕೂರು: ಕಾಂಗ್ರೆಸ್ ಪಕ್ಷದಿಂದ ಹಾಲೆನೂರು ಲೇಪಾಕ್ಷರನ್ನು ವಜಾಗೊಳಿಸಿ: ಒತ್ತಾಯ

About The Author

You May Also Like

More From Author

+ There are no comments

Add yours