ತುಮಕೂರು: 49 ಸಾವಿರ ಗಿಡಗಳನ್ನು ನೆಡಲು ಸಿದ್ಧತೆ
Tumkurnews
ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕು ಬಿ.ಡಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಗರಿಗಟ್ಟ ಸಸ್ಯಕ್ಷೇತ್ರದಲ್ಲಿ ನರೇಗಾ ಯೋಜನೆಯಡಿ 13000 ಸಸಿಗಳನ್ನು ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಡಿ 36,000 ಸಸಿಗಳನ್ನು ಜಿಲ್ಲಾ ಪಂಚಾಯತಿ ಮೂಲಕ ಬೆಳೆಸಲಾಗಿದೆ.
ಕೊರಟಗೆರೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ
ಇಲ್ಲಿ ಬೆಳೆಸಿರುವಂತಹ ಸಸಿಗಳನ್ನು ರಸ್ತೆ ಬದಿ, ಸರ್ಕಾರಿ ಜಾಗ, ಸರ್ಕಾರಿ ಕಚೇರಿ ಆವರಣ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಆವರಣಗಳಲ್ಲಿ ನೆಡುತೋಪು ನಿರ್ಮಾಣ ಮಾಡುವ ಉದ್ದೇಶದಿಂದ ಮಾವು, ಹೊಲಸು, ಜಂಬು ನೇರಳೆ, ತೊರೆಮತ್ತಿ, ಬೇವು, ಆಲ, ಅರಳಿ, ಹೊನ್ನೆ, ಕಾಡು ಬಾದಾಮಿ, ಶಿವನಿ, ಮಹಾಗನಿ, ಗೋಡಂಬಿ ಸೇರಿದಂತೆ ವಿವಿಧ ಸಸಿಗಳನ್ನು ಬೆಳೆಸಲಾಗಿದೆ.
ತುಮಕೂರು: ಲೋಕಾಯುಕ್ತ ದಾಳಿ: ರೆವಿನ್ಯೂ ಇನ್ಸ್‌ಪೆಕ್ಟರ್ ಬಂಧನ
+ There are no comments
Add yours