ಕಳ್ಳರ ಪಾಲಿನ ಸ್ವರ್ಗ; ತುಮಕೂರು KSRTC ಬಸ್ ನಿಲ್ದಾಣ!

1 min read

Tumkurnews
ತುಮಕೂರು; ಜಿಲ್ಲಾ ಕೇಂದ್ರದ ಕೆ‌.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ತುಮಕೂರು ಕೆ.ಎಸ್.ಆರ್.ಟಿ‌.ಸಿ ಬಸ್ ನಿಲ್ದಾಣಕ್ಕೆ ಪ್ರತಿ ದಿನ ಸಾವಿರಾರು ವಿದ್ಯಾರ್ಥಿಗಳು, ಪ್ರಯಾಣಿಕರು ಬಂದು ಹೋಗುತ್ತಾರೆ. ಪ್ರತಿ ನಿತ್ಯ ಲಕ್ಷಾಂತರ ರೂ. ಆದಾಯ ಬರುತ್ತದೆ. ಆದರೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ನಿಗಮದಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಭ್ಯ; ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ

ಕಳ್ಳರ ಹಾವಳಿ; ನಿಲ್ದಾಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪ್ರತಿ ದಿನ ಹತ್ತಾರು ಮಂದಿ ಪ್ರಯಾಣಿಕರು ತಮ್ಮ ಬೆಲೆ ಬಾಳುವ ಮೊಬೈಲ್, ಹಣವಿದ್ದ ಪರ್ಸ್, ಇನ್ನಿತರೆ ವಸ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸೋಮವಾರ ಸಂಜೆ ವಿದ್ಯಾರ್ಥಿನಿಯೋರ್ವಳು ಬಸ್ ಹತ್ತುವಾಗ ಮೊಬೈಲ್  ಕಳೆದುಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಕೂಡ ಓರ್ವ ಪ್ರಯಾಣಿಕರು ತಮ್ಮ ಪರ್ಸ್ ಕಳೆದುಕೊಂಡಿದ್ದಾರೆ. ಪ್ರತಿ ನಿತ್ಯ ಕನಿಷ್ಠ ಒಬ್ಬರಾದರೂ ಮೊಬೈಲ್, ಪರ್ಸ್ ಕಳೆದುಕೊಂಡು ಪರದಾಡುವ ದೃಶ್ಯ ಬಸ್ ನಿಲ್ದಾಣದಲ್ಲಿ ಸರ್ವೇ ಸಾಮಾನ್ಯವಾಗಿದೆ.

ಆಗಸ್ಟ್ 11ರಿಂದ 17ರವರೆಗೆ ದೇಶದ ಪ್ರತಿ‌ ಮನೆಯಲ್ಲೂ ರಾಷ್ಟ್ರದ್ವಜಾರೋಹಣಕ್ಕೆ ಕೇಂದ್ರ ಕರೆ; ಜಿಲ್ಲೆಯಲ್ಲಿ ಸಿದ್ಧತೆ ಆರಂಭ
ಬೈಕ್ ಕಳವು ಹೆಚ್ಚು; ಪ್ರಯಾಣಿಕರ ಪಾಡು ಒಂದಾದರೆ ಇನ್ನೂ ಇಲ್ಲಿನ ಚಾಲಕ, ನಿರ್ವಾಹಕರು ಹಾಗೂ ಸಿಬ್ಬಂದಿಯ ಪಾಡು ಇನ್ನೊಂದಾಗಿದೆ. ಬಸ್ ನಿಲ್ದಾಣದ ಒಳಗೆ ನಿಲ್ಲಿಸಿದ್ದ ಸಿಬ್ಬಂದಿಯ ಬೈಕುಗಳು ಕೂಡ ಕಳ್ಳತನವಾಗುತ್ತಿವೆ. ಬೆಳಗ್ಗೆ ನಿಲ್ಲಿಸಿದ್ದ ಬೈಕ್ ಸಂಜೆ ವೇಳೆಗೆ ಕಳುವಾಗಿರುತ್ತದೆ. ಇಷ್ಟೆಲ್ಲಾ ಆದರೂ ಬಸ್ ನಿಲ್ದಾಣದ ಅಧಿಕಾರಿಗಳು ಸಾರ್ವಜನಿಕ ಸುರಕ್ಷತೆ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎನ್ನುವ ದೂರು ಪ್ರಯಾಣಿಕರದ್ದಾಗಿದೆ.
ಭದ್ರತೆ ಮಾಯ; ನಿತ್ಯ ಸಾವಿರಾರು ಮಂದಿ ಬಂದು ಹೋಗುವ ಈ ಬಸ್ ನಿಲ್ದಾಣದಲ್ಲಿ ಭದ್ರತೆ ಮರೀಚಿಕೆಯಾಗಿದೆ. ನಿಗಮದ ಭದ್ರತಾ ಸಿಬ್ಬಂದಿ ಹುಡುಕಿದರೂ ಸಿಗುವುದಿಲ್ಲ. ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನ ಹರಿಸಬೇಕಾದ ಭದ್ರತಾ ಸಿಬ್ಬಂದಿ ಅಲ್ಲಲ್ಲಿ ಕಚೇರಿ ಒಳಗೆ ಕುಳಿತಿರುತ್ತಾರೆ, ಹೀಗಾಗಿ ಕಳ್ಳರಿಗೆ ಭಯವಿಲ್ಲದಂತಾಗಿದೆ, ಸಿಸಿ ಕ್ಯಾಮೆರಾಗಳು ಹುಡುಕಿದರೂ ಸಿಗುವುದಿಲ್ಲ ಎನ್ನುತ್ತಾರೆ ಪ್ರಯಾಣಿಕರು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್!; ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
ಜಾಹೀರಾತು ಹಾವಳಿ; ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗಿಂತಲೂ ಜಾಹೀರಾತು ಹಾವಳಿ ಹೆಚ್ಚಾಗಿದೆ. ಕಿವಿಗಡಚ್ಚಿಕ್ಕುವ ಆಡಿಯೋ ಜಾಹಿರಾತನ್ನು ಬೆಳಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ಏರು ಧ್ವನಿಯಲ್ಲಿ ಪ್ರಸಾರ ಮಾಡಲಾಗುತ್ತಿರುತ್ತದೆ. ಪ್ರಯಾಣಿಕರ ಗಮನ ತಮ್ಮ ವಸ್ತುಗಳ ಬದಲಾಗಿ ಈ ಜಾಹೀರಾತುಗಳ ಕಡೆ ಇರುತ್ತದೆ. ಹೀಗಾಗಿ ಕಳ್ಳರು ಸುಲಭವಾಗಿ ಪ್ರಯಾಣಿಕರ ವಸ್ತುಗಳನ್ನು ಕದಿಯುತ್ತಿದ್ದಾರೆ.

(ಪೊಲೀಸ್ ಉಪಠಾಣೆ ಬಾಗಿಲು ಮುಚ್ಚಿರುವುದು)
ಪೊಲೀಸರು ಕಾಣಲ್ಲ; ಪ್ರತಿನಿತ್ಯ ಸಂಜೆ ಒಮ್ಮೆ ಪೊಲೀಸ್ ಜೀಪ್ ಸೈರನ್ ಹಾಕಿಕೊಂಡು ಬಂದು ಹೋಗುತ್ತದೆ, ಅದಕ್ಕೂ‌ ಮುನ್ನ ಯಾರೂ ಇರುವುದಿಲ್ಲ. ಬಸ್ ನಿಲ್ದಾಣದ ಪೊಲೀಸ್ ಉಪ ಠಾಣೆ ಸದಾ ಬಾಗಿಲು ಮುಚ್ಚಿರುತ್ತದೆ, ಹೀಗಾಗಿ ಕಳ್ಳರು ನಿರಾತಂಕವಾಗಿ ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ ಎನ್ನುವುದು ವಿದ್ಯಾರ್ಥಿಗಳ ದೂರಾಗಿದೆ. ನಿಲ್ದಾಣದಲ್ಲಿ ಈವರೆಗೆ ಕಳುವಾದ ಮೊಬೈಲ್, ಪರ್ಸ್ ಗಳ ಪೈಕಿ ಯಾರಿಗೂ ತಮ್ಮ ವಸ್ತುಗಳು ವಾಪಾಸು ಸಿಕ್ಕ ಉದಾಹರಣೆಗಳಿಲ್ಲ. ಮೊಬೈಲ್ ಪರ್ಸ್, ಹಣ ಕಳೆದುಕೊಂಡವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಪೊಲೀಸರು ಕೂಡ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಬಸ್ ನಿಲ್ದಾಣದಲ್ಲಿರುವ ಉಪ ಪೊಲೀಸ್ ಠಾಣೆಯಲ್ಲೇ ದೂರು ನೀಡಲು ಅವಕಾಶ ನೀಡಿದರೆ ವಸ್ತುಗಳನ್ನು ಕಳೆದುಕೊಂಡವರು ದೂರು ನೀಡುತ್ತಾರೆ. ಆಗ ಪೊಲೀಸರು ಕ್ರಮ ಜರುಗಿಸಬಹುದು ಎನ್ನುವುದು ಪ್ರಯಾಣಿಕರ ಆಗ್ರಹವಾಗಿದೆ.

ಉದ್ಯೋಗಿನಿ ಯೋಜನೆ; 3 ಲಕ್ಷ ರೂ. ಸಾಲ, 1.50 ಲಕ್ಷ ರೂ. ಸಬ್ಸಿಡಿ! ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

(ನಿಲ್ದಾಣಾಧಿಕಾರಿಗಳ ಕಚೇರಿ ಬಾಗಿಲು ಮುಚ್ಚಿರುವುದು)
ನಿಲ್ದಾಣಾಧಿಕಾರಿಯೂ ಇಲ್ಲ; ಇನ್ನು ಬಸ್ ನಿಲ್ದಾಣದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಾಗುತ್ತಿದ್ದು ದೂರು ಸಲ್ಲಿಸಲು ನಿಲ್ದಾಣಾಧಿಕಾರಿ ಕಚೇರಿಗೆ ತೆರಳಿದರೆ ಅದು ಕೂಡ ಬಾಗಿಲು ಮುಚ್ಚಿರುತ್ತದೆ, ದೂರು ದುಮ್ಮಾನ ಹೇಳಿಕೊಳ್ಳಲು ನಿಲ್ದಾಣಾಧಿಕಾರಿಗಳು ಕೂಡ ಕೈಗೆ ಸಿಗುವುದಿಲ್ಲ ಎನ್ನುವುದು ಪ್ರಯಾಣಿಕರ ಅಳಲಾಗಿದೆ.

ತುಮಕೂರು ಕೆ.ಎಸ್.ಆರ್.ಟಿ.ಸಿ ಡಿಸಿ ವರ್ಗಾವಣೆ
ಒಟ್ಟಾರೆಯಾಗಿ ತುಮಕೂರು ಬಸ್ ನಿಲ್ದಾಣ ಪ್ರಯಾಣಿಕರ ಪಾಲಿಗೆ ನರಕ ಸದೃಶವಾಗಿದ್ದು, ಕಳ್ಳರಿಗೆ ಸ್ವರ್ಗದಂತಾಗಿದೆ. ಕೂಡಲೇ ನಿಗಮದ ಅಧಿಕಾರಿಗಳು, ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪ್ರಯಾಣಿಕರ ಹಿತ ಕಾಯಬೇಕು ಎನ್ನುವುದು ಪ್ರಯಾಣಿಕರ, ವಿದ್ಯಾರ್ಥಿಗಳ ಒತ್ತಾಯವಾಗಿದೆ.

About The Author

You May Also Like

More From Author

+ There are no comments

Add yours