ಮಹಿಳಾ ಅಭಿವೃದ್ಧಿ ನಿಗಮದಿಂದ ಬಡ್ಡಿ ರಹಿತ ಸಾಲ; ಅರ್ಜಿ ಆಹ್ವಾನ

1 min read

Tumkurnews
ತುಮಕೂರು; ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2022-23ನೇ ಸಾಲಿನಲ್ಲಿ ಕಿರು ಸಾಲ ಯೋಜನೆಯಡಿ ಆದಾಯೋತ್ಪನ್ನ ಚಟುವಟಿಕೆಗಳ ಘಟಕ, ಸಣ್ಣ ಉದ್ದಿಮೆಯನ್ನು ಸ್ಥಾಪಿಸಿ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ಸೌಲಭ್ಯ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ನೋಂದಣಿಯಾಗಿರುವ ಸ್ತ್ರೀಶಕ್ತಿ ಗುಂಪಿಗೆ ಬಡ್ಡಿ ರಹಿತವಾಗಿ 2 ಲಕ್ಷ ರೂ.ಗಳವರೆಗೆ ಸಾಲವನ್ನು ನೀಡಲಾಗುವುದು. ಆಸಕ್ತ ಸ್ತ್ರೀಶಕ್ತಿ ಗುಂಪುಗಳು ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 2ರೊಳಗಾಗಿ ಸಲ್ಲಿಸಬಹುದಾಗಿದೆ.

ಉದ್ಯೋಗಿನಿ ಯೋಜನೆ; 3 ಲಕ್ಷ ರೂ. ಸಾಲ, 1.50 ಲಕ್ಷ ರೂ. ಸಬ್ಸಿಡಿ! ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
ಈಗಾಗಲೇ ಕಿರುಸಾಲ ಯೋಜನೆಯಡಿ ಪ್ರಯೋಜನ ಪಡೆಯದೇ ಇರುವ ಸ್ತ್ರೀಶಕ್ತಿ ಸಂಘಗಳು ಮಾತ್ರ ಸಾಲ ಪಡೆಯಲು ಅರ್ಹವಾಗಿರುತ್ತವೆ. ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಸ್ತ್ರೀಶಕ್ತಿ ಗುಂಪುಗಳು ಆರ್ಥಿಕವಾಗಿ ಸದೃಢವಾಗಿರಬೇಕು. ಗುಂಪಿನ ಉಳಿತಾಯ ಗರಿಷ್ಠ 2 ಲಕ್ಷ ರೂ.ಗಳಿಗೂ ಮೇಲಿರಬೇಕು. ಗುಂಪು ವ್ಯವಸ್ಥಿತ ರೀತಿಯಲ್ಲಿ ದಾಖಲೆಗಳನ್ನು ನಿರ್ವಹಿಸುತ್ತಿರಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಮೌಲ್ಯಮಾಪನ ಮಾಡಿ ‘ಎ’ ಶ್ರೇಣಿಯ ಗುಂಪುಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಸಾಲಕ್ಕೆ ಅರ್ಜಿ ಹಾಕುವ ಸ್ತ್ರೀಶಕ್ತಿ ಗುಂಪು ತಾಲ್ಲೂಕು ಮಟ್ಟದ ಒಕ್ಕೂಟದಲ್ಲಿ ನೋಂದಣಿಯಾಗಿ ಸದಸ್ಯತ್ವ ಹೊಂದಿರಬೇಕು.
ಆಸಕ್ತಿಯುಳ್ಳ ಸ್ತ್ರೀಶಕ್ತಿ ಗುಂಪುಗಳು ತಮ್ಮ ಅರ್ಜಿಯೊಂದಿಗೆ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಪ್ರತಿಯನ್ನು ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಅಭಿವೃದ್ಧಿ ನಿರೀಕ್ಷಕರು, ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಆವರಣ, ಎಂ.ಜಿ.ರಸ್ತೆ, ತುಮಕೂರು ಇವರನ್ನು ಸಂಪರ್ಕಿಸ ಬಹುದಾಗಿದ್ದು, ತುಮಕೂರು ನಗರ-0816-2272204, ತುಮಕೂರು(ಗ್ರಾ)-2285021, ಚಿಕ್ಕನಾಯಕನಹಳ್ಳಿ-08133-268245, ಗುಬ್ಬಿ-08131-223731, ಕೊರಟಗೆರೆ-08138-232315, ಕುಣಿಗಲ್-08132-222691, ಮಧುಗಿರಿ-08137-282452, ಶಿರಾ-08135-277578 ಪಾವಗಡ-08136-245733, ತುರುವೇಕೆರೆ-08139-288468, ತಿಪಟೂರು-08134-252991ನ್ನು ಸಂಪರ್ಕಿಸಬಹುದೆಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours