ಮೂವರು ಪೊಲೀಸ್, ಇಬ್ಬರು ಗರ್ಭಿಣಿ ಸೇರಿ 25 ಪಾಸಿಟಿವ್

1 min read

ತುಮಕೂರು(ಜು.12) tumkurnews.in

ಜಿಲ್ಲೆಯಲ್ಲಿ ಭಾನುವಾರ ಪುನಃ 25 ಜನರಲ್ಲಿ ಹೊಸದಾಗಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.
ತುಮಕೂರು 11
ತುರುವೇಕೆರೆ 07
ಪಾವಗಡ 03
ಕೊರಟಗೆರೆ 01
ಮಧುಗಿರಿ ‌01
ಕುಣಿಗಲ್ 02
ಒಟ್ಟು 25 ಪ್ರಕರಣಗಳು ಪಾಸಿಟಿವ್ ಬಂದಿವೆ.
ಹೊಸ ಸೋಂಕಿತರ ಪೈಕಿ ಮೂವರು ಗರ್ಭಿಣಿಯರಾಗಿದ್ದಾರೆ. ಉಳಿದಂತೆ 11 ಜನ ರೋಗದ ಲಕ್ಷಣಗಳಿದ್ದವರು, 11 ಜನರು ಯಾವುದೇ ರೋಗ ಲಕ್ಷಣಗಳಿಲ್ಲದವರು ಹಾಗೂ 3 ಮಂದಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರಾಗಿದ್ದಾರೆ. ಉಳಿದ ಮೂವರು ಪೊಲೀಸರು ಸೋಂಕಿಗೆ ಒಳಗಾಗಿದ್ದಾರೆ. ಮಧುಗಿರಿಯಲ್ಲಿ ಒಂದು ಸಾವು ಸಂಭವಿಸಿದೆ.
ಜಿಲ್ಲೆಯಲ್ಲಿ ಭಾನುವಾರದ ವೇಳೆಗೆ 478 ಜನ ಒಟ್ಟು ಸೋಂಕಿತರಿದ್ದು, 20 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 313 ಮಂದಿ‌ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ತಿಪಟೂರು, ಗುಬ್ಬಿ, ಶಿರಾ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಭಾನುವಾರ ಹೊಸ ಪ್ರಕರಣ ಕಂಡು ಬಂದಿಲ್ಲ.

About The Author

You May Also Like

More From Author

+ There are no comments

Add yours