29 ಪೊಲೀಸರು ಸೇರಿ 95 ಜನರಿಗೆ ಕೊರೊನಾ ಪಾಸಿಟಿವ್

1 min read

ತುಮಕೂರು(ಜು.10) tumkurnews.in

ಜಿಲ್ಲೆಯ ಜನರಿಗೆ ಶುಕ್ರವಾರದ ಕೊರೊನಾ ಬುಲೆಟಿನ್ ಶಾಕ್ ನೀಡಿದೆ. ಒಂದೇ ದಿನ 95 ಜನರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಇದರಲ್ಲಿ 29 ಮಂದಿ ಪೊಲೀಸರಾಗಿದ್ದಾರೆ.

ವಿವರ:

ತುಮಕೂರು 69
ಶಿರಾ 17
ಪಾವಗಡದ 4
ಕೊರಟಗೆರೆ 3
ಮಧುಗಿರಿ 2
ಒಟ್ಟು 95

29 ಪೊಲೀಸರಿಗೆ ಸೋಂಕು: ಜಿಲ್ಲೆಯಲ್ಲಿ ಶುಕ್ರವಾರ 24 ಕೆ.ಎಸ್.ಆರ್.ಪಿ(ಪೊಲೀಸ್) ಪೇದೆಗಳಿಗೆ ಹಾಗೂ 5 ಮಂದಿ ಸಿವಿಲ್ ಪೊಲೀಸರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೇ ಇಬ್ಬರು ಗರ್ಭಿಣಿ ಮತ್ತು ಓರ್ವ ಬಾಣಂತಿಗೆ ತಗಲಿದೆ. ಇವತ್ತಿನ ಸೋಂಕಿತರ ಪೈಕಿ 55 ಜನರಿಗೆ ಯಾವುದೇ ರೋಗದ ಲಕ್ಷಣಗಳು ಇರಲಿಲ್ಲ.

*

ಶುಕ್ರವಾರ ಇಬ್ಬರು ಸಾವನ್ನಪ್ಪಿದ್ದು, ಜಿಲ್ಲೆಯ ಒಟ್ಟು ಸಾವಿನ ಸಂಖ್ಯೆ 13ಕ್ಕೆ ಏರಿದೆ.

*

ಒಟ್ಟು ಸೋಂಕಿತರು- 428, ಸಕ್ರಿಯ ಪ್ರಕರಣ 330

About The Author

You May Also Like

More From Author

+ There are no comments

Add yours