ತುಮಕೂರು: ಪತ್ರಕರ್ತನ ಕೊಲೆಗೆ ಸುಪಾರಿ: ಐವರು ಪೊಲೀಸರ ಅಮಾನತು

1 min read

 

ಭ್ರಷ್ಟ ಪೊಲೀಸರಿಗೆ ಸಿಂಹ ಸ್ವಪ್ನವಾದ ತುಮಕೂರು ಎಸ್ಪಿ

ಒಂದೇ ದಿನ ಐವರು ಪೊಲೀಸರು ಅಮಾನತು

Tumkurnews
ತುಮಕೂರು: ಕೊಲೆಗೆ ಸುಪಾರಿ ನೀಡಿದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಪೊಲೀಸ್ ಇಲಾಖೆಯ ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಐವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಅಮಾನತುಗೊಳಿಸಿ ಆದೇಶಿಸಿದ್ದಾರೆ‌.
ತುಮಕೂರು ನಗರದ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಇಬ್ಬರು, ಜಯನಗರ ಠಾಣೆಯ ಓರ್ವ, ಟ್ರಾಫಿಕ್ ಠಾಣೆಯ ಕಾನ್ ಸ್ಟೇಬಲ್, ಎಸ್ಪಿ ಕಚೇರಿಯ ಓರ್ವ ಸಿಬ್ಬಂದಿ ಅಮಾನತುಗೊಂಡಿದ್ದಾರೆ.


ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಿಬ್ಬಂದಿ‌ ಮಂಜು, ಅಹೋಬಲ ನರಸಿಂಹಮೂರ್ತಿ, ಜಯನಗರ ಪೊಲೀಸ್ ಠಾಣೆಯ ಸಿಬ್ಬಂದಿ ಮನು ಎಸ್.ಗೌಡ, ಸಂಚಾರಿ ಪೊಲೀಸ್ ಠಾಣೆಯ ರಾಮಕೃಷ್ಣ, ಎಸ್ಪಿ ಕಚೇರಿಯ ಸುರೇಶ್ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ.
ಅಮಾನತುಗೆ ಕಾರಣ ಏನು?: ತುಮಕೂರಿನ ಬೆಂಕಿಯ ಬಲೆ ಪತ್ರಿಕೆ ಸಂಪಾದಕ ಧನಂಜಯ ಅವರ ಕೊಲೆಗೆ ಸಂಚು ಆರೋಪದ ಮೇಲೆ ತುಮಕೂರಿ‌ನ ಎಪಿಎಂಸಿ ವರ್ತಕ ಮಂಜುನಾಥ್ ರೆಡ್ಡಿ, ಪತ್ರಕರ್ತ ನವೀನ್ ವೈ ಹಾಗೂ ನರಸಿಂಹ ಮೂರ್ತಿ ಎಂಬ ಮೂವರು ಆರೋಪಿಗಳನ್ನು ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಪೊಲೀಸರು ಬಂಧಿಸಿದ್ದರು.


ಈ ಮೂವರು ಆರೋಪಿಗಳಿಗೆ ಅಮಾನತುಗೊಂಡಿರುವ ಪೊಲೀಸರು ಪೊಲೀಸ್ ಇಲಾಖೆಯ ಗೌಪ್ಯ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದರು. ಈ‌ ಹಿನ್ನೆಲೆಯಲ್ಲಿ ಈ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಯಲಾಗಿದ್ದು ಹೇಗೆ?: ಧನಂಜಯ ಅವರ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಂಜುನಾಥ ರೆಡ್ಡಿಯ ಮೊಬೈಲ್ ಅನ್ನು ದಂಡಿನ ಶಿವರ ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಆಗ ಪೊಲೀಸ್ ಇಲಾಖೆಯ ಗೌಪ್ಯ ಮಾಹಿತಿಗಳು ಸೋರಿಕೆಯಾಗಿರುವುದು ಪತ್ತೆಯಾಗಿದೆ.‌ ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಕಾರಣ ಪೊಲೀಸರ ಅಮಾನತು ಆಗಿದೆ.

ತುಮಕೂರು: ಪತ್ರಕರ್ತನ ಕೊಲೆಗೆ ಸಂಚು, ಸುಪಾರಿ: ಮೂವರ ಬಂಧನ

About The Author

You May Also Like

More From Author

+ There are no comments

Add yours