ತುಮಕೂರು: ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಜೂನ್ 3 ರಿಂದ 8 ರವರೆಗೆ ಕಲಾ ಉತ್ಸವ

1 min read

ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಜೂನ್ 3 ರಿಂದ 8 ರವರೆಗೆ ಕಲಾ ಉತ್ಸವ

ಶಿಕ್ಷಣದ ಜೊತೆಗೆ ಕಲೆ-ಸಾಹಿತ್ಯ-ಸಂಗೀತವನ್ನು ಆಸ್ವಾದಿಸಿ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಡಾ.ಜಿ.ಪರಮೇಶ್ವರ್ ಕರೆ

Tumkurnews
ತುಮಕೂರು: ಸದಾ ಆಸ್ಪತ್ರೆಯ ರೋಗಿಗಳ ವಾರ್ಡ್, ಪ್ರಯೋಗಾಲಯ ಮತ್ತು ತರಗತಿಗಳಿಗೆ ಜೋತು ಬೀಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳು, ತಮ್ಮೊಳಗಿನ ಕಲಾಶಾರದೆಗೊಂದು ವೇದಿಕೆ ಕಲ್ಪಿಸುವ ಸಾಹಸಕ್ಕೆ ಈ ಬಾರಿ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ 3ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ವೈದ್ಯಕೀಯ ಪ್ರಯೋಗಾಲಯದ ಜಂಜಾಟ ಮತ್ತು ರೋಗಿಗಳೊಂದಿಗಿನ ಒಡನಾಟದ ಜೊತೆಗೆ ಮನಸ್ಸಿನ ಉಲ್ಲಾಸಕ್ಕೂ ಕಾಲಾವಕಾಶ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುವ ವೈದ್ಯ ವಿದ್ಯಾರ್ಥಿಗಳು, ತಮ್ಮ ಕಾಲೇಜಿನಲ್ಲಿ ಈ ವರ್ಷದ ಉತ್ಸವವನ್ನು ‘ಆರೋಹಣ 24′ ಎಂಬ ‘ಸಾಂಸ್ಕೃತಿಕ ಕಲಾ ಉತ್ಸವ’ ನಡೆಸಲು ಮುಂದಾಗಿದ್ದಾರೆ. ಇದು ಜೂನ್ 3 ರಿಂದ ಜೂನ್ 8 ರವರೆಗೆ ನಡೆಯಲಿದೆ. ಈ ಉತ್ಸವವು ಕಲೆ, ಸಂಗೀತ, ನೃತ್ಯ, ಸಾಹಿತ್ಯ ಮತ್ತು ರಂಗಭೂಮಿಯ ಮಿಶ್ರಣವಾಗಿರುತ್ತದೆ.

ಎಸ್ಸೆಸ್ಸೆಲ್ಸಿ ಫಲಿತಾಂಶ: ಶಿರಾ ತಾಲ್ಲೂಕಿನ ಹರ್ಷಿತಾ ರಾಜ್ಯಕ್ಕೆ ದ್ವಿತೀಯ
ಟೀಸರ್ ಪರದೆ ಬಿಡುಗಡೆ:
ನಗರದ ಅಗಳಕೋಟೆಯ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿರುವ ಡಾ.ಎಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಸಭಾಂಗಣದ ಮುಂಭಾಗ ಏರ್ಪಡಿಸಲಾದ ‘ಆರೋಹಣ-24ರ ಸಾಂಸ್ಕೃತಿಕ ಕಲಾ ಉತ್ಸವದ ಟೀಸರ್ ಪರದೆಯನ್ನು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಪಡೆಯುವವರು ಶಿಕ್ಷಣದ ಜತೆಗೆ ಸಾಹಿತ್ಯ, ಸಂಗೀತ, ಚಿತ್ರಕಲೆಯನ್ನು ಕಲಿಯಬೇಕು. ಆಗ ಅವರಲ್ಲಿ ಕೌಶಲ್ಯ, ಸೌಂದರ್ಯಪ್ರಜ್ಞೆ ಬೆಳೆಯಲು ಸಾಧ್ಯ ಎಂದರು.

ತುಮಕೂರು: ಸಾಲ ವಸೂಲಿಗೆ ಕಿರುಕುಳ ನೀಡಿದರೆ ಈ ನಂಬರ್’ಗೆ ಕಾಲ್ ಮಾಡಿ: ಎಸ್.ಪಿ
ವಿದ್ಯಾರ್ಥಿಗಳಲ್ಲಿ ಅಸಾಮಾನ್ಯವಾದ ಶಕ್ತಿಯಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿರುವ ಈ ಶಕ್ತಿಯನ್ನು ಉತ್ತಮ ರೀತಿಯಲ್ಲಿ ಅಭಿವದ್ಧಿಪಡಿಸಿ, ಅದರ ಲಾಭ ಅವರ ಕುಟುಂಬಕ್ಕೆ, ಸಮಾಜಕ್ಕೆ ಸಿಗುವಂತೆ ಮಾಡಬೇಕು. ಇಂತಹ ಉತ್ಸವಗಳಿಗೆ ವೇದಿಕೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುವ ಕೆಲಸವನ್ನು ಸಂಸ್ಥೆ ಮಾಡುತ್ತದೆ ಎಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಾತ್ಮಕತೆ ಬೆಳೆಸಿಕೊಳ್ಳಿ ಎಂದು ಡಾ.ಜಿ.ಪರಮೇಶ್ವರ ಅವರು ಹುರಿದುಂಬಿಸಿದರು.

ಎಸ್ಸೆಸ್ಸೆಲ್ಸಿ: ಉಡುಪಿ ಜಿಲ್ಲೆ ಪ್ರಥಮ: ಇಲ್ಲಿದೆ ಜಿಲ್ಲಾವಾರು ಫಲಿತಾಂಶ
ಸಿಕ್ಕಿರುವ ಅವಕಾಶವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಜೀವನವೆಂಬುದು ಬದುಕಿನ ತಿರುವಿನ ಮಹತ್ವದ ಘಟ್ಟ. ಈ ಅವಧಿಯಲ್ಲಿ ಹೆಚ್ಚು ಹೆಚ್ಚು ಅಧ್ಯಯನದ ಜೊತೆಗೆ ಕಲಾತ್ಮಕ ಚಟುವಟಿಕೆಗಳನ್ನು ಮಾಡುವ ಮೂಲಕ ತಮ್ಮ ಜ್ಞಾನದ ಮಿತಿಯನ್ನು ಹೆಚ್ಚಿಸಿಕೊಂಡಾಗ ಅದು ಬದುಕಿನ ಕಟ್ಟಕಡೆಯ ತನಕ ನೆರವಿಗೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.

ತುಮಕೂರು: ಶಿರಾ ಗೇಟ್ ರಸ್ತೆ ಬಂದ್: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ
ಈ ಸಂದರ್ಭದಲ್ಲಿ ಸಾಹೇ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಸಾಹೇ ರಿಜಿಸ್ಟ್ರಾರ್ ಡಾ.ಎಂ.ಝಡ್ ಕುರಿಯನ್, ಸಾಹೇ ವಿವಿಯ ಪರೀಕ್ಷಾ ನಿಯಂತ್ರಕ ಡಾ.ಗುರುಶಂಕರ್, ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರ ಡಾ ವಿವೇಕ್ ವೀರಯ್ಯ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಉಪಪ್ರಾಂಶುಪಾಲ ಡಾ.ಜಿ.ಎನ್. ಪ್ರಭಾಕರ್, ಸಿಇಓ ಕಿರಣ್ ಕುಮಾರ್, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಕುಡುವ ಅವರು ಹಾಜರಿದ್ದರು.

ತುಮಕೂರು: 25 ಸಾವಿರ ಬಂಡವಾಳ: ತಿಂಗಳಿಗೆ 3 ಲಕ್ಷ ಆದಾಯ!
ಆರೋಹಣ-2024 ರಲ್ಲಿ ಏನೇನು ನಡೆಯುತ್ತವೆ:
ಒಂದು ವಾರದ ಕಾಲಾವಧಿಯಲ್ಲಿ ನಡಯುವ ಈ ಕಲಾ ಉತ್ಸವದಲ್ಲಿ ನೃತ್ಯ (ನಾಟ್ಯ) ಸಂಗೀತ (ಸ್ವರ), ಥಿಯೇಟರ್ (ನವರಸ), ಸಾಹಿತ್ಯ (ಸಾಹಿತ್ಯ), ಕಲೆ (ವರ್ಣಿಕಾ), ಡಿಜಿಟಲ್ (ಅದ್ವಿತೀಯ), ಇ-ಸ್ಪೋಟ್ರ್ಸ್, ಫ್ಯಾಷನ್ -ಶೋ, ಫಾರ್ಮಲ್ಸ್ , ಬೆಂಕಿ ಇಲ್ಲದೆ ಅಡುಗೆ, ಟ್ರೆಷರ್ ಹಂಟ್‍ನಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎನ್ನುತ್ತಾರೆ ‘ಆರೋಹಣ -24 ‘ಸಾಂಸ್ಕೃತಿಕ ಕಲಾ ಉತ್ಸವ ಸಮಿತಿಯ ಸಂಯೋಜಕರು ಡಾ. ಜ್ಯೋತಿಸ್ವರೂಪ್ ಮತ್ತು ಡಾ. ಬಿ.ಬಿ.ಸವಿತಾರಾಣಿ ಅವರು.

ತುಮಕೂರು: ಮಲ್ಲಸಂದ್ರದ ವ್ಯಕ್ತಿ ನಾಪತ್ತೆ
ಪ್ರತಿಯೊಬ್ಬ ವಿದ್ಯಾರ್ಥಿಯ ಸೃಜನಾತ್ಮಕವಾದ ವ್ಯಕ್ತಿತ್ವ-ದೇಹ, ಆತ್ಮ ಮತ್ತು ಚೈತನ್ಯವನ್ನು ಪೋಷಿಸಲು, ಹಾಗೂ ದೇಹ ಮತ್ತು ಮನಸ್ಸನ್ನು ಅಂದಗೊಳಿಸುವಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನಗಳು ಪ್ರಮುಖ ಪಾತ್ರವಹಿಸುತ್ತವೆ ಮತ್ತು ಅದರ ಆಸ್ವಾದನೆ ಬಹುಮುಖ್ಯ. ಇದು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಅನ್ವೇಷಿಸಲು ಮತ್ತು ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ವಿದ್ಯಾರ್ಥಿ ಮುಖಂಡರಾದ ಪ್ರೀತಂ .ಇ, ನಿಹಾರಿಕಾ .ಟಿ ಮತ್ತು ಹರ್ಷಿತಾ ಮುರಳಿ ಅವರು.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದೆ ಇರುವುದೇ ಅವರು! ಎಲ್ಲವೂ ಗೊತ್ತಿದೆ ಎಂದ ಎಸ್.ಆರ್ ಶ್ರೀನಿವಾಸ್!
ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ವೃತ್ತಿಪರ ಕಾಲೇಜುಗಳು, ಆಡಳಿತ ಮಂಡಳಿಗಳು ಈ ಅಂಶದ ಬಗ್ಗೆ ಗಮನ ಹರಿಸಿ, ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೇದಿಕೆ ಅವಕಾಶಗಳನ್ನು ಒದಗಿಸುತ್ತಿರುವುದು ಸ್ವಾಗತಾರ್ಹ ಎನ್ನುತ್ತಾರೆ ವಿದ್ಯಾರ್ಥಿ ಸಮಿತಿಯ ಸಂಯೋಜಕರುಗಳಾದ ಭೂಮಿಕಾ ಜೆ, ಕುಶಾಲ್.ಎಸ್ ಗೌಡ ಮತ್ತು ಯಶ್ ದೇವ್ಲೇಕರ್ ಅವರುಗಳು.
ಸಹಜವಾಗಿ ಎಲ್ಲರ ಮನಸ್ಸಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಂದರೆ ಸಿನಿಮಾ ನೃತ್ಯ, ಟ್ರ್ಯಾಕ್ ಹಾಕಿ ಹಾಡುವುದೇ ಮನೋರಂಜನೆ ಕಲೆ ಎಂಬ ಮಾನಸಿಕ ಸೀಮಿತತೆ ಇದೆ. ಅದರಾಚೆ ಇನ್ನೂ ಸಾಂಸ್ಕೃತಿಕವಾಗಿ ಎಲ್ಲಾ ಕಲೆಗಳಿಗೂ, ಕಲಾವಿದರಿಗೂ ಗೌರವ ನೀಡಬೇಕು. ಜೊತೆಗೆ ಕಾರ್ಯಕ್ರಮದ ವೇದಿಕೆ ನಿರ್ದಿಷ್ಟ ಸಮಯದ ಮಿತಿಯಲ್ಲಿ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ನೀಡುವ ಕಾರ್ಯಕ್ರಮಗಳು ಸಾರ್ಥಕವಾಗಬೇಕು ಎನ್ನುವ ಪರಿಕಲ್ಪನೆಯೊಂದಿಗೆ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಅಸ್ಪತ್ರೆಯಲ್ಲಿನ 3ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮನ್ವಯ ಸಮಿತಿ ‘ಆರೋಹಣ-2024’ ನ್ನು ಆಯೋಜಿಸುತ್ತಿದೆ . ಇದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಆರಂಭಿಸಲಾಗಿದೆ.

ಎಚ್.ಡಿ ರೇವಣ್ಣಗೆ ಮೇ 14ರ ವರೆಗೆ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರ ತಲುಪಿದ ಮಾಜಿ ಪ್ರಧಾನಿ ಪುತ್ರ

About The Author

You May Also Like

More From Author

+ There are no comments

Add yours