ತುಮಕೂರು: ಎಸ್ಸೆಸ್ಸೆಲ್ಸಿ ಫಲಿತಾಂಶ: ಇಲ್ಲಿದೆ ಇಡೀ ರಾಜ್ಯದ ಲಿಸ್ಟ್
Tumkurnews
ಬೆಂಗಳೂರು: 2023-2024ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಬಾಗಲಕೋಟೆಯ ಅಂಕಿತ ರಾಜ್ಯಕ್ಕೆ ಟಾಪರ್ ಆಗಿದ್ದು, 625ಕ್ಕೆ 625 ಅಂಕ ಗಳಿಸಿದ್ದಾರೆ. ಮೇಧಾ ಪಿ.ಶೆಟ್ಟಿ 625ಕ್ಕೆ624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈಕೆ ಬೆಂಗಳೂರಿನ ಹೋಲಿ ಚೈಲ್ಡ್ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾರೆ. ಜೊತೆಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆ, ಶಿರಾ ಪಟ್ಟಣದ ಹರ್ಷಿತ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈಕೆ ಶಿರಾದ ವಾಸವಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.
ಉಡುಪಿ ಜಿಲ್ಲೆ ಪ್ರಥಮ: ರಾಜ್ಯಕ್ಕೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ ಪಡೆದಿದ್ದು, ಶೇ.94ರಷ್ಟು ಫಲಿತಾಂಶ ಗಳಿಸಿದೆ. ದಕ್ಷಿಣ ಕನ್ನಡ ದ್ವಿತೀಯ, ಶಿವಮೊಗ್ಗ ತೃತೀಯ ಹಾಗೂ ಯಾದಗಿರಿ ಕೊನೆ ಸ್ಥಾನದಲ್ಲಿದೆ.
ಜಿಲ್ಲಾವಾರು ಫಲಿತಾಂಶ:
ಉಡುಪಿ-94%
ದಕ್ಷಿಣ ಕನ್ನಡ-92%
ಶಿವಮೊಗ್ಗ -88%
ತುಮಕೂರು-75%
ಕೊಡಗು-88%
ಉತ್ತರ ಕನ್ನಡ-86%
ಹಾಸನ-86%
ಮೈಸೂರು-85%
ಶಿರಸಿ-84%
ಬೆಂಗಳೂರು ಗ್ರಾ.-83%
ಚಿಕ್ಕಮಗಳೂರು-83%
ವಿಜಯಪುರ-80%
ಬೆಂಗಳೂರು ದಕ್ಷಿಣ-79%
ಬಾಗಲಕೋಟೆ-78%
ಬೆಂಗಳೂರು ಉತ್ತರ-77%
ಹಾವೇರಿ-75%
ಗದಗ-74%
ಚಿಕ್ಕಬಳ್ಳಾಪುರ-73%
ಮಂಡ್ಯ-73%
ಕೋಲಾರ-73%
ಚಿತ್ರದುರ್ಗ-72%
ಹಾಸನ-86%
ಧಾರವಾಡ-72%
ದಾವಣಗೆರೆ-72%
ಚಾಮರಾಜನಗರ-71%
ಬಳ್ಳಾರಿ-64%
ಬೆಳಗಾವಿ-64%
ರಾಯಚೂರು-61%
ಕೊಪ್ಪಳ-61%
ಬೀದರ್-57%
ಕಲಬುರಗಿ-53%
ಯಾದಗಿರಿ-50%
ಒಟ್ಟು ರಾಜ್ಯದಲ್ಲಿ ಫಲಿತಾಂಶ 73%, ಬಾಲಕರು-65%, ಬಾಲಕಿಯರು-81%.
ಎಸ್ಸೆಸ್ಸೆಲ್ಸಿ ಫಲಿತಾಂಶ: ಶಿರಾ ತಾಲ್ಲೂಕಿನ ಹರ್ಷಿತಾ ರಾಜ್ಯಕ್ಕೆ ದ್ವಿತೀಯ
+ There are no comments
Add yours