ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಹಿಂದೆ ಇರುವುದೇ ಅವರು! ಎಲ್ಲವೂ ಗೊತ್ತಿದೆ ಎಂದ ಎಸ್.ಆರ್ ಶ್ರೀನಿವಾಸ್!
Tumkurnews
ತುಮಕೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಹಿಂದೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕೈವಾಡ ಇದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಆರೋಪಿಸಿದ್ದಾರೆ.
ತುಮಕೂರು: ಸಾಲ ವಸೂಲಿಗೆ ಕಿರುಕುಳ ನೀಡಿದರೆ ಈ ನಂಬರ್’ಗೆ ಕಾಲ್ ಮಾಡಿ: ಎಸ್.ಪಿ
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಹಿಂದೆ ಇರೋದೆ ಕುಮಾರಸ್ವಾಮಿ. ರೇವಣ್ಣರ ಕುಟುಂಬವನ್ನು ಮುಗಿಸಬೇಕೆಂದು ನಿರಂತರವಾಗಿ ಕುಮಾರಸ್ವಾಮಿ ಪ್ರಯತ್ನ ಮಾಡುತ್ತಿದ್ದರು. ಈಗ ಕುಮಾರಸ್ವಾಮಿಗೆ ಒಂದು ವಿಚಾರ ಸಿಕ್ತಿದೆ. ಸಿಕ್ಕಿದ ಕೂಡಲೇ ದೇವರಾಜೇಗೌಡ, ಕುಮಾರಸ್ವಾಮಿ ಇಬ್ಬರೂ ಸೇರಿಕೊಂಡು ರೇವಣ್ಣರ ಕುಟುಂಬವನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತುಮಕೂರಿನಲ್ಲಿ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ಕುರಿತು ಆಕ್ರೋಶ ಭರಿತವಾಗಿ ಮಾತನಾಡಿದ ಅವರು, ನಾವೆಲ್ಲಾ ಕುಮಾರಸ್ವಾಮಿ ಜೊತೆಯಲ್ಲಿ ಇದ್ದವರು. ಅವರ ಕುಟುಂಬ ಹಾಗೂ ರೇವಣ್ಣ ಕುಟುಂಬದ ನಡುವೆ ಎಷ್ಟು ದ್ವೇಷ ಇದೆ ಎಂದರೆ ಬದ್ದ ವೈರಿಗಳ ರೀತಿಯಲ್ಲಿ ದ್ವೇಷ ಮಾಡುತ್ತಾರೆ. ಅದೆಲ್ಲವನ್ನು ನಾವು ನೋಡಿದ್ದೇವೆ. ಇವರನ್ನು ಬಚಾವ್ ಮಾಡಬೇಕೆಂದು ಇದ್ದಿದ್ದರೆ ಪೆನ್ ಡ್ರೈವ್ ಸಿಕ್ಕಿದ ದಿನವೇ ಪ್ರಜ್ವಲ್’ರನ್ನು ಕರೆದು ಸ್ಪರ್ಧೆ ಮಾಡಬೇಡ ಎಂದು ಹೇಳಬೇಕಿತ್ತು. ಅವರು ಸ್ಪರ್ಧೆ ಮಾಡದೇ ಇದ್ದಿದ್ದರೇ ಈ ವಿಚಾರವೇ ಹೊರಗೆ ಬರುತ್ತಿರಲಿಲ್ಲ ಎಂದರು.
ಈ ದೇಶದ ಭವಿಷ್ಯ, ಹಾಸನದ ಹೆಣ್ಣು ಮಕ್ಕಳ ಮಾನ ಮರ್ಯಾದೆ ಉಳಿಸಬೇಕೆಂಬ ಕಾಳಜಿ ಇದ್ದಿದ್ದರೆ ಪ್ರಜ್ವಲ್’ರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಿರಲಿಲ್ಲ. ಯಾರ ಮಾನ ಮರ್ಯಾದೆ ಹರಾಜು ಆದರೂ ಚಿಂತೆ ಇಲ್ಲ. ಯಾವುದಾದರೂ ವ್ಯಕ್ತಿ ಮೇಲೆ ದೃಷ್ಟಿ ಇಟ್ಟರೆ, ಆ ವ್ಯಕ್ತಿಯ ವ್ಯಕ್ತಿತ್ವವನ್ನು ಹಾಳು ಮಾಡಬೇಕು, ಮುಗಿಸಬೇಕು ಅನ್ನುವ ಉದ್ದೇಶ ಅವರಿಗೆ ಇರುತ್ತದೆ. ರೇವಣ್ಣರನ್ನು ಮುಗಿಸುವ ಕೆಲಸ ಇವರೆ ಮಾಡಿದ್ದಾರೆ. ಬೇರೆ ಯಾರು ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಎಚ್.ಡಿ ರೇವಣ್ಣಗೆ ಮೇ 14ರ ವರೆಗೆ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರ ತಲುಪಿದ ಮಾಜಿ ಪ್ರಧಾನಿ ಪುತ್ರ
ಈ ಪ್ರಕರಣದಲ್ಲಿ ಕುಮಾರಸ್ವಾಮಿ ಮುಖ್ಯ ಪಾತ್ರದಾರಿ. ಇದನ್ನು ಡಿ.ಕೆ ಶಿವಕುಮಾರ್ ಅವರ ತಲೆಮೇಲೆ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ನಮಗೆ ಕುಮಾರಸ್ವಾಮಿಯಷ್ಟು ನೀಚ ಬುದ್ದಿ ಇಲ್ಲ. ಇನ್ನೊಬ್ಬರನ್ನು ಮುಗಿಸುವ ಕೆಲಸ, ಹಾಳು ಮಾಡುವುದು ನಮಗೆ ಗೊತ್ತಿಲ್ಲ. ಅವರು ನನ್ನ ಬಗ್ಗೆ ಮಾತನಾಡಿದರೆ ನಾನು ಅವರ ಬಗ್ಗೆ 10ರಷ್ಟು ಮಾತನಾಡುತ್ತೇನೆ. ಅವರ ಬಗ್ಗೆ ಎಲ್ಲವೂ ಗೊತ್ತಿದೆ ಎಂದು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಗುಡುಗಿದರು.
ಶಾಸಕ ಎಸ್.ಆರ್ ಶ್ರೀನಿವಾಸ್ ಈ ಹಿಂದೆ ಜೆಡಿಎಸ್ ಪಕ್ಷದಿಂದ ಗುಬ್ಬಿ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರಾಗಿ, ಕುಮಾರಸ್ವಾಮಿ ಆಪ್ತ ವಲಯದಲ್ಲಿ ಇದ್ದರು. ಜೊತೆಗೆ ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ ಪ್ರಸಕ್ತ ಅವಧಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಪ್ರಜ್ವಲ್ ರೇವಣ್ಣ ದುಬೈ ಬಿಟ್ಟು ಇನ್ನು ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ
+ There are no comments
Add yours