ತುಮಕೂರು: SSLC ಫೇಲಾದವರಲ್ಲಿ ಬಾಲಕರೇ ಹೆಚ್ಚು!

1 min read

ತುಮಕೂರು ಶೈಕ್ಷಣಿಕ ಜಿಲ್ಲೆ: ಚೇತನ ವಿದ್ಯಾಮಂದಿರದ ಶ್ರೀರಕ್ಷಾ ಪ್ರಥಮ

Tumkurnews
ತುಮಕೂರು: ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕೆಯನ್ನು ಒಟ್ಟು 81 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿದ್ದು, 22150 ವಿದ್ಯಾರ್ಥಿಗಳು ಹಾಜರಾಗಿದ್ದರು.
ರಾಜ್ಯದ ಎಸ್.ಎಸ್.ಎಲ್.ಸಿ ಫಲಿತಾಂಶವು ಶೇ.73 ಇದ್ದು, ತುಮಕೂರು ಶೈಕ್ಷಣಿಕ ಜಿಲ್ಲೆಯ ಫಲಿತಾಂಶವು ಶೇ.75.28 ಇದೆ.
ಜಿಲ್ಲೆಯಲ್ಲಿ 11,664 ಬಾಲಕರು ಮತ್ತು 10,486 ಬಾಲಕಿಯರು ಸೇರಿದಂತೆ ಒಟ್ಟು 22,150 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 7,805 ಬಾಲಕರು ಮತ್ತು 8,870 ಬಾಲಕಿಯರು ಸೇರಿ ಒಟ್ಟು 16,675 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಜಿಲ್ಲೆಗೆ 75.28% ರಷ್ಟು ಫಲಿತಾಂಶ ಬಂದಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶ: ಶಿರಾ ತಾಲ್ಲೂಕಿನ ಹರ್ಷಿತಾ ರಾಜ್ಯಕ್ಕೆ ದ್ವಿತೀಯ
ಜಿಲ್ಲೆಯ ಕುಮಾರಿ ಶ್ರೀರಕ್ಷಾ, ಚೇತನ ವಿದ್ಯಾಮಂದಿರ, ಹೊರಪೇಟೆ, ತುಮಕೂರು ತಾಲ್ಲೂಕು, ಈ ವಿದ್ಯಾರ್ಥಿನಿಯು 625ಕ್ಕೆ 621 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
5475 ಮಂದಿ ಅನುತ್ತೀರ್ಣ: ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 5475 ಮಂದಿ‌ ಅನುತ್ತೀರ್ಣರಾಗಿದ್ದಾರೆ. 3859 ಬಾಲಕರು ಮತ್ತು 1616 ಮಂದಿ ಬಾಲಕಿಯರು ಅನುತ್ತೀರ್ಣರಾಗಿದ್ದಾರೆ‌.

ಎಸ್ಸೆಸ್ಸೆಲ್ಸಿ: ಉಡುಪಿ ಜಿಲ್ಲೆ ಪ್ರಥಮ: ಇಲ್ಲಿದೆ ಜಿಲ್ಲಾವಾರು ಫಲಿತಾಂಶ

ತುಮಕೂರು: ಸಾಲ ವಸೂಲಿಗೆ ಕಿರುಕುಳ ನೀಡಿದರೆ ಈ ನಂಬರ್’ಗೆ ಕಾಲ್ ಮಾಡಿ: ಎಸ್.ಪಿ

About The Author

You May Also Like

More From Author

+ There are no comments

Add yours