ಗ್ರಾಮದೇವತೆ ಭಕ್ತರಿಂದ ಗೌರವಾರ್ಪಣೆ
ಗ್ರಾಮದೇವತೆ ಭಕ್ತರಿಂದ ಗೌರವಾರ್ಪಣೆ Tumkurnews.in ತುಮಕೂರು: ನಗರದ ಚಿಕ್ಕಪೇಟೆಯ ಪೇಟೆ ಗ್ರಾಮದೇವತೆ ಅಮ್ಮನವರ ದೇವಸ್ಥಾನದ ಭಕ್ತರು ಸಮಾಜಸೇವಕಿ ಪೂರ್ಣಿಮಾ ವಿಶ್ವನಾಥ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಪೂರ್ಣಿಮಾ ಅವರ ಪತಿ ವಿಶ್ವನಾಥ್ ಅವರು ಪ್ರತಿ ವರ್ಷ ಈ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಅನ್ನಸಂತರ್ಪಣೆ ವ್ಯವಸ್ಥೆ ಮಾಡುತ್ತಾ ಬಂದಿದ್ದರು. ಇತ್ತೀಚೆಗೆ ವಿಶ್ವನಾಥ್ ಅವರು ನಿಧನರಾಗಿದ್ದು, ಪತಿ ಮಾಡುತ್ತಿದ್ದ ಸೇವಾ ಕಾರ್ಯವನ್ನು ಪೂರ್ಣಿಮಾ ಮುಂದುವರೆಸಿದ್ದರು. ಅವರ ಸೇವೆ ಗೌರವಿಸಿ ಸಮಾಜಸೇವಕ ನಟರಾಜಶೆಟ್ಟರು ಹಾಗೂ ಭಕ್ತರು ಪೂರ್ಣಿಮಾ ಅವರನ್ನು ಸನ್ಮಾನಿಸಿದರು.
Continue Reading