ಬೇಕಾಬಿಟ್ಟಿ ಅಂತ್ಯ ಸಂಸ್ಕಾರ, ಮರುದಿನ ಕೊರೋನಾ ಪಾಸಿಟಿವ್! ಊರವರ ಕಥೆ ಏನಾಗಬೇಕು?

1 min read

  • ತುಮಕೂರು (ಜು.2) tumkurnews.in

ಕುಣಿಗಲ್ ತಾಲ್ಲೂಕಿನ ತಿಮ್ಮೇಗೌಡನ ಪಾಳ್ಯದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯನ್ನು ಕೇಂದ್ರ ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಡೆಸಿರುವ ಆರೋಪ ಕೇಳಿ ಬಂದಿದೆ.
ಜೂನ್ 25 ರಂದು ಬೆಂಗಳೂರಿಗೆ ತೆರಳಿದ್ದ ಗ್ರಾಮದ ಮಹಿಳೆಯ ಪತಿಯ ಅಂತ್ಯ ಸಂಸ್ಕಾರ ಬೇಕಾಬಿಟ್ಟಿ ನಡೆದಿರುವ ಆರೋಪವನ್ನು ಸಾರ್ವಜನಿಕರು ಮಾಡಿದ್ದಾರೆ.
ಬೆಂಗಳೂರಿನಿಂದ ಗ್ರಾಮಕ್ಕೆ ಮರಳಿದ ಬಳಿಕ ಮಹಿಳೆಯಲ್ಲಿ ಜ್ವರ ಕಾಣಿಸಿಕೊಂಡಿತ್ತು. ಈ ಬಗ್ಗೆ ಸ್ಥಳೀಯರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಕೊರೋನಾ ಪರೀಕ್ಷೆ ನಡೆಸಿರಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಈ ನಡುವೆ ಜೂನ್ 30 ರಂದು ಮಹಿಳೆಯ ಪತಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದರು. ಆಗಲೂ ಆರೋಗ್ಯ ಇಲಾಖೆ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ. ಹೀಗಾಗಿ ಮೃತನ ಸಂಬಂಧಿಕರು, ಬಯಲಿನಲ್ಲೇ ಇಡೀ ಗ್ರಾಮಸ್ಥರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಅಂತ್ಯ ಸಂಸ್ಕಾರದ ಮಧ್ಯದಲ್ಲಿ ಬಂದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮೃತನ ಗಂಟಲು ಮಾದರಿ ಪಡೆದು, ನಾಲ್ವರಿಗೆ ಪಿಪಿಇ ಕಿಟ್ ನೀಡಿ ಅಂತ್ಯ ಕ್ರಿಯೆ ನೆರವೇರಿಸಿದ್ದಾರೆ. ದುರಂತವೆಂದರೆ ಜುಲೈ 1 ರಂದು ಮೃತ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಇದರಿಂದಾಗಿ ಇಡೀ ಗ್ರಾಮದಲ್ಲಿ ಕೊರೋನಾ ಭೀತಿ ಆವರಿಸಿದೆ. ಆರೋಗ್ಯ ಇಲಾಖೆಯ ಬೇಜವಬ್ದಾರಿತನಕ್ಕೆ ಯಾರು ಹೊಣೆ ಎಂಬುದು ಪ್ರಶ್ನೆಯಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ನಾಗೇಂದ್ರಪ್ಪ ಅವರು ಆರೋಪವನ್ನು ನಿರಾಕರಿಸಿದ್ದು, ಯಾವುದೇ ಲೋಪವಾಗಿಲ್ಲ ಎಂದಿದ್ದಾರೆ.
Tumkurnews.in

About The Author

You May Also Like

More From Author

+ There are no comments

Add yours