ಶಿರಾ ನಗರಸಭೆಯಿಂದ ವಿವಿಧ ಸೌಲಭ್ಯ ವಿತರಿಸಲು ಅರ್ಜಿ ಆಹ್ವಾನ

1 min read

ಶಿರಾ, (ಜೂ.22) tumkurnews.in
ಶಿರಾ ನಗರಸಭೆ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ಜನಾಂಗದವರಿಗೆ ಶೇ.24.10, ಶೇ.7.25ರ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. ಚರ್ಮ ಕುಟೀರ, ಅಡುಗೆ ಅನಿಲ ಸಂಪರ್ಕ, ಎಂ.ಬಿ.ಬಿ.ಎಸ್, ಬಿ.ಇ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್, ಆರೋಗ್ಯ ಚಿಕಿತ್ಸೆ ಪಡೆದಂತಹವರಿಗೆ ಸಹಾಯಧನ, ಬಡ ಜನಾಂಗದ ಮನೆಗಳಿಗೆ ಮಳೆ ನೀರು ಕೊಯ್ಲು ಪದ್ದತಿ ಅಳವಡಿಕೆ ಸೌಲಭ್ಯಗಳನ್ನು ಒದಗಿಸಲಾಗುವುದು.
ಈ ಸೌಲಭ್ಯವನ್ನು ಪಡೆಯಲಿಚ್ಛಿಸುವವರು ಶಿರಾ ನಗರ ಸಭೆ ಕಚೇರಿಯ ಡೇ-ನಲ್ಮ್ ವಿಭಾಗದಲ್ಲಿ ನಿಗಧಿತ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಮೂರು ಪಾಸ್‍ಪೋರ್ಟ್ ಅಳತೆಯ ಫೋಟೋ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಚುನಾವಣೆ ಗುರುತಿನ ಪತ್ರವನ್ನು ಲಗತ್ತಿಸಬೇಕು.
ಲ್ಯಾಪ್‍ಟಾಪ್‍ಗಾಗಿ ಅರ್ಜಿ ಸಲ್ಲಿಸುವವರು 2020-21ನೇ ಸಾಲಿನಲ್ಲಿ ಎಂಬಿಬಿಎಸ್, ಬಿಇ ಓದುತ್ತಿರುವ ಬಗ್ಗೆ ವ್ಯಾಸಂಗ ದೃಢೀಕರಣ ಪತ್ರ, ಆರೋಗ್ಯ ಚಿಕಿತ್ಸೆಗಾಗಿ ಸಹಾಯಧನ ಪಡೆಯಲಿಚ್ಚಿಸುವವರು 2020-21ನೇ ಸಾಲಿನಲ್ಲಿ ಚಿಕಿತ್ಸೆ ಪಡೆದ ಬಗ್ಗೆ ವೈದ್ಯಾಧಿಕಾರಿಗಳ ವರದಿ, ತಪಾಸಣೆ ಮಾಡಿರುವ ವರದಿ, ವೈದ್ಯಕೀಯ ಬಿಲ್ಲು ಹಾಗೂ ಮತ್ತಿತರ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಜುಲೈ 20ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours