ಮಧುಗಿರಿ ಜಿಲ್ಲೆ ಅರ್ಹತೆಯ ನೋಟ
Tumkurnews
ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಜಿಲ್ಲೆ ರಚನೆಯ ಹೋರಾಟ ಜೋರಾಗುತ್ತಿದ್ದು, ಮಧುಗಿರಿ ತಾಲ್ಲೂಕನ್ನು ಜಿಲ್ಲಾಕೇಂದ್ರ ಮಾಡುವಂತೆ ಜನತೆ ಆಗ್ರಹಿಸುತ್ತಿದ್ದಾರೆ. ಮಧುಗಿರಿ ಏಕೆ ಜಿಲ್ಲಾಕೇಂದ್ರವಾಗಬೇಕು ಎಂದು ಯುವ ಲೇಖಕ ಹರೀಶ್ ಬ್ರಹ್ಮದೇವರಹಳ್ಳಿ ಅವರು 10 ಪ್ರಮುಖ ಕಾರಣಗಳನ್ನು ನೀಡಿದ್ದಾರೆ. ಓದಿ..
ಮಧುಗಿರಿಯನ್ನು ಜಿಲ್ಲಾಕೇಂದ್ರ ಮಾಡಿ: ಸಿಎಂಗೆ ಬೇಡಿಕೆ ಇಟ್ಡ ಪರಮೇಶ್ವರ್!
1) ಮಧುಗಿರಿ ಈಗಾಗಲೇ ಶೈಕ್ಷಣಿಕ ಜಿಲ್ಲೆ ಎಂದು ಹೆಸರಾಗಿದೆ. ಇನ್ನೇನಿದ್ದರೂ ಶೈಕ್ಷಣಿಕ ಜಿಲ್ಲೆಯು ಕಂದಾಯ ಜಿಲ್ಲೆಯಾಗುವುದು ಅಷ್ಟೇ ಬಾಕಿ.
2) ಆಂಧ್ರದ ಗಡಿಯೊಂದಿಗೆ ಹೊಂದಿಕೊಂಡಿರುವ ಮಧುಗಿರಿ ತಾಲ್ಲೂಕು ಬರಪೀಡಿತ ಪ್ರದೇಶವಾಗಿದ್ದು, ಯಾವ ಅಭಿವೃದ್ಧಿ( ಕೆಲವೊಂದು ಹೊರತುಪಡಿಸಿ)ಮಾಡದೇ ಕಡೆಗಣಿಸಿದ ಭಾಗವಾಗಿದೆ. ಹಾಗಾಗಿ ಮಧುಗಿರಿ ಪ್ರತ್ಯೇಕ ಜಿಲ್ಲೆಯಾಗಿ ಸರ್ವತೋಮುಖ ಅಭಿವೃದ್ಧಿಗೊಂಡಲ್ಲಿ ಜನತೆಗೆ ಅನುಕೂಲವಾಗಲಿದೆ. ಹಾಗಾಗಿ ಮಧುಗಿರಿ ಪ್ರತ್ಯೇಕ ಜಿಲ್ಲೆಯಾಗಲೇ ಬೇಕು.
3) ಏಷ್ಯಾ ಖಂಡದಲ್ಲಿಯೇ ಹೆಸರಾಂತ ಏಕಾಶಿಲಾ ಬೆಟ್ಟ ಮಧುಗಿರಿಯಲ್ಲಿ ಇದೆ. ಇದು ಜಗತ್ಪ್ರಸಿದ್ಧವಾಗಿದೆ. ಪ್ರವಾಸೋದ್ಯಮದಿಂದ ಅಭಿವೃದ್ಧಿ ಪಡಿಸಿ ಜಿಲ್ಲಾ ಕೇಂದ್ರ ಮಾಡಿದರೇ ಮಧುಗಿರಿ ಗಣನೀಯವಾಗಿ ಬೆಳೆದು ಉತ್ತಮ ಶೈಕ್ಷಣಿಕ ಪ್ರವಾಸಿ ತಾಣವಾಗಿ ಬೆಳೆದು ನಿಲ್ಲುತ್ತದೆ. ಹಾಗಾಗಿ ಮಧುಗಿರಿ ಜಿಲ್ಲೆಯಾಗಬೇಕು.
ಮಧುಗಿರಿ V/S ತಿಪಟೂರು ಜಿಲ್ಲಾ ಕೇಂದ್ರ: ಮಹತ್ವದ ಘೋಷಣೆ ಮಾಡಿದ ಸಿಎಂ
4) ಜಿಲ್ಲಾ ಕೇಂದ್ರವಾಗಿ ಮಾಡಲು ಮಧುಗಿರಿಗೆ ಪ್ರತ್ಯೇಕ ಕ.ರಾ.ರ.ಸಾ ನಿಗಮವಿದೆ, ಹೈಕೋರ್ಟ್ ಮಾದರಿ ನ್ಯಾಯಾಲಯ ಸಂಕೀರ್ಣವಿದೆ, ಪ್ರಾದೇಶಿಕ ಸಾರಿಗೆ ಕಚೇರಿ, ಶೀಘ್ರದಲ್ಲಿಯೇ ಜಿಲ್ಲೆಯಾಗಿ ಘೋಷಣೆಯಾದರೂ ತುರ್ತಾಗಿ ಸಿರಾ ಮುಖ್ಯರಸ್ತೆಯಲ್ಲಿನ ಲೋಕೋಪಯೋಗಿ ಕಚೇರಿಯನ್ನು ಡಿಸಿ ಕಚೇರಿಯಾಗಿ ಪರಿವರ್ತಿಸಿ ಅಧಿಕಾರ ನಡೆಸುವ ಕಚೇರಿಯಿದೆ ಹಾಗೂ ಎಸ್ಪಿ ಕಚೇರಿ ಹೀಗೆ ಎಲ್ಲಾ ರೀತಿಯಲ್ಲೂ ಅರ್ಹತೆ ಪಡೆದು ಜಿಲ್ಲಾ ಕಿರೀಟ ಮುಡಿಗೇರಿಕೊಳ್ಳಲು ಮಧುಗಿರಿ ಸಜ್ಜಾಗಿದೆ.
ರಾಜ್ಯದ ಹೊಸ ಜಿಲ್ಲೆಯಾಗುತ್ತಾ ಶಿರಾ? ಯಾರು ಏನಂದ್ರು? ಒಂದು ಅವಲೋಕನ
5) ಪಾವಗಡ ತಾಲ್ಲೂಕಿನ ತಿರುಮಣಿಯಂತಹ ದೂರದ ಗಡಿ ಭಾಗದ ಊರುಗಳು ತುಮಕೂರು ಜಿಲ್ಲಾ ಕೇಂದ್ರದಿಂದ ಬಹಳ ದೂರದಲ್ಲಿವೆ. ಸಾರ್ವಜನಿಕರು ಓಡಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹಾಗಾಗಿ ಮಧುಗಿರಿ ಜಿಲ್ಲೆಯಾಗುವುದರಿಂದ ಆಂಧ್ರದ ಗಡಿಯೊಂದಿಗೆ ಗ್ರಾಮಗಳಿಗೆ ಸುಗಮ ಸಂಚಾರ, ಸುಲಭವಾಗಿ ಕಚೇರಿ ಭೇಟಿ ಎಲ್ಲದಕ್ಕೂ ಅನುಕೂಲವಾಗಲಿದೆ. ಪಾವಗಡ, ಶಿರಾ, ಕೊರಟಗೆರೆ, ಮಧುಗಿರಿ ಕೇಂದ್ರ ಬಿಂದುವಾಗಿ ಜಿಲ್ಲೆ ಮಾಡುವುದು ಸೂಕ್ತವೆಂದು ಕಾಣುತ್ತಿದೆ.
ತುಮಕೂರು ಜನತೆಗೆ ಪಾಲಿಕೆಯಿಂದ ವಿಶೇಷ ಸೂಚನೆ: ಗಮನಿಸಿ
6) ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ವ್ಯಾಪ್ತಿಯ ಮೈದನಹಳ್ಳಿ ಗ್ರಾಮದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ, ಹಿಂಡು ಹಿಂಡಾಗಿಯೇ ಪ್ರವಾಸಿಗರು ಕಣ್ತುಂಬಿಕೊಳ್ಳುವ ಕೃಷ್ಣಮೃಗ ವನ್ಯಧಾಮವಿದೆ. ದೊಡ್ಡೇರಿ ಹೋಬಳಿಯ ತಿಮ್ಮಾಲಾಪುರದಲ್ಲಿ ಕರಡಿದಾಮವಿದೆ.
7) ಮೈಸೂರು ಅರಸರು, ಟಿಪ್ಪು ಸುಲ್ತಾನ್ ಇನ್ನೂ ಇತರೆ ಮನೆತನಗಳು ಆಳ್ವಿಕೆ ಮಾಡಿದ ಸ್ಥಳಗಳಲ್ಲಿ ಅಚ್ಚಳಿಯದೇ ಉಳಿಯುವ, ಇತಿಹಾಸ ತಿಳಿಸುವ ಕೋಟೆಗಳು, ದೇವಾಲಯಗಳು, ಪುರಾತನ ಕಾಲದ ಕುರುಹುಗಳು ತಾಲ್ಲೂಕಿನಲ್ಲಿವೆ.
ಹಾಲಿನ ಡೈರಿಗಳಲ್ಲಿ ವರ್ಷಕ್ಕೆ 1 ಕೋಟಿ ರೂ. ವಂಚನೆ! ಹೈನುಗಾರರೇ ಎಚ್ಚರ!
8) ಪಾವಗಡ, ಸಿರಾ, ಕೊರಟಗೆರೆ, ಮಧುಗಿರಿ ನಾಲ್ಕು ತಾಲ್ಲೂಕುಗಳಿಗೆ ಕೇಂದ್ರ ಬಿಂದುವಿನಂತೆ ಮಧುಗಿರಿ ಇದ್ದು, ಎಲ್ಲಾ ತಾಲ್ಲೂಕಿಗೂ ಹತ್ತಿರವಿದೆ.
9) ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸಾಧನೆ ಮಾಡಿ ಸರ್ಕಾರಿ ಕಾಲೇಜು ಜೊತೆಗೆ ಹೈಟೆಕ್ ಖಾಸಗಿ ಶಾಲೆಗಳು ಕಾಲೇಜುಗಳು ತಲೆ ಎತ್ತುತ್ತಿವೆ. ಹಾಗೆಯೇ ಮಧುಗಿರಿ ಹೃದಯಭಾಗವಾದ ಪುರಸಭೆಯ ಭವ್ಯವಾದ ಕಚೇರಿ, ನಗರಸಭೆ ಆಡಳಿತಕ್ಕೆ ಅನುಕೂಲವಾಗುವಷ್ಟು ಬಹು ಕೊಠಡಿಯ ಕಟ್ಟಡವಿದೆ.
ಬೋಗಸ್ ಹಕ್ಕುಪತ್ರ, ಅರಣ್ಯ ಕಬಳಿಕೆ: ಸಚಿವರ ಮುಂದೆ ಬಯಲಾದ ಹಗರಣ
10) ಇದೇ ಕ್ಷೇತ್ರದಲ್ಲಿ ಒಂದೆರಡು ಬಾರಿ ಗೆದ್ದು ವಿಧಾನಸೌಧ ಪ್ರವೇಶಿಸಿ ಶಾಸಕರು, ಸಚಿವರು, ಉಪಮುಖ್ಯಮಂತ್ರಿಯಾಗಿ ಕ್ಷೇತ್ರಕ್ಕೆ ಸಕಲ ಸೌಲಭ್ಯ ತರುವ ರಾಜಕೀಯ ಶಕ್ತಿಯಿದೆ.
ಇಷ್ಟೆಲ್ಲ ಶೈಕ್ಷಣಿಕ ಆಡಳಿತದ ಅನುಕೂಲಕ್ಕಾಗಿ ಸಕಲ ಸೌಲಭ್ಯ ಹೊಂದಿರುವ ಮಧುಗಿರಿ ಜಿಲ್ಲೆ ಆಗಲೇ ಬೇಕು ಇದು ಮಧುಗಿರಿ ಜನತೆಯ ಆಗ್ರಹ.
(ಚಿತ್ರ: ಲೇಖಕರು)
+ There are no comments
Add yours