ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

1 min read

Tumkur News

ಕೊರಟಗೆರೆ : ವಿದ್ಯುತ್ ತಂತಿ ಸ್ಪರ್ಶಿಸಿಕೊಂಡು ಜಮೀನಿನಲ್ಲಿ ಕೆಲಸಮಾಡುತ್ತಿದ್ದ ಯುವಕನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ರಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾರು ಬಸ್ ಡಿಕ್ಕಿ; ಇಬ್ಬರು ಶಾಲಾ ವಿದ್ಯಾರ್ಥಿಗಳ ಸಾವು

ಸೋಮಶೇಖರ್(25) ಮೃತಪಟ್ಟ ದುರ್ದೈವಿಯಾಗಿದ್ದು, ತನ್ನ ಜಮೀನಿನಲ್ಲಿ ಮಿಡಿ ಸೌತೆ ಕಾಯಿ ಬೆಳೆಸಿದ್ದು ಸೌತೆ ಕಾಯಿ ಬಳ್ಳಿ ಹಬ್ಬಲು ಮರದ ಕೋಲುಗಳನ್ನು ಉರುತ್ತಿದ್ದ ವೇಳೆ ಮರದ ಕೋಲು ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಸ್ಪರ್ಶಗೊಂಡು ಯುವಕ ಬಿದ್ದಿದ್ದಾನೆ.

ಡಿಎಸ್ಎಸ್ ಮುಖಂಡನ ಬರ್ಬರ ಕೊಲೆ!

ಈ ವೇಳೆ ಅಲ್ಲೇ ಇದ್ದ ಸಹೋದರ ಸಿದ್ದರಾಜು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿ ಕಾಣೆ

ಸಹೋದರ ಸಿದ್ದರಾಜು ನೀಡಿದ ದೂರಿನ ಮೇರೆಗೆ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

You May Also Like

More From Author

+ There are no comments

Add yours