ಎರಡನೇ ದಿನಕ್ಕೆ ಕಾಲಿಟ್ಟ ರೈತರ ಅನಿರ್ದಿಷ್ಟಾವಧಿ ಧರಣಿ

1 min read

Tumkur News
ತುಮಕೂರು: ಬಗರ್ ಹುಕಂ ಸಾಗುವಳಿದಾರರು ಹಕ್ಕುಪತ್ರ ನೀಡಲು ಒತ್ತಾಯಿಸಿ, ಅರಣ್ಯ ಇಲಾಖೆ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿ, ಜಿಲ್ಲಾಧಿಕಾರಿ ಕಛೇರಿ ಎದುರು ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿ ಎರಡನೇ ಕಾಲಿಟ್ಟು ಭೂಮಿ ವಾಪಸ್ಸು ಕೊಡುವಂತೆ ಪಟ್ಟು ಹಿಡಿದಿದೆ.

ಹಲವು ನಾಯಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ; ಬಿ.ಎಸ್.ವೈ.

ಎರಡನೇ ದಿನದ ಧರಣಿ ಉದ್ಘಾಟಿಸಿ ಮಾತಾನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಹ ಕಾರ್ಯದರ್ಶಿ ಟಿ. ಯಶವಂತ ಮಾತಾನಾಡಿ, ಬಗರ್ ಹುಕಂ ರೈತರು ಹಲವಾರು ವರ್ಷಗಳಿಂದ ಸಾವಿರಾರು ಪ್ರತಿಭಟನೆ ನಡೆಸಿದ್ದಾರೆ ಆದರೆ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ. ತುಮಕೂರು ಜಿಲ್ಲೆ ಯಲ್ಲಿ ಅರಣ್ಯ ಇಲಾಖೆ ಕಿತ್ತುಕೊಂಡಿರುವ ಭೂಮಿ ವಾಪಸ್ಸು ಕೊಡಬೇಕು ಈ ಪ್ರಕ್ರಿಯೆ ಗೆ ಚಾಲನೆ ಕೊಡಲು ಅರಣ್ಯ ಇಲಾಖೆ ತಕರಾರು ಇರುವ ಎಲ್ಲಾ ಭೂಮಿಗಳನ್ನು ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಬೇಕು. ಈ ಕೂಡಲೇ ಕಂದಾಯ, ಸರ್ವೆ ,ಅರಣ್ಯ ಮುಂತಾದ ಅಧಿಕಾರಿಗಳ ಹಾಗೂ ರೈತ ಮುಖಂಡರ ಸಭೆ ನಡೆಸಿ ಜಂಟಿ ಸರ್ವೆ ಮಾಡುವುದಾಗಿ ತೀರ್ಮಾನಿಸಿ ನಡಾವಳಿ ಪ್ರತಿ ಒದಗಿಸಬೇಕು ಹಾಗೂ ಜಂಟಿ ಸರ್ವೆ ಕೆಲಸ ಮುಗಿಯುವ ತನಕ ಅರಣ್ಯ ಇಲಾಖೆ ರೈತರ ಸ್ವಾಧೀನವನ್ನು ಮುಟ್ಟದಂತೆ ನಿರ್ಭಂದಿಸಬೇಕು ಎಂದು ಆಗ್ರಹಿಸಿದರು.

ರಾಹುಲ್ ಗಾಂಧಿ ಮೇಲಿನ ಆರೋಪ ಸಾಬೀತಾದರೆ, ಎಲ್ಲರಂತೆ ಶಿಕ್ಷೆ; ಬಿ.ಎಸ್.ವೈ.

ಧರಣಿ ಸ್ಥಳಕ್ಕೆ ಮಾಜಿ ಸಚಿವ ಟಿ.ಬಿ ಜಯಚಂದ್ರ ,ಮಾಜಿ ಶಾಸಕರಾದ ಸುಧಾಕರ್ ಲಾಲ್ ,ಎಂ.ಟಿ ಕೃಷ್ಣಪ್ಪ ರವರು ಭೇಟಿ ನೀಡಿ ರೈತರ ಹೋರಾಟ ನ್ಯಾಯವಾಗಿದೆ ಎಂದು ಬೆಂಬಲ ವ್ಯಕ್ತಪಡಿಸಿದರು.

140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು, ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ; ಬಿ.ಎಸ್.ವೈ

ಈ ಸಂದರ್ಭದಲ್ಲಿ ಮಾತಾನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಂಚಾಲಕ ಅಜ್ಜಪ್ಪ ರವರು ಮಾತಾನಾಡಿ ಗಂಗಯ್ಯನ ಪಾಳ್ಯ ದಿಂದ ಪಾದಯಾತ್ರೆ ಮೂಲಕ ಎರಡು ವರ್ಷದ ಹಿಂದೆ ಹೋರಾಟ ನಡೆಸಿದಾಗ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಜಿಲ್ಲಾಧಿಕಾರಿ ಹಾಗೂ ರೈತರ ಸಭೆ ನಡೆಸಿ ಜಂಟಿ ಸರ್ವೆ ಮಾಡಿ ನಂತರ ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದರು ಆದರೆ ಇದುವರೆಗೂ ಆಗಿಲ್ಲ .ಇಂದಿನ ಉಸ್ತುವಾರಿ ಸಚಿವರಿಗೆ ತುಮಕೂರು ಜಿಲ್ಲೆ, ಹಳ್ಳಿ, ಹೋಬಳಿಗಳ ಪರಿಚಯ ವೇ ಇಲ್ಲ ಎಂದು ಟೀಕಿಸಿದರು.

ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಅವ್ಯವಸ್ಥೆ; ಗೊತ್ತಾದ್ರೆ ನಿಮಗೂ ಆಶ್ಚರ್ಯ!

ಪ್ರತಿಭಟನೆ ನೇತೃತ್ವವನ್ನು ಜಿಲ್ಲಾ ಸಂಚಾಲಕ ಅಜ್ಜಪ್ಪ ಸಿ, ಮುಖಂಡರಾದ ಚನ್ನಬಸವಣ್ಣ,ಗೌರಮ್ಮ, ರಾಚಪ್ಪ, ನರಸಿಂಹಮೂರ್ತಿ, ಶಿವಣ್ಣ, ದೊಡ್ಡನಂಜಯ್ಯ, ಕರಿಬಸವಯ್ಯ, ಮಂಜುನಾಥ್, ಮೂಡ್ಲಪ್ಪ, ಸುಬ್ರಹ್ಮಣ್ಯ ವಹಿಸಿದ್ದರು.

About The Author

You May Also Like

More From Author

+ There are no comments

Add yours