ಮಲ ಹೊರುವಂತಹ ಅನಿಷ್ಟ ಪದ್ಧತಿ ನಿರ್ನಾಮವಾಗಬೇಕು: ಎಂ.ಶಿವಣ್ಣ

1 min read

Tumkur News
ತುಮಕೂರು: ಭಾರತದ ಪ್ರಜೆಗಳಾದ ನಮ್ಮೆಲ್ಲರಿಗೂ ಗೌರವಯುತವಾಗಿ ಬದುಕುವ ಹಕ್ಕನ್ನು ನಮ್ಮ ಸಂವಿಧಾನವು ಒದಗಿಸಿಕೊಟ್ಟಿದೆ. ಆದರೆ ಮಲ ಹೊರುವ ಪದ್ಧತಿ (ಮ್ಯಾನ್ಯುಯಲ್ ಸ್ಕ್ಯಾವೆಂಜರ್)ಯಂತಹ ಅನಿಷ್ಟ ವ್ಯವಸ್ಥೆಯಿಂದಾಗಿ ಹಲವರು ಇಂದಿಗೂ ಸಹಾ ಈ ಹಕ್ಕಿನಿಂದ ವಂಚಿತರಾಗಿದ್ದಾರೆ. ಆದ್ದರಿಂದ ಮಲ ಹೊರುವಂತಹ ಅನಿಷ್ಟ ಪದ್ಧತಿ ನಿರ್ನಾಮವಾಗಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ. ಶಿವಣ್ಣ ಅವರು ತಿಳಿಸಿದರು.

ಜಿಲ್ಲೆಯ ಎಲ್ಲಾ ಪಂಚಾಯಿತಿಗಳಲ್ಲೂ ಮಾಹಿತಿ ಕಣಜ ವಿಸ್ತರಣೆ: ಡಾ. ಕೆ. ವಿದ್ಯಾಕುಮಾರಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ, ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಕಾಯ್ದೆಯ ಕುರಿತು ಮಾಹಿತಿ ನೀಡಿ, ಮಾತನಾಡಿದರು.

ರಾಹುಲ್ ಗಾಂಧಿ ಮೇಲಿನ ಆರೋಪ ಸಾಬೀತಾದರೆ, ಎಲ್ಲರಂತೆ ಶಿಕ್ಷೆ; ಬಿ.ಎಸ್.ವೈ.

ಗತಕಾಲದಿಂದ ನಡೆಯುತ್ತಿರುವ ಮಲಹೋರುವ ಅನ್ಯಾಯವನ್ನು ಮತ್ತು ಅಗೌರವದ ಬದುಕನ್ನು ಸರಿಪಡಿಸುವ ಸಲುವಾಗಿ ‘ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013’ನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಡಿಎಸ್ಎಸ್ ಮುಖಂಡನ ಬರ್ಬರ ಕೊಲೆ!

ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೆಪ್ಟಿಕ್ ಟ್ಯಾಂಕ್/ಯುಜಿಡಿಗಳನ್ನು ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರಗಳ ಮೂಲಕ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಮಲವನ್ನು ಕೈಯಿಂದ ಎತ್ತಿ ಹಾಕುವ ಕಾರ್ಯಗಳಲ್ಲಿ ತೊಡಗದಂತೆ(ಮ್ಯಾನ್ಯುಯಲ್ ಸ್ಕ್ಯಾವೆಜಿಂಗ್) ಪೌರ ಕಾರ್ಮಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಹಲವು ನಾಯಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ; ಬಿ.ಎಸ್.ವೈ.

ದೇಶದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್(ಮಲ ಹೊರುವ ಪದ್ಧತಿ) ವೃತ್ತಿ ತಡೆಗಟ್ಟಬೇಕು ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದೇಶವಾಗಿದ್ದು, ದೇವರಾಜು ಅರಸು ಅವರ ಕಾಲದಲ್ಲಿ ಪೌರಾಡಳಿತ ಸಚಿವರಾಗಿದ್ದ ಬಿ. ಬಸವಲಿಂಗಪ್ಪ ಅವರು, ಮಲಹೊರುವ ಪದ್ಧತಿಯನ್ನು ರಾಜ್ಯದಲ್ಲಿ ನಿಷೇಧ ಮಾಡಿದ್ದರೂ ಸಹಾ ಇಂದಿಗೂ ಹಲವೆಡೆ ಈ ಪದ್ಧತಿ ಜೀವಂತವಾಗಿರುವುದು ವಿಷಾಧನೀಯ ಎಂದು ಎಂ. ಶಿವಣ್ಣ ತಿಳಿಸಿದರು.

140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು, ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ; ಬಿ.ಎಸ್.ವೈ

ಪೌರ ಕಾರ್ಮಿಕರ ಕಾಲೋನಿಯಲ್ಲಿ ನೈರ್ಮಲ್ಯ ಕಾಪಾಡುವ ಬಗ್ಗೆ ಅರಿವು ಮೂಡಿಸಬೇಕು.  ಯಂತ್ರಗಳ ಯುಗದಲ್ಲಿಯೂ ಮಾನವನನ್ನು ಬಳಕೆ ಮಾಡಿಕೊಂಡು ಅನೈರ್ಮಲ್ಯ ಕೆಲಸವನ್ನು ಮಾಡಿಸುತ್ತಿದ್ದು, ಅದನ್ನು ತೊಡೆದು ಹಾಕಿ ಈ ಜನರನ್ನು ಸಮಾಜದ ಇತರರಂತೆ ಬಾಳಲು ಅವಕಾಶ ಕಲ್ಪಿಸಬೇಕು.

About The Author

You May Also Like

More From Author

+ There are no comments

Add yours