ಕೊರೋನಾಗೆ ಇಬ್ಬರು ಮಹಿಳೆಯರು ಬಲಿ, 51 ಜನರಿಗೆ ಪಾಸಿಟಿವ್

1 min read

ತುಮಕೂರು ನ್ಯೂಸ್.ಇನ್
Tumkurnews.in

ತುಮಕೂರು ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 51 ಜನರಿಗೆ ಕೋವಿಡ್ 19 ಸೋಂಕು ತಗಲಿರುವುದು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 864ಕ್ಕೆ ಏರಿದೆ. ಅಲ್ಲದೇ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.
*
ಸೋಂಕಿತರ ತಾಲೂಕುವಾರು ವಿವರ
ತುಮಕೂರು- 23
ಗುಬ್ಬಿ- 3
ಕುಣಿಗಲ್- 7
ಮಧುಗಿರಿ- 2
ಪಾವಗಡ- 5
ಶಿರಾ- 4
ತಿಪಟೂರು- 3
ಚಿಕ್ಕನಾಯಕನಹಳ್ಳಿ- 3 ಕೊರಟಗೆರೆ-0
ತುರುವೇಕೆರೆ-1
ಒಟ್ಟು- 51

ಕೊರಟಗೆರೆ ತಾಲ್ಲೂಕಿನಲ್ಲಿ ಹೊಸ ಪ್ರಕರಣಗಳು ಕಂಡು ಬಂದಿಲ್ಲ.
ಇಂದು 48 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 349 ಮಂದಿ ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
*
2 ಸಾವು
ತುಮಕೂರು ತಾಲ್ಲೂಕಿನ ಯಲ್ಲಪುರ ಗ್ರಾಮದ 50 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೆ ಜು.22 ರಂದು ಸಾವನ್ನಪ್ಪಿದ್ದಾರೆ.
*
ತಿಪಟೂರು ತಾಲ್ಲೂಕಿನ ಗಾಂಧಿನಗರ ಬಡಾವಣೆಯ 51 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೆ ಜು.22 ರಂದು ಸಾವನ್ನಪ್ಪಿದ್ದಾರೆ.

About The Author

You May Also Like

More From Author

+ There are no comments

Add yours