ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ 30 ಬಲಿ, ಈ ಒಂದು ತಾಲ್ಲೂಕಿನಲ್ಲಿ ಮಾತ್ರ ಸೋಂಕಿತರು ಸೇಫ್!

1 min read

ತುಮಕೂರು ನ್ಯೂಸ್. ಇನ್
Tumkurnews.in

ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಈವರೆಗೆ 30 ಮಂದಿ ಬಲಿಯಾಗಿದ್ದಾರೆ. ಎಲ್ಲಾ ತಾಲ್ಲೂಕಿನಲ್ಲೂ ಸಾವು ಸಂಭವಿಸಿದೆ. ಆದರೆ ಅದೃಷ್ಟವಶಾತ್ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ ಈವರೆಗೆ ಕೊರೋನಾ ಸೋಂಕಿಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
*
ಎಲ್ಲಿ, ಎಷ್ಟು ಸಾವು?
ಚಿಕ್ಕನಾಯಕನಹಳ್ಳಿ- 1
ಗುಬ್ಬಿ- 2
ಕೊರಟಗೆರೆ- 1
ಕುಣಿಗಲ್- 2
ಮಧುಗಿರಿ- 1
ಪಾವಗಡ- 1
ಶಿರಾ- 2
ತಿಪಟೂರು- 1
ತುಮಕೂರು- 19
ಒಟ್ಟು- 30
*
ತುರುವೇಕೆರೆ ತಾಲ್ಲೂಕಿನಲ್ಲಿ ಈವರೆಗೂ ಕೊರೋನಾಗೆ ಸಂಬಂಧಿಸಿದಂತೆ ಯಾವುದೇ ಸಾವು ಸಂಭವಿಸಿಲ್ಲ. ಇದು ತಾಲ್ಲೂಕಿನ ಜನತೆಗೆ ಕೊಂಚ ನೆಮ್ಮದಿಗೆ ಕಾರಣವಾಗಿದೆ. ತಾಲ್ಲೂಕಿನಲ್ಲಿ 27 ಜನರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಈವರೆಗೂ 17 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 10 ಮಂದಿ ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ.

About The Author

You May Also Like

More From Author

+ There are no comments

Add yours