ಜಿಲ್ಲೆಗೆ ಶಾಕ್ ನೀಡಿದ ಪಿಯುಸಿ ರಿಸಲ್ಟ್, ಎಷ್ಟೊಂದು ವಿದ್ಯಾರ್ಥಿಗಳು ಫೇಲ್ ಗೊತ್ತಾ?

1 min read

ತುಮಕೂರು ನ್ಯೂಸ್. ಇನ್ (ಜು.14) tumkurnews.in

ಮಂಗಳವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ತುಮಕೂರು ಜಿಲ್ಲೆಯು ರಾಜ್ಯದಲ್ಲಿ 23ನೇ ಸ್ಥಾನ ಪಡೆದುಕೊಂಡಿದೆ.
ಕಳೆದ ಮಾರ್ಚ್ ಹಾಗೂ ಜೂನ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಜಿಲ್ಲೆಯ 23,134 ವಿದ್ಯಾರ್ಥಿಗಳ ಪೈಕಿ 14,404 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 62.26ರಷ್ಟು ಫಲಿತಾಂಶ ಬಂದಿದೆ. ಉಳಿದ 8,730 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ.
ಕಳೆದ ವರ್ಷದ ಫಲಿತಾಂಶ(ಶೇ. 65.81)ಕ್ಕೆ ಹೋಲಿಸಿದರೆ ಜಿಲ್ಲೆಯ ಫಲಿತಾಂಶ ಶೇ.3.55ರಷ್ಟು ಕುಸಿದಿದೆ.
ಪರೀಕ್ಷೆಗೆ ಹಾಜರಾಗಿದ್ದ 12,415 ಬಾಲಕರ ಪೈಕಿ 6268 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 50.49ರಷ್ಟು ಹಾಗೂ 14,690 ಬಾಲಕಿಯರ ಪೈಕಿ 9242 ವಿದ್ಯಾರ್ಥಿನಿಯರು ಪಾಸಾಗಿದ್ದು, ಶೇ. 62.91ರಷ್ಟು ಫಲಿತಾಂಶ ಬಂದಿದೆ.
ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 7338 ವಿದ್ಯಾರ್ಥಿಗಳಲ್ಲಿ 5681 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 77.42ರಷ್ಟು, ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 9990 ವಿದ್ಯಾರ್ಥಿಗಳ ಪೈಕಿ 6449 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 64.55ರಷ್ಟು ಹಾಗೂ ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 5806 ವಿದ್ಯಾರ್ಥಿಗಳ ಪೈಕಿ 2274 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 39.17ರಷ್ಟು ಫಲಿತಾಂಶ ಬಂದಿದೆ.
ಗ್ರಾಮೀಣ ಪ್ರದೇಶದವರಿಗಿಂತ ನಗರ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ನಗರ ಪ್ರದೇಶದ 17501 ವಿದ್ಯಾರ್ಥಿಗಳ ಪೈಕಿ 11284 ವಿದ್ಯಾರ್ಥಿಗಳು(ಶೇ. 64.48ರಷ್ಟು) ಹಾಗೂ ಗ್ರಾಮೀಣ ಪ್ರದೇಶದ 5633 ವಿದ್ಯಾರ್ಥಿಗಳ ಪೈಕಿ 3120 ವಿದ್ಯಾರ್ಥಿಗಳು (ಶೇ. 53.39ರಷ್ಟು) ಪಾಸಾಗಿದ್ದಾರೆ.

About The Author

You May Also Like

More From Author

+ There are no comments

Add yours