ಎಸ್.ಪಿ ಕಚೇರಿಗೂ ತಲುಪಿದ ಕೊರೋನ, ಭಾನುವಾರದ 25 ಕೇಸ್ ಗಳ ಫುಲ್ ಡಿಟೈಲ್ಸ್

1 min read

ತುಮಕೂರು(ಜು.12) tumkurnews.in

ಭಾನುವಾರ ಜಿಲ್ಲೆಯಲ್ಲಿ ಹೊಸದಾಗಿ ಕಂಡು ಬಂದಿರುವ 25 ಕೊರೋನಾ ಪಾಸಿಟಿವ್ ಕೇಸ್ ಗಳ ಫುಲ್ ಡಿಟೈಲ್ಸ್ ಇಲ್ಲಿದೆ. ಸಿಬ್ಬಂದಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎಸ್.ಪಿ ಕಚೇರಿಯನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.

ಕುಣಿಗಲ್- 2
ಯಡಿಯೂರು, ಬೀರಗಾನಹಳ್ಳಿಯ ಪುರುಷ(53), ರಾಗಿಹಳ್ಳಿ ಪಾಳ್ಯದ ಹೆಣ್ಣು (25)
**
ತುರುವೇಕೆರೆ- 7
ತುಮಕೂರಿನ ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿದ್ದ
ತುರುವೇಕೆರೆ ತಾಲ್ಲೂಕಿನ ಅತ್ತಿಕುಲೆ ಪಾಳ್ಯದ ಗರ್ಭಿಣಿ(27) ಹಾಗೂ
ಮುನಿಯೂರಿನ 36 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಬೆಂಗಳೂರಿನಿಂದ ಬಂದಿದ್ದ ಸಂಗ್ಲಾಪುರದ 34 ವರ್ಷದ ಗಂಡು, ತುರುವೇಕೆರೆ ನಗರದ 35 ವರ್ಷದ ಗಂಡು, ನಡುವನಹಳ್ಳಿಯ 24 ವರ್ಷದ ಗರ್ಭಿಣಿ, ಇದೇ ಗ್ರಾಮದ 3 ವರ್ಷದ ಹೆಣ್ಣು ಮಗುವಿಗೆ ಪಾಸಿಟಿವ್ ಬಂದಿದೆ. ಈ ಮಗುವಿನ ತಾಯಿಗೆ ಕೊರೋನಾ ಸೋಂಕು ಇದ್ದಿದ್ದರಿಂದ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಗುವಿಗೂ ತಗಲಿದೆ. ಹುಲಿಕೆರೆಯ 32 ವರ್ಷದ ಗಂಡು ಸೇರಿ ತುರುವೇಕೆರೆ ತಾಲ್ಲೂಕಿನ 7 ಜನರಿಗೆ ಭಾನುವಾರ ಪಾಸಿಟಿವ್ ಕಂಡು ಬಂದಿದೆ.
**
ತುಮಕೂರು- 11
ತುಮಕೂರು ನಗರದಲ್ಲಿ ಸರಸ್ವತಿ ಪುರಂನ ಗಂಡು(51),
ಟಿಪ್ಪು ನಗರದ ವೃದ್ಧ(67), ಎಸ್ಐಟಿ ಬಡಾವಣೆಯ ಪುರುಷ(64), ಪಾಸಿಟಿವ್ ವ್ಯಕ್ತಿಯ ಸಂಪರ್ಕದಲ್ಲಿದ್ದ ಎಸ್ಐಟಿ ಬಡಾವಣೆಯ ಮಹಿಳೆ (48)ಗೆ ಸೋಂಕು ತಗಲಿದೆ.
ಮಲ್ಲೇಶ್ವರಂ, ಶಿವಾಜಿನಗರ ಸೇರಿದಂತೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದ
ತುಮಕೂರಿನ ಕೆಎಸ್ಆರ್ಪಿಯ(ಪೊಲೀಸ್) 32 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಇವರೊಂದಿಗಿದ್ದ 20 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಎಸ್.ಪಿ ಕಚೇರಿಯ 37 ವರ್ಷದ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ ಕರ್ತವ್ಯ ಮಾಡಿ ಬಂದಿದ್ದ ಕೆಎಸ್ಆರ್ಪಿ 12ನೇ ಬೆಟಾಲಿಯನ್ನಿನ 33 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದ್ದು, ಸಂಪರ್ಕದಲ್ಲಿದ್ದ 20 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ವೀರಸಾಗರದ ಮುನ್ಸಿಪಲ್ ಆಫಿಸಿನ 20 ವರ್ಷದ ಯುವಕನಿಗೆ ಸೋಂಕು ತಗಲಿದ್ದು, ಸಂಪರ್ಕದಲ್ಲಿದ್ದ 23 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಪಾಸಿಟಿವ್ ಪ್ರಕರಣದ ಸಂಪರ್ಕದಲ್ಲಿದ್ದ ಸಪ್ತಗಿರಿ ಬಡಾವಣೆಯ 64 ವರ್ಷದ ಪುರುಷ, ಎಸ್.ಐ.ಟಿ ಬಡಾವಣೆಯ 20 ವರ್ಷದ ಪುರುಷ, ಶಿರಾಗೇಟಿನ 19 ವರ್ಷದ ಯುವಕನಿಗೆ ಭಾನುವಾರ ಸೋಂಕು ದೃಢಪಟ್ಟಿದೆ.
**
ಕೊರಟಗೆರೆ- 1
ತಾಲ್ಲೂಕಿನ ಸಿಂಗನಪಾಳ್ಯದ 25 ವರ್ಷದ ಗರ್ಭಿಣಿ.
**
ಪಾವಗಡ-3 ನ್ಯಾಯದಕುಂಟೆಯ 37 ವರ್ಷದ ಗಂಡು, ಗಂಗಸಾಗರದ 32 ವರ್ಷದ ಗಂಡು, ಕೆಂಚಗಾನಹಳ್ಳಿಯ 30 ವರ್ಷದ ಗಂಡು.
**
ಮಧುಗಿರಿ-1
ಜುಲೈ 10 ರಂದು ಮರಣ ಹೊಂದಿದ್ದ ಮಧುಗಿರಿ ನಗರದ 60 ವರ್ಷದ ಪುರುಷನಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಪಾಸಿಟಿವ್ ‌ಬಂದಿದೆ.

About The Author

You May Also Like

More From Author

+ There are no comments

Add yours