ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್ ಲೈನ್ ಕೋಚಿಂಗ್!

1 min read

ತುಮಕೂರು(ಜು.12) tumkurnews.in

ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆಸೆ ಇರುತ್ತದೆ.‌ ಆದರೆ ಸರಿಯಾದ ಮಾರ್ಗದರ್ಶನ, ತರಬೇತಿಯ ಕೊರತೆಯಿಂದ ಏನನ್ನೂ ಸಾಧಿಸಲಾಗದೆ ನಿರಾಸೆ ಅನುಭವಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಬಹುತೇಕ ವಿದ್ಯಾರ್ಥಿಗಳಿಗೆ ತಾನು ಐಎಎಸ್ ಮಾಡಬೇಕು, ಕೆಎಎಸ್ ಮಾಡಬೇಕು, ಐಎಫ್ಎಸ್ ಸೇರಬೇಕು, ಬ್ಯಾಂಕ್, ರೈಲ್ವೇ ಸೇರಿದಂತೆ ಸರಕಾರಿ ಹುದ್ದೆ ಗಿಟ್ಟಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಇಲ್ಲೂ ಕೂಡ ಸರಿಯಾದ ಮಾರ್ಗದರ್ಶನ, ತರಬೇತಿ ಇಲ್ಲದೇ ನಿರಾಸೆ ಅನುಭವಿಸುತ್ತಾರೆ. ಇನ್ನೂ ಕೆಲವರು ದುಬಾರಿ ಕೋಚಿಂಗ್ ಶುಲ್ಕ ಕಟ್ಟಲಾಗದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಗದೇ ಜೀವನದಲ್ಲಿ ಹಿನ್ನಡೆ ಕಾಣುತ್ತಾರೆ.
ಈ ಎಲ್ಲಾ ಸಮಸ್ಯೆಗಳಿಂದ ಯುವ ಪೀಳಿಗೆಯನ್ನು ಪಾರು ಮಾಡಲು ತುಮಕೂರಿನ “ಎಕ್ಸೆಲೆಂಟ್ ಅಕಾಡೆಮಿ” ಮುಂದಾಗಿದೆ. ವಿವಿಧ ಸರಕಾರಿ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು
ಸುಲಭವಾಗಿ ಎದುರಿಸಲು ಸೂಕ್ತ ತರಬೇತಿಯನ್ನು ಉಚಿತವಾಗಿ ನೀಡಲು ಸಂಸ್ಥೆಯು ಮುಂದಾಗಿದೆ. ಅದೂ ಅನ್ ಲೈನ್ ಕ್ಲಾಸ್ ಮೂಲಕ. ಸಂಸ್ಥೆಯ “ಯೂ ಟ್ಯೂಬ್” ಚಾನೆಲನ್ನು ಸಬ್ ಸ್ಕ್ರೈಬ್ ಮಾಡಿ ಪ್ರತಿನಿತ್ಯದ ಪಾಠಗಳನ್ನು ನಿಮ್ಮ ಬಿಡುವಿನ ವೇಳೆಯಲ್ಲಿ ನೋಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬಹುದು. ಈ ಉಚಿತ ಆನ್ ಲೈನ್ ತರಗತಿಗೆ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ವೈ.ಎಸ್ ಸಿದ್ದೇಗೌಡ ಅವರು ಚಾಲನೆ ನೀಡಲಿದ್ದಾರೆ.
ಜು.13 ಸೋಮವಾರ ಬೆಳಗ್ಗೆ 10.30ಕ್ಕೆ ಕುಲಪತಿಗಳ ಕಾರ್ಯಾಲಯದಲ್ಲಿ ನಡೆಯುವ ಸರಳ ಕಾರ್ಯಕ್ರಮದಲ್ಲಿ ಉಚಿತ ಅನ್ ಲೈನ್ ತರಗತಿಗೆ ಚಾಲನೆ ದೊರೆಯಲಿದೆ. ಸಬ್ ಸ್ಕ್ರೈಬ್ ಆಗಲು 9742331968 ಗೆ ನಿಮ್ಮ ಹೆಸರು, ವಿದ್ಯಾರ್ಹತೆಯನ್ನು
ವಾಟ್ಸಾಪ್ ಮಾಡಿ.

About The Author

You May Also Like

More From Author

+ There are no comments

Add yours