cool hit counter

ತುಮಕೂರು: ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಕಾರ್ಗಿಲ್ ವಿಜಯ ಓಟ ಆಯೋಜನೆ: ತುಮಕೂರು ರನ್ನರ್ ಕ್ಲಬ್ ಟ್ರಸ್ಟ್

Tumkur News
Ashok R.P. is a passionate journalist and media professional known for his dedication to truthful, people-centric reporting. With a keen interest in regional news, public issues,...
3 Min Read
Spread the love

ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಕಾರ್ಗಿಲ್ ವಿಜಯ ಓಟ ಆಯೋಜನೆ: ತುಮಕೂರು ರನ್ನರ್ ಕ್ಲಬ್ ಟ್ರಸ್ಟ್

ತುಮಕೂರು ಅಮಾನಿಕೆರೆಯ ಸುತ್ತಲು ನಿರ್ಮಿಸಿರುವ ವಾಕೀಂಗ್ ಪಾಥ್ ನಲ್ಲಿ ಈ ತುಮಕೂರು ಲೇಖ್ ಓಟ-2026 ನಡೆಯಲಿದ್ದು, ಎಂಟು ನೂರು ಜನರು ಈ ಓಟದಲ್ಲಿ ಪಾಲ್ಗೊಳ್ಳಲು ಹೆಸರು ನೊಂದಾಯಿಸಿದ್ದು, ಎರಡು ಹಂತಗಳಲ್ಲಿ ಈ ಓಟ ನಡೆಯಲಿದೆ. ಮೊದಲ ಹಂತದಲ್ಲಿ ಅಮಾನಿಕೆರೆ ಸುತ್ತಲಿನ ವಾಕಿಂಗ್ ಪಾಥ್ 5.5 ಕಿ.ಮಿ. ದೂರವನ್ನು ಯುವಕರು, ನಂತರ ವಾಕ್ ಮಾಡುವವರು ಭಾಗವಹಿಸಲಿದ್ದಾರೆ.

Tumkur news
ತುಮಕೂರು: ತುಮಕೂರು ರನ್ನರ್ ಕ್ಲಬ್ ಟ್ರಸ್ಟ್(ರಿ)ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಕಾರ್ಗಿಲ್ ವಿಜಯ ಓಟ, ತುಮಕೂರು ಲೇಖ್ ಓಟ-2026 ನ್ನು ಜುಲೈ 26 ರ ಭಾನುವಾರ ನಗರದ ಅಮಾನೀಕೆರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ರನ್ನರ್ ಕ್ಲಬ್’ನ ಪ್ರೊ.ರವಿ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಓಟದ ತುಮಕೂರು ಲೇಖ್ ಓಟ-2026 ರ ಟೀ ಶರ್ಟ್, ಪೀನಿಷರ್ ಮೇಡಲ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವತಹಃ ಕ್ರೀಡಾಪಟುವಾಗಿರುವ ಡಿಸಿಎಂ ಡಾ.ಜಿ.ಪರಮೇಶ್ವರ್ ತುಮಕೂರನ್ನು ಶೈಕ್ಷಣಿಕ ನಗರಿಯ ಜೊತೆಗೆ, ಕ್ರೀಡಾ ನಗರಿಯನ್ನಾಗಿಸಲು ನಿರಂತರ ಪ್ರಯತ್ನ ಪಡುತ್ತಿದ್ದಾರೆ. ಅದರ ಒಂದು ಭಾಗವಾಗಿಯೇ ತುಮಕೂರು ರನ್ನರ್ ಕ್ಲಬ್ ಆಯೋಜಿಸುತ್ತಿರುವ ನಾಲ್ಕನೇ ಓಟ ಇದಾಗಿದ್ದು, ಕಾರ್ಗೀಲ್ ಯುದ್ದದಲ್ಲಿ ಮಡಿದ ಯೋಧರನ್ನು ಸ್ಮರಿಸುವುದು ಹಾಗು ಜನರಲ್ಲಿ ರಾಷ್ಟ್ರ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಗೀಲ್ ವಿಜಯ ದಿವಸ್ ಓಟ ಆಯೋಜಿಸಲಾಗಿದೆ ಎಂದರು.
ತುಮಕೂರು ಅಮಾನಿಕೆರೆಯ ಸುತ್ತಲು ನಿರ್ಮಿಸಿರುವ ವಾಕೀಂಗ್ ಪಾಥ್ ನಲ್ಲಿ ಈ ತುಮಕೂರು ಲೇಖ್ ಓಟ-2026 ನಡೆಯಲಿದ್ದು, ಎಂಟು ನೂರು ಜನರು ಈ ಓಟದಲ್ಲಿ ಪಾಲ್ಗೊಳ್ಳಲು ಹೆಸರು ನೊಂದಾಯಿಸಿದ್ದು, ಎರಡು ಹಂತಗಳಲ್ಲಿ ಈ ಓಟ ನಡೆಯಲಿದೆ. ಮೊದಲ ಹಂತದಲ್ಲಿ ಅಮಾನಿಕೆರೆ ಸುತ್ತಲಿನ ವಾಕಿಂಗ್ ಪಾಥ್ 5.5 ಕಿ.ಮಿ. ದೂರವನ್ನು ಯುವಕರು, ನಂತರ ವಾಕ್ ಮಾಡುವವರು ಭಾಗವಹಿಸಲಿದ್ದಾರೆ. ತದ ನಂತರ ಮ್ಯಾರಥಾನ್ ಓಟಗಳಲ್ಲಿ ಭಾಗಿಯಾಗಿರುವ ರನ್ನರ್ಸ್ ಗಳಿಗಾಗಿ ಅದೇ ವಾಕಿಂಗ್ ಪಾಥ್ ಮೇಲೆ ಎರಡು ಸುತ್ತು ವೇಗದ ಓಟ ಆಯೋಜಿಸಲಾಗಿದೆ. ಈಗಾಗಲೇ ಹೆಸರು ನೊಂದಾಯಿಸಿರುವ ಓಟಗಾರರಿಗೆ ಜುಲೈ 25 ರ ಬೆಳಗ್ಗೆ 10 ಗಂಟೆಯಿಂದಲೇ ಟೀ ಶರ್ಟ್, ಚಸ್ಟ್ ನಂಬರ್ ಹಾಗೂ ಆಟದ ನಿಯಮಗಳನ್ಬು ತಿಳಿಸಲಾಗುವುದು, ಭಾನುವಾರ ಬೆಳಗ್ಗೆ 08 ಗಂಟೆಗೆ ತುಮಕೂರು ಲೇಖ್-2026 ಓಟ ಆರಂಭವಾಗಲಿದೆ ಎಂದು ಪ್ರೊ.ರವಿ ವಿವರ ನೀಡಿದರು.
ತುಮಕೂರು ರನ್ನರ್ ಕ್ಲಬ್ ಆಯೋಜಿಸಿರುವ ಕಾರ್ಗಿಲ್ ವಿಜಯದಿವಸ್ ಓಟ, ತುಮಕೂರು ಲೇಖ್ ಓಟ-2026ದ ಯಶಸ್ವಿಗೆ ಹಲವಾರು ದಾನಿಗಳು ಕೈಜೋಡಿಸಿದ್ದಾರೆ. ತುಮಕೂರು ಮರ್ಜೆಂಟ್ಸ್ ಕ್ರೆಡಿಟ್ ಕೋ ಅಪರೇಟಿವ್ ಬ್ಯಾಂಕ್ ಡಾ.ಎನ್.ಎಸ್. ಜಯಕುಮಾರ್, ಶ್ರೀಆಟೋ ಮತ್ತು ಟಾಟಾ ಮೋಟರ್ಸ್ ಶ್ರೀನಿವಾಸ್ ದಿವಾಕರ್, ದೀಕ್ಷಾ ಬಿಲ್ರ‍್ಸ್ ಅಂಡ್ ಡೆವಲಪರ್ ಎ.ಎಸ್.ಕಾಂತರಾಜು, ಮಂಜುನಾಥ್, ಕೆಪಿಸಿಸಿ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕೆ.ಮಲ್ಲಣ್ಣ ಸೇರಿದಂತೆ ಹಲವರು ಕೈಜೋಡಿಸಿದ್ದಾರೆ. ಅಲ್ಲದ ಕ್ರೀಡೆಯಲ್ಲಿ ತೊಡಗಿಕೊಂಡಿರು ಸಂಘ ಸಂಸ್ಥೆಗಳು ಸಹ ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ ಎಂದರು.
ತುಮಕೂರು ಲೇಖ್ ರನ್ -2026ರ ಪ್ರಮುಖ ಪ್ರಯೋಜಕರಾದ ಟಿ.ಎಂ.ಸಿ.ಸಿ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಮಾತನಾಡಿ, 26 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ದದ ವಿಜಯೋತ್ಸವವನ್ನು ಕೇವಲ ಒಂದು ದಿನಕ್ಕೆ ಸಿಮೀತ ಗೊಳಿಸದೆ, ಯುದ್ದದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳ ನೆರವಿಗೆ ಬರುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಮಾಜಿ ಸೈನಿಕರು,ಹಾಗೂ ಯುದ್ದದಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರ ವಿವರ ನೀಡಿದರೆ, ಅಂತಹ ಕುಟುಂಬಗಳ ಅರ್ಥಿಕ ನೆರವಿಗೆ ಟಿ.ಎಂ.ಸಿಸಿ ಸದಾ ನಿಲ್ಲಲಿದೆ. ಯುದ್ದದಲ್ಲಿ ಮಡಿದ ಯೋಧರನ್ನು ಸ್ಮರಿಸುವುದು ಒಂದೆಡೆಯಾದರೆ, ಯುದ್ದದಲ್ಲಿ ತಮ್ಮ ಕುಟುಂಬದ ಆಧಾರಸ್ತಂಭಗಳನ್ನು ಕಳೆದುಕೊಂಡಿರುವ ಕುಟುಂಬಗಳ ನೆರವಿಗೂ ನಿಲ್ಲುವ ಕೆಲಸವು ಆಗಬೇಕಿದೆ.ಆ ಕುಟುಂಬದೊಂದಿಗೆ ನಾವಿದ್ದೇವೆ ಎಂಬುದನ್ನು ಜಗತ್ತಿಗೆ ತೋರಿಸಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೀಕ್ಷಾ ಬಿಲ್ರ‍್ಸ್ ಅಂಡ್ ಡೆವಲಪರ್ಸ್’ನ ಎ.ಎಸ್.ಕಾಂತರಾಜು, ಶ್ರೀಆಟೋ ಮಾಲೀಕ ಶ್ರೀನಿವಾಸ್ ದಿವಾಕರ್, ಪೂರ್ವೆಲ್ ಎಲೆಟ್ರಿಕ್‌ನ ಅನಿಲ್ ಪೂರ್ವೆಲ್, ಪೋರ್ಟಿಸ್ ಆಸ್ಪತ್ರೆಯ ಮಂಜುನಾಥ್, ಕೆ.ಪಿ.ಸಿ.ಸಿ. ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕೆ.ಮಲ್ಲಣ್ಣ ಉಪಸ್ಥಿತರಿದ್ದರು.

Share This Article
Follow:
Ashok R.P. is a passionate journalist and media professional known for his dedication to truthful, people-centric reporting. With a keen interest in regional news, public issues, politics, social developments, and ground-level reporting, he has built a reputation for delivering accurate and impactful stories that connect with the common people. He actively covers current affairs, civic issues, crime reports, political events, cultural programs, and human-interest stories with a commitment to ethical journalism. His reporting style focuses on clarity, credibility, and public awareness, making his work relatable and informative to readers across Karnataka. Ashok R.P. believes journalism is a powerful medium to raise public voice and strengthen democracy through responsible reporting and factual storytelling. Special Interests: * Regional & Political News * Public Interest Stories * Social Awareness Reporting * Ground Reality Journalism * Digital Media & News Publishing
Leave a Comment