ಎರಡು ಕೋಟಿ ರೂ. ವೆಚ್ಚದಲ್ಲಿ ನಾಗವಲ್ಲಿ ಕೆಪಿಎಸ್ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ: ಸಿದ್ಧಲಿಂಗ ಶ್ರೀ, ಸಚಿವ ವಿ. ಸೋಮಣ್ಣ ಭಾಗಿ
Tumkur news
ತುಮಕೂರು: ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ವಿದ್ಯಾಭ್ಯಾಸ ಮಾಡಿದ್ದ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನಾಗವಲ್ಲಿ ಗ್ರಾಮದ ಶಾಲೆ ಇಂದು ಉನ್ನತ ದರ್ಜೆಗೇರಿದೆ. ಇದರ ಸವಿನೆನಪಿನಲ್ಲಿ ನಾಗವಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಬೆಂಗಳೂರಿನ ಟಯೋಟಾ ಕಿರ್ಲೊಸ್ಕರ್ ಮೋಟಾರ್ ಕಂಪನಿಯ ಸುಮಾರು 2 ಕೋಟಿ ರೂ.ಗಳ ಸಿಎಸ್‌ಆರ್ ಅನುದಾನದಲ್ಲಿ ನೂತನ ಶಾಲಾ ಕಟ್ಟಡ ಶಂಕುಸ್ಥಾಪನೆ ಸೋಮವಾರ ನೇರವೇರಿತು.
ಸಿದ್ಧಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು.
ಶಾಸಕ ಬಿ. ಸುರೇಶ್‌ಗೌಡ, ಟಯೋಟಾ ಕಿರ್ಲೊಸ್ಕರ್ ಮೋಟಾರ್ ಪ್ರೈ.ಲಿ.ನ ಉಪಾಧ್ಯಕ್ಷ ಎ. ರಮೇಶ್ ರಾವ್, ಪ್ರಧಾನ ವ್ಯವಸ್ಥಾಪಕ ಹೆಚ್.ಜೆ. ಕಿರಣ್, ಆರ್ ರೋಷನ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಘುಚಂದ್ರ, ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ, ಉಪನಿರ್ದೇಶಕರು (ಅಭಿವೃದ್ಧಿ ) ಶಾಲಾ ಶಿಕ್ಷಣ ಇಲಾಖೆ, ಎಂ ಹನುಮಂತಪ್ಪ ಶಾಲೆ ಎಸ್‌ಡಿಎಂಸಿ ಉಪಾಧ್ಯಕ್ಷ ನಾಗರಾಜು, ಪ್ರಾಂಶುಪಾಲ ಸಿದ್ಧರಾಜು, ಉಪ ಪ್ರಾಂಶುಪಾಲ ನಾಗರಾಜು, ಮುಖ್ಯಶಿಕ್ಷಕ ಪರಮೇಶ್, ಎಸ್‌ಡಿಎಂಸಿ ಎಲ್ಲಾ ಸದಸ್ಯರುಗಳು, ಶಿಕ್ಷಕ ವೃಂದದವರು ಹಾಜರಿದ್ದರು.
ಇದಲ್ಲದೆ, ಮುಖಂಡರಾದ ಹೆಬ್ಬಾಕ ರವಿಶಂಕರ್, ವೈ.ಹೆಚ್. ಹುಚ್ಚಯ್ಯ, ಗೂಳೂರು ಶಿವಕುಮಾರ್, ಸಿದ್ದೇಗೌಡ, ರಾಜಶೇಖರ್, ಶಂಕರಣ್ಣ, ನರಸಿಂಹಮೂರ್ತಿ, ಸುಮಿತ್ರಾದೇವಿ, ಐಶ್ವರ್ಯ ಸುರೇಶ್‌ಗೌಡ, ಹೊಳಕಲ್ಲು ಅಂಜಿನಪ್ಪ, ಆರಾಧ್ಯ, ಧರ್ಮಪ್ರಕಾಶ್, ನರಸೇಗೌಡ, ಪಾಪಯ್ಯ, ಗೋಪಾಲ ಲಕ್ಕೇನಹಳ್ಳಿ, ಮೂಡಲಗಿರಿಗೌಡ, ರೇಣುಕಾಪ್ರಸಾದ್ ಇತರರು ಭಾಗವಹಿಸಿದ್ದರು.
What do you feel about this post?
Like
Love
Happy
Haha
Sad
