ಬೆಂಗಳೂರಿನಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಾಣ: ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆ ನಿರ್ಧಾರ

ತಾಲ್ಲೂಕು ತುಮಕೂರು ನಗರ ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಾಣ: ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆ ನಿರ್ಧಾರ

Tumkurnews.in
ತುಮಕೂರು: ಮಹಿಳಾ ವಸತಿ ನಿಲಯವನ್ನು ಬೆಂಗಳೂರಿನಲ್ಲಿ ಆರಂಭಿಸಲು ಉಲುಚುಕಮ್ಮೆ ಬ್ರಾಹ್ಮಣ ಮಹಾಸಭೆ ನಿರ್ಧರಿಸಿದೆ ಎಂದು ಮಹಿಳಾ ಹಾಸ್ಟೆಲ್ ಯೋಜನಾ ಸಮಿತಿ ಗೌರವ ಅಧ್ಯಕ್ಷ ಬಿ.ವಿ.ಕುಮಾರ್ ತಿಳಿಸಿದರು. ಗ್ರಾಮಂತರ ಪ್ರದೇಶದಿಂದ ಬೆಂಗಳೂರಿಗೆ ಬರುವ ವಿದ್ಯಾರ್ಥಿನಿಯರಿಗೆ ಮಹಿಳಾ ಹಾಸ್ಟೆಲ್, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ಹಾಗೂ ನೆಲ ಮಹಡಿಯಲ್ಲಿ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ಕೆ ಉಲುಚುಕಮ್ಮೆ ಸಮುದಾಯದ ಎಲ್ಲರ ಸಹಕಾರ ಕೋರುವುದಾಗಿ ಅವರು ತಿಳಿಸಿದರು.
ತುಮಕೂರಿನ ಶಂಕರಮಠದ ಶ್ರೀ ಅಭಿನವ ವಿದ್ಯಾತೀರ್ಥ ಪ್ರವಚನ ಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾ ಉಲುಚುಕಮ್ಮೆರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು ಸಾಮರಸ್ಯ ಇದ್ದರೆ ಮಾತ್ರ ಭಾಂಧವ್ಯ ಮೂಡುತ್ತದೆ, ಭಾಂಧವ್ಯ ಇದ್ದರೆ ಮಾತ್ರ ಸಂಘಟನೆ ಆಗುತ್ತದೆ, ಸಂಘಟನೆ ಆದ ನಂತರ ಸಂಪ್ರದಾಯ ಉಳಿಯುತ್ತದೆ. ಅದ್ದರಿಂದ ಸಾಮಾರಸ್ಯ, ಭಾಂಧವ್ಯ ಸಂಘಟನೆ ದೃಷಿಯಲ್ಲಿ ಇಟ್ಟುಕೊಂಡು ಸಂಘಟನೆ ಬೆಳೆಸಲಾಗುತ್ತದೆ ಎಂದ ಅವರು ಉಲುಚುಕಮ್ಮೆ ಬ್ರಾಹ್ಮಣರ ಸಂಘದ ಸಮೀಪವೇ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುತ್ತಿದೆ ಎಂದರು.
ತುಮಕೂರಿನಲ್ಲಿ ನಡೆದ ಕಾರ್ಯಕ್ರಮದ ಆತಿಥ್ಯವನ್ನು ಶ್ಲಾಘಿಸಿದ ಅವರು, ಸಮಾಜದ ಎಲ್ಲರ ಸಹಕಾರದೊಂದಿಗೆ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದರು.
ಸಮಾಜದ ಉನ್ನತಿಗಾಗಿ ಮಹಾಸಭಾ ವತಿಯಿಂದ ಜನಪರ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಾಂಧವರ ಸಮಾವೇಶಗಳನ್ನು ಆಯೋಜಿಸಿ, ಸಮಾಜದ ಹಿರಿಯರನ್ನು ಗೌರವಿಸುವ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡುವ ಕಾರ್ಯವನ್ನು ಮಹಾಸಭಾ ಮುಂದುವರಿಸಿಕೊಂಡು ಬರುತ್ತಿದೆ ಎಂದು ಉಲುಚುಕಮ್ಮೆ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣರಾವ್ ತಿಳಿಸಿದರು.
ಮೈಸೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಸಮಾವೇಶಗಳನ್ನು ನಡೆಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದ ಹಿರಿಯರ ಮನೆಗಳಿಗೆ ತೆರಳಿ ಸನ್ಮಾನಿಸುವ ಕಾರ್ಯವನ್ನು ಮಾಡಲಾಗಿದೆ. ಮುಂದಿನ ಬಾಂಧವರ ಸಮಾವೇಶ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ತುಮಕೂರಿನಲ್ಲಿ ಮಹಾಸಭೆಗೆ ಸ್ವಂತ ನಿವೇಶನ ಪಡೆಯುವ ಕನಸು ನನಸಾಗಿದ್ದು, ಕಟ್ಟಡ ನಿರ್ಮಾಣದ ಕಾರ್ಯವೂ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಲಕ್ಷ್ಮೀನಾರಾಯಣರಾವ್ ತಿಳಿಸಿದರು.
ಸದಸ್ಯತ್ವ ಅಭಿಯಾನ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಹಾಗೂ ಸಮಾಜದ ಹಿರಿಯರನ್ನು ಸನ್ಮಾನಿಸುವಂತಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯಗಳಿಗೆ ಮಾದರಿಯಾಗಿವೆ. ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಲು ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ವೈ.ಜಿ. ಮುರುಳೀಧರ್ ಕರೆ ನೀಡಿದರು.
16 ವರ್ಷಗಳ ಸಮಾಜಮುಖಿ ಸೇವೆ: ಕಳೆದ 16 ವರ್ಷಗಳಿಂದ ತುಮಕೂರು ಜಿಲ್ಲಾ ಉಲುಚುಕಮ್ಮೆ ಬ್ರಾಹ್ಮಣ ಸಭಾ ವತಿಯಿಂದ ಸಮಾಜ ಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಂಘದ ಸ್ವಂತ ನಿವೇಶನ ಹೊಂದುವ ಉದ್ದೇಶ ಇದೀಗ ಈಡೇರಿರುವುದು ಸಂತಸದ ಸಂಗತಿ ಎಂದು ಜಿಲ್ಲಾಕಾರ್ಯಧ್ಯಕ್ಷ ಆರ್. ವಾಸುದೇವಮೂರ್ತಿ ಹಾಗೂ ಜಿಲ್ಲಾ ಕಾರ್ಯದರ್ಶಿ ಮಠ ಮುದ್ರೆ ಶ್ರೀನಿವಾಸ್ ಜೋಯಿಶ್ ಹರ್ಷ ವ್ಯಕ್ತಪಡಿಸಿದರು.
ಉದಾರ ದಾನಿಗಳ ಸಹಕಾರದೊಂದಿಗೆ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುತ್ತಿದೆ. 2014ರಿಂದ ಜಗದ್ಗುರುಗಳ ಆಶೀರ್ವಾದದೊಂದಿಗೆ ಸಭೆಯ ಚಟುವಟಿಕೆಗಳು ನಡೆಯುತ್ತಿದ್ದು, ಬೆಂಗಳೂರಿನ ಸಭೆಯೊಂದಿಗೆ ತಾಯಿ-ಮಕ್ಕಳ ಬಾಂಧವ್ಯದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಅವರು ತಿಳಿಸಿದರು.
ತುಮಕೂರು ಉಲುಚುಕಮ್ಮೆ ಮಹಾಸಭಾ ಜಂಟಿ ಕಾರ್ಯದರ್ಶಿ ಆರ್.ಗೋಪಾಲಕೃಷ್ಣ, ಖಜಾಂಚಿ ಗುಂಡಣ್ಣ, ನಿರ್ದೇಶಕರುಗಳಾದ ಶಾಲಿನಿ ರವಿಶಂಕರ್, ಸರಳ ನಾಗಭೂಷಣ್, ವೆಂಕಟರಂಗಯ್ಯ ( ಗೊರವನಹಳ್ಳಿ), ಎಚ್.ಸುಬ್ಬರಾವ್, ಟಿ.ಜಿ..ವೆಂಕಟೇಶ್, ಕೆ.ಬಿ.ಚಂದ್ರಮೌಳಿ, ಎಸ್.ಗಿರೀಶ್ ( ಅಳಿಲುಘಟ್ಟ), ಎಸ್.ಜಿ.ಪ್ರಸನ್ನ ಕುಮಾರ್, ಹೆಚ್.ಕೆ.ವೇಣುಗೋಪಾಲ್, ಎಚ್.ಕೆ.ರಮೇಶ್, ವಿಶೇಷ ಆಹ್ವಾನಿತರಾದ ಉಲುಚುಕಮ್ಮೆ ಮಹಸಭಾ ಪ್ರತಿನಿಧಿ ಹೆಚ್.ಎನ್.ಗಣೇಶ್, ಜಿ.ಕೆ.ಸತೀಶ್, ಜಿ.ಕೆ.ರವೀಂದ್ರ ಕಾರ್ಯಕ್ರಮತ್ತು ಮಹಸಭಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಸದಸ್ಯರು, ಮಹಾಸಭೇಯ ಉಪಾಧ್ಯಕ್ಷ ಪಿ.ಎಲ್.ನಾಗರಾಜರಾವ್, ಕಾರ್ಯದರ್ಶಿ ವೈ.ಜಿ.ಮುರಳಿಧರ, ಜಂಟಿ ಕಾರ್ಯದರ್ಶಿ ಬಿ.ಕೆ.ಸುರೇಶ್, ಖಜಾಂಚಿ ಎಸ್.ವಾಸುದೇವ್, ಆಂತರಿಕ ಲೆಕ್ಕಪರಿಶೋಧಕ ಪಿ.ಎಸ್.ಸುಬ್ರಹ್ಮಣ್ಯ, ಮಹಿಳಾ ವಿಭಾಗದ ಮುಖ್ಯಸ್ಥೆ ಕೆ.ಮಂಗಳ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತುಮಕೂರು ಉಲುಚುಕಮ್ಮೆ ಬಾಂಧವರ ಸಮಾವೇಶದಲ್ಲಿ ಉಲುಚುಕಮ್ಮೆ ಸಮುದಾಯದ ಹದಿನೈದು ಮಂದಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಧನವನ್ನು ನೀಡಲಾಯಿತು ಹಾಗು ಉಲುಚುಕಮ್ಮೆ ಸಮುದಾಯದ ಇಪ್ಪತ್ತು ಹಿರಿಯ ದಂಪತಿಗಳನ್ನು ಗೌರವಿಸಲಾಯಿತು, ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಉಪನ್ಯಾಸಕ ಎಚ್.ಸುಬ್ಬರಾವ್ ಅವರನ್ನು ಗೌರವಿಸಲಾಯಿತು.

ತುಮಕೂರು ದಸರಾಗೆ ದಿನಾಂಕ ಫಿಕ್ಸ್, ಇಲ್ಲಿದೆ ಮಾಹಿತಿ

Leave a Reply

Your email address will not be published. Required fields are marked *