ತುಮಕೂರು: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಪುನಃ ಒಂದಾದ 21 ಜೋಡಿಗಳು

1 min read

 

ಚಿಕ್ಕ ಚಿಕ್ಕ ವಿಚಾರಗಳಿಗೆ ಜಗಳವಾಡಬೇಡಿ,ಮುಂದಿನ ಭವಿಷ್ಯ ನೋಡಿ: ನ್ಯಾ.ಜಯಂತ್ ಕುಮಾರ್

ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಪುನಃ ಒಂದಾದ 21 ಜೋಡಿಗಳು

Tumkurnews
ತುಮಕೂರು: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ 21 ಜೋಡಿಗಳು ಶನಿವಾರ ನಡೆದ ಲೋಕ ಅದಾಲತ್’ನಲ್ಲಿ ಪುನಃ ಒಂದಾಗುವ ಮೂಲಕ ಹೊಸ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ.

ಶಿರಾಗೇಟ್ ರಸ್ತೆ ಸಂಚಾರಕ್ಕೆ ಮುಕ್ತ: ಸೇತುವೆ ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ?
ಜಿಲ್ಲೆಯ ಸಿರಾ-2, ಮಧುಗಿರಿ-1, ಪಾವಗಡ-2, ತುರುವೇಕೆರೆ-1, ಗುಬ್ಬಿ-1, ತಿಪಟೂರು-2, ಚಿಕ್ಕನಾಯಕನಹಳ್ಳಿ-1, ತುಮಕೂರಿನ ನ್ಯಾಯಾಲಯದಲ್ಲಿ 10 ಜೋಡಿಗಳು ಪುನರ್ ಮಿಲನವಾಗಿದ್ದಾರೆ ಜಿಲ್ಲೆಯ ಎರಡು ಕೌಟುಂಬಿಕ ನ್ಯಾಯಾಲಯದಲ್ಲಿ 10 ಜೋಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅವರ ಮುಂದೆ 1 ಜೋಡಿ ಸೇರಿದಂತೆ ಒಟ್ಟು-21 ದಂಪತಿಗಳು ಪುನರ್ ಮಿಲನವಾದದ್ದು ಶನಿವಾರ ನಡೆದ ಲೋಕ ಅದಾಲತ್’ನ ವಿಶೇಷವಾಗಿತ್ತು.

ತುಮಕೂರಿಗೆ ಕೇಂದ್ರದ ಮತ್ತೊಂದು‌ ಕೊಡುಗೆ; 100 ಹಾಸಿಗೆಗಳ ESIC ಆಸ್ಪತ್ರೆ ಮಂಜೂರು
ಕಿವಿ ಮಾತು ಹೇಳಿದ ಜಡ್ಜ್:
ಗಂಡ-ಹೆಂಡತಿ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಜೀವನ ನಡೆಸಬೇಕು, ಚಿಕ್ಕ ಚಿಕ್ಕ ವಿಚಾರಗಳಿಗೆ ಮನಸ್ಸುಗಳನ್ನು ಕೆಡಿಸಿಕೊಂಡು ವಿಚ್ಛೇದನಕ್ಕೆ ಅರ್ಜಿ ಹಾಕಬಾರದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಯಂತ್ ಕುಮಾರ್ ಅವರು ಪುನಃ ಒಂದಾದ ಜೋಡಿಗಳಿಗೆ ಕಿವಿ ಮಾತು ಹೇಳಿದರು.
ಇಂದಿನ ದಿನಗಳಲ್ಲಿ ಚಿಕ್ಕ ವಿಚಾರಗಳನ್ನೇ ದೊಡ್ಡದಾಗಿ ಮಾಡಿಕೊಂಡು ಕೌಟುಂಬಿಕ ನ್ಯಾಯಾಲಯಗಳಿಗೆ ವಿಚ್ಛೇದನ, ಜೀವನಾಂಶ ಇತ್ಯಾದಿಗಳಿಗೆ ಗಂಡ-ಹೆಂಡತಿ ಬರುತ್ತಿರುವುದು ದುರಂತವಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ಜೀವನ ನಡೆಸಬೇಕು, ತಂದೆ-ತಾಯಿ ಕಷ್ಟ ಪಟ್ಟು ದುಡಿದು ನಿಮ್ಮನ್ನು ಓದಿಸಿ, ಬುದ್ಧಿ ಕಲಿಸಿ, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ನಿಮಗೆ ಮದುವೆ ಮಾಡಿರುವುದು ನೀವು ವಿಚ್ಛೇದನ ಪಡೆಯುವುದಕ್ಕಲ್ಲ, ಮಕ್ಕಳ ಮುಖ ನೋಡಿಕೊಂಡು, ತಂದೆ-ತಾಯಿ ಮುಖ ನೋಡಿಕೊಂಡು ಪರಸ್ಪರರು ನಂಬಿಕೆಯಿಂದ ಜೀವನ ನಡೆಸಬೇಕು ಎಂದು ದಂಪತಿಗಳಿಗೆ ಬುದ್ಧಿ ಹೇಳಿದರು.

ತುಮಕೂರಿಗೆ 70 ಕೋಟಿ ವೆಚ್ಚದ ಕಾರ್ಡಿಯಾಲಜಿ ಕೇಂದ್ರ, 130 ಕೋಟಿಯ ಆಸ್ಪತ್ರೆ! ಪರಂ
ಯಾವುದೇ ಗಂಡ-ಹೆಂಡತಿ ಮಕ್ಕಳ ಹಿತದೃಷ್ಟಿಯಿಂದ, ತಂದೆ-ತಾಯಿ ಹಿತದೃಷ್ಟಿಯಿಂದ ಸಮಾಜದ ಹಿತದೃಷ್ಟಿಯಿಂದ ಒಂದಾಗಿರಬೇಕು, ವಯಸ್ಸು ಪುನಃ ಬರುವುದಿಲ್ಲ, ಸಮಯ ಕಳೆದುಹೋಗುತ್ತದೆ. ಇಂದಿನ ಚಿಕ್ಕ ತಪ್ಪಿಗೆ ಮುಂದೆ ಭಾರೀ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ, ಪ್ರಧಾನ ಕೌಟುಂಬಿಕ ನ್ಯಾಯಾಧೀಶ ಮುನಿರಾಜ, 1ನೇ ಅಧಿಕ ಪ್ರಧಾನ ಕೌಟುಂಬಿಕ ನ್ಯಾಯಾಧೀಶ ಜಯಪ್ರಕಾಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ಮತ್ತು ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

 

About The Author

You May Also Like

More From Author

+ There are no comments

Add yours