ತುಮಕೂರಿಗೆ ಕೇಂದ್ರದ ಮತ್ತೊಂದು‌ ಕೊಡುಗೆ; 100 ಹಾಸಿಗೆಗಳ ESIC ಆಸ್ಪತ್ರೆ ಮಂಜೂರು

1 min read

Tumkurnews
ತುಮಕೂರು; ನಗರಕ್ಕೆ ಕಾರ್ಮಿಕರ ಮತ್ತು ಇತರೆ ಶ್ರಮಿಕ ವರ್ಗದವರ ಹಿತದೃಷ್ಟಿಯಿಂದ 100 ಹಾಸಿಗೆಗಳ ಇ.ಎಸ್.ಐ.ಸಿ ಆಸ್ಪತ್ರೆಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ ಎಂದು ಸಂಸದ ಜಿ.ಎಸ್ ಬಸವರಾಜ್ ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 111 ಬಾಲೆಯರಿಗೆ ಕಂಕಣ ಕಂಟಕ!
ಆಸ್ಪತ್ರೆ ಮಂಜೂರು ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಸಮರ್ಪಿಸುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ. ಕೋವಿಡ್‍ನಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸಿದ ನಂತರ ಕಳೆದ ಒಂದು ವರ್ಷದಿಂದ ಈ ಆಸ್ಪತ್ರೆಯನ್ನು ನಮ್ಮ ಜಿಲ್ಲೆಗೆ ಮಂಜೂರು ಮಾಡಬೇಕೆಂಬ ಬೇಡಿಕೆಯನ್ನ ಕೇಂದ್ರ ಸರ್ಕಾರದ ಮುಂದೆ ಇಟ್ಟಿದ್ದೆವು. ಇಂದು ತುಮಕೂರು ಜಿಲ್ಲೆಗೆ ಮಂಜೂರು ಮಾಡಿರುವಂತದ್ದು ನಮಗೆ ಸಂತಸ ತಂದಿದೆ. ಶ್ರಮಿಕ ಮತ್ತು ಕಾರ್ಮಿಕ ವರ್ಗದವರ ಮೇಲೆ ನರೇಂದ್ರ ಮೋದಿಯವರು ಹಾಗೂ ಕೇಂದ್ರ ಸರ್ಕಾರದ ವಿಶೇಷ ಕಾಳಜಿಯನ್ನ ಸ್ಪಷ್ಟಪಡಿಸುತ್ತದೆ ಎಂದು ಸಂಸದ ಜಿ.ಎಸ್ ಬಸವರಾಜ್ ತಿಳಿಸಿದ್ದಾರೆ.

IBPS; 6035 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

About The Author

You May Also Like

More From Author

+ There are no comments

Add yours