ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ವ್ಯಕ್ತಿ ಸಾವು
Tumkurnews
ತುಮಕೂರು: ಕೋರ ಪೊಲೀಸ್ ಠಾಣೆ ವ್ಯಾಪ್ತಿ ಬೆಳ್ಳಾವಿ ಕ್ರಾಸ್ ಹತ್ತಿರ ವಯೋ ಸಹಜ ಕಾಯಿಲೆಯಿಂದ ನರಳಿ ಚರಂಡಿಯಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದ ಸುಮಾರು 60 ವರ್ಷದ ವೃದ್ಧನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜುಲೈ 10ರಂದು ಮೃತಪಟ್ಟಿರುತ್ತಾನೆ.
ತುಮಕೂರು: ಹೇಮಾವತಿ ನಾಲೆಗೆ ನೀರು: ಸಾರ್ವಜನಿಕರಿಗೆ ಡಿಸಿ ಮನವಿ
ಮೃತನು 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈನ ಮೊಣಕೈ ಮೇಲೆ ಆಂಜನೇಯ ದೇವರ ಚಿತ್ರದ ಹಚ್ಚೆ ಗುರುತು ಇರುತ್ತದೆ.
ಮೃತನ ಮೈಮೇಲೆ ಕಪ್ಪು ಕೆಂಪು ಗೆರೆಗಳುಳ್ಳ ಚೆಕ್ಸ್ ಷರ್ಟ್, ನೀಲಿ ಬಣ್ಣದ ಪ್ಯಾಂಟ್ ಇರುತ್ತದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಮೊ.ಸಂ.9480802900-20-31-49ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಮನವಿ ಮಾಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ: ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಸ್ಥಾಪನೆ
+ There are no comments
Add yours