ಶಿಷ್ಯ ವೇತನಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
Tumkurnews
ತುಮಕೂರು: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಗಳಲ್ಲಿ 1ನೇ ತರಗತಿಯಿಂದ ಅಂತಿಮ ವರ್ಷದ ಪದವಿ, ಡಿಪ್ಲೋಮಾ ಹಾಗೂ ವೃತ್ತಿಪರ ಪದವಿ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯ ವೇತನ ಸೌಲಭ್ಯ ಕಲ್ಪಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಉಚಿತ ಲ್ಯಾಪ್ ಟಾಪ್’ಗೆ ಅರ್ಜಿ ಆಹ್ವಾನ
ಕರ್ನಾಟಕದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ (ಅಧಿಕಾರಿಗಳನ್ನು ಹೊರತು ಪಡಿಸಿ) ಮಕ್ಕಳು, ಪಿಂಚಣಿ ಇಲ್ಲದ ರಾಜ್ಯದ ಹಾಗೂ ಪಿಂಚಣಿ ಪಡೆಯುತ್ತಿರುವ ಹೊರ ರಾಜ್ಯದ ಮಾಜಿ ಸೈನಿಕರ ಮಕ್ಕಳು ಶಿಷ್ಯವೇತನ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸುವ 1 ರಿಂದ ಅಂತಿಮ ವರ್ಷದ ಪದವಿ, ಡಿಪ್ಲೋಮ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ಸೆಪ್ಟೆಂಬರ್ 30 ಹಾಗೂ ವೃತ್ತಿಪರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ಅಕ್ಟೋಬರ್ 31ರೊಳಗಾಗಿ ಅರ್ಜಿ ಸಲ್ಲಿಸಬಹುದು. ಕೇಂದ್ರೀಯ ಸೈನಿಕ ಮಂಡಳಿಯಿಂದ ವಿದ್ಯಾಭ್ಯಾಸ ಅನುದಾನ ಪಡೆಯುವ ಮಾಜಿ ಸೈನಿಕರ ಮಕ್ಕಳಿಗೆ ಈ ಶಿಷ್ಯವೇತನ ಪಡೆಯಲು ಅರ್ಹರಿರುವುದಿಲ್ಲ. ಶಿಷ್ಯವೇತನಕ್ಕಾಗಿ ಸಲ್ಲಿಸುವ ಅರ್ಜಿಯೊಂದಿಗೆ ಸಂಬಂಧಪಟ್ಟ ಮಾಜಿ ಸೈನಿಕರ ಮಕ್ಕಳ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಪ್ರತಿಯನ್ನು ಲಗತ್ತಿಸಬೇಕು.
ತುಮಕೂರು ವಿವಿ: ಉಳಿದ ಸೀಟುಗಳಿಗೆ ಅರ್ಜಿ ಆಹ್ವಾನ
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-25588718ನ್ನು ಸಂಪರ್ಕಿಸಬೇಕೆಂದು ಬೆಂಗಳೂರು ಗ್ರಾಮಾಂತರ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರಾ: ಜಿಲ್ಲಾಧಿಕಾರಿ ಶುಭಕಲ್ಯಾಣ್ ಅನಿರೀಕ್ಷಿತ ಭೇಟಿ: ಅಧಿಕಾರಿಗಳು ತಬ್ಬಿಬ್ಬು
+ There are no comments
Add yours