ತುಮಕೂರು ವಿವಿ: ಉಳಿದ ಸೀಟುಗಳಿಗೆ ಅರ್ಜಿ ಆಹ್ವಾನ
Tumkurnews
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ 2024-25ನೇ ಶೈಕ್ಷಣಿಕ ಸಾಲಿಗಾಗಿ ಪ್ರಥಮ ಬಿ.ಎಸ್ಸಿ, ಬಿ.ಎಸ್ಸಿ ಎಲೆಕ್ಟ್ರ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಬಿ.ಸಿ.ಎ ಹಾಗೂ ಬಿ.ಸಿ.ಎ ಡಾಟಾಸೈನ್ಸ್ ಮತ್ತು ಬಿ.ವೋಕ್ ಕೋರ್ಸ್’ಗಳ ಪ್ರವೇಶಾತಿಗಾಗಿ ಮೊದಲ ಸುತ್ತಿನ ಕೌನ್ಸಿಲಿಂಗ್ ನಂತರ ಉಳಿದಿರುವ ಸೀಟುಗಳ ಎರಡನೇ ಸುತ್ತಿನ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಕಾಲೇಜಿನ ಜಾಲತಾಣ: www.ucst.ac.in ನಿಂದ ಡೌನ್‍ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಾಲೇಜಿನ ಕಚೇರಿಗೆ ಸಲ್ಲಿಸಬೇಕು.
ತುಮಕೂರು: ಅಟ್ಟಿಕಾ ಬಾಬು ಬಂಧನ: ಕೇಸ್ ಏನು ಗೊತ್ತೇ?
ಎರಡನೇ ಸುತ್ತಿನ ಕೌನ್ಸಿಲಿಂಗ್ ಪ್ರಕ್ರಿಯೆಯು ಜುಲೈ 5ರಂದು ನಡೆಯಲಿದ್ದು, ಮೊದಲನೇ ಸುತ್ತಿನ ಕೌನ್ಸಿಲಿಂಗ್‍ಗೆ ಹಾಜರಾಗಿ ಸೀಟು ಸಿಗದೇ ಇರುವ ವಿದ್ಯಾರ್ಥಿಗಳು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅಗತ್ಯ ಮೂಲ ದಾಖಲೆಗಳೊಂದಿಗೆ ಈ ಕೌನ್ಸಿಲಿಂಗ್ ಪ್ರಕ್ರಿಯೆಗೆ ಹಾಜರಾಗಬಹುದಾಗಿದೆ ಎಂದು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಯು ಸೇನೆಯಲ್ಲಿ ಅಗ್ನಿವೀರ್: ವಾಯು ಹುದ್ದೆಗೆ ಅರ್ಜಿ ಆಹ್ವಾನ
+ There are no comments
Add yours